Site icon Vistara News

Startup Investment : ಡ್ರಿಂಕ್​​ಪ್ರೈಮ್​ ವಿಸ್ತರಣಾ ಯೋಜನೆಯಲ್ಲಿ ಎಸ್​​ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ

Startup Investment

ಬೆಂಗಳೂರು: ಭಾರತದ 30 ವರ್ಷಗಳಷ್ಟು ಹಳೆಯದಾದ ವಾಟರ್ ಪ್ಯೂರಿಫೈಯರ್ ಉದ್ಯಮವಾಗಿರುವ ಡ್ರಿಂಕ್​​ಪ್ರೈಮ್​ನಲ್ಲಿ (DrinkPrime) ಹೂಡಿಕೆ ನಿರ್ವಹಣಾ ಕಂಪನಿಯಾದ ಎಸ್ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ (SVCL) ಹೂಡಿಕೆ ಮಾಡಿದೆ (Startup Investment). ಎಸ್​ವಿಸಿಎಲ್​ ಎಸ್​​ಐಡಿಬಿಐನ (SIDBI) ಸಂಪೂರ್ಣ ಸ್ವಾಮ್ಯದ ಹಣಕಾಸು ಸಂಸ್ಥೆಯಾಗಿದ್ದು ಭಾರತದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ (MSME) ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ಹೂಡಿಕೆದಾರರೊಂದಿಗೆ ಎಸ್​ವಿಸಿಎಲ್ , ಡ್ರಿಂಕ್​​ ಪ್ರೈಮ್ ಗೆ ಆರ್ಥಿಕ ಬೆಂಬ ನೀಡುವ ಮೂಲಕ ಬ್ರಾಂಡ್ ನ ಸಾಮರ್ಥ್ಯ ಮತ್ತು ಮಾರುಕಟ್ಟೆ ಮೌಲ್ಯದ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಎಸ್ ವಿಸಿಎಲ್ ಮತ್ತು ಅಸ್ತಿತ್ವದಲ್ಲಿರುವ ಹೂಡಿಕೆದಾರರಿಂದ ಮೂಲಕ ಕಾರ್ಯತಂತ್ರದ ಹೂಡಿಕೆಭಾಗವಾಗಿ 3 ಮಿಲಿಯನ್ ಡಾಲರ್​ (25,04,88,900.00 ರೂಪಾಯಿ) ಸಂಗ್ರಹಿಸಲಾಗಿದೆ.

“ಎಸ್ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ನಮ್ಮ ದೀರ್ಘಕಾಲೀನ ಹೂಡಿಕೆದಾರರ ಗುಂಪಿಗೆ ಸೇರಲು ನಾವು ಉತ್ಸುಕರಾಗಿದ್ದೇವೆ. ನಮ್ಮ ಮೇಲಿನ ಅವರ ನಂಬಿಕೆಯು ಕುಡಿಯುವ ನೀರಿನ ಉದ್ಯಮದಲ್ಲಿ ಡ್ರಿಂಕ್​ಪ್ರೈಮ್ ನ ಆವಿಷ್ಕಾರಕ್ಕೆ ಲಭಿಸಿದ ಬಲಿಷ್ಠ ಬೆಂಬಲವಾಗಿದೆ. ನಮ್ಮ ಅಸಾಧಾರಣ ಬೆಳವಣಿಗೆಯ ಯಾನದಲ್ಲಿ ನಂಬಿಕೆಯೂ ಆಗಿದೆ. 2021 ರಿಂದ 2023 ರವರೆಗೆ, ನಾವು ಗಮನಾರ್ಹವಾದ 3 ಪಟ್ಟು ಬೆಳವಣಿಗೆ ಸಾಧಿಸಿದ್ದೇವೆ. ಕಾರ್ಯತಂತ್ರದ ಹೂಡಿಕೆಯು ವ್ಯವಹಾರ ವಿಸ್ತರಣೆಗೆ ಅವಕಾಶ ಒದಗಿಸುತ್ತದೆ” ಎಂದು ಡ್ರಿಂಕ್ ಪ್ರೈಮ್ ಸಹ ಸಂಸ್ಥಾಪಕ ಮತ್ತು ಸಿಇಒ ವಿಜೇಂದರ್ ರೆಡ್ಡಿ ಮುತ್ಯಾಲ ಹೇಳಿದರು.

ಎಸ್ ವಿಸಿಎಲ್ ಸಂಸ್ಥೆಯು ಡ್ರಿಂಕ್​​​ ಪ್ರೈಮ್ ನಲ್ಲಿ ಮಾಡಿರುವ ಹೂಡಿಕೆಯು ಉದ್ಯಮಶೀಲತೆಯನ್ನು ಉತ್ತೇಜಿಸುವ ಮತ್ತು ಭಾರತದಾದ್ಯಂತ ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿರುವ ಧ್ಯೇಯವನ್ನು ಹೊಂದಿದೆ. ಈ ಪಾಲುದಾರಿಕೆಯು ನಿರ್ಣಾಯಕ ಸಾಮಾಜಿಕ ಸವಾಲುಗಳನ್ನು ಪರಿಹರಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವ ವಿನೂತನ ಸ್ಟಾರ್ಟ್​​ಅಪ್​ಗಳನ್ನು ಬೆಂಬಲಿಸುವ ಬದ್ಧತೆಯ ಪ್ರತೀಕವಾಗಿದೆ ಎಂದು ವಿಜೇಂದರ್ ರೆಡ್ಡಿ ಅವು ಹೇಳಿದರು.

“ನಾವು ಡ್ರಿಂಕ್​​ ಪ್ರೈಮ್ ತಂಡದೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದೇವೆ ಮತ್ತು ಅದನ್ನು ಭಾರತದ ಪ್ರಮುಖ ವಾಟರ್ ಟೆಕ್ ಬ್ರಾಂಡ್ ಆಗಿ ಮಾಡಲು ಪ್ರಯತ್ನಿಸುತ್ತೇವೆ, ಅದೇ ಸಮಯದಲ್ಲಿ ಅದರ ನಾವಿನ್ಯ ಕೊಡುಗೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸಲಿದ್ದೇವೆ. ಎಲ್ಲರಿಗೂ ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಕುಡಿಯುವ ನೀರನ್ನು ಒದಗಿಸುವ ಧ್ಯೇಯವನ್ನು ಡ್ರಿಂಕ್ ಪ್ರೈಮ್ ವಿಸ್ತರಿಸಲಿದೆ ಮತ್ತು ಆ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತದೆ ಎಂದು ಖಚಿತಪಡಿಸಿಕೊಂಡಿದ್ದೆವೆ. ನಾವು ಯೋಜನೆಯನ್ನು ನಂಬುತ್ತೇವೆ ಮತ್ತು ವರ್ಷಗಳಲ್ಲಿ ಡ್ರಿಂಕ್​ ಪ್ರೈಮ್​ ಬೆಳವಣಿಗೆ ಗಮನಿಸಿದ್ದೇವೆ. ಈಗ, ನಾವು ಡ್ರಿಂಕ್ ಪ್ರೈಮ್ ನ ತ್ವರಿತ ಬೆಳವಣಿಗೆಯನ್ನು ಎದುರು ನೋಡುತ್ತಿದ್ದೇವೆ ” ಎಂದು ಎಸ್ ಐಡಿಬಿಐ ವೆಂಚರ್ ಕ್ಯಾಪಿಟಲ್ ಲಿಮಿಟೆಡ್ ನ ಹಿರಿಯ ಫಂಡ್ ಮ್ಯಾನೇಜರ್ ದೇಬ್ರಾಜ್ ಬ್ಯಾನರ್ಜಿ ಹೇಳಿದರು.

ಇದನ್ನೂ ಓದಿ: Gold Rate Today: ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ, ಮತ್ತೆ ಚಿನ್ನದ ಮಾರುಕಟ್ಟೆಯಲ್ಲಿ ತುರುಸು; ದರಗಳು ಹೀಗಿವೆ

ಹೂಡಿಕೆಯನ್ನು ಬಳಸಿಕೊಳ್ಳುವ ಬಗ್ಗೆ ಮಾತನಾಡಿದ ಡ್ರಿಂಕ್ ಪ್ರೈಮ್ ನ ಸಹ-ಸಂಸ್ಥಾಪಕ ಮತ್ತು ಸಿಒಒ ಮಾನಸ್ ರಂಜನ್ ಹೋಟಾ, “ಈ ಕಾರ್ಯತಂತ್ರದ ಹೂಡಿಕೆಯು ವಿಸ್ತರಣಾ ಯೋಜನೆಗಳ ವೇಗವನ್ನು ದ್ವಿಗುಣಗೊಳಿಸಲು, ನಮ್ಮ ನವೀನ ಉತ್ಪನ್ನಗಳ ಪೋರ್ಟ್ ಫೋಲಿಯೊವನ್ನು ಅಭಿವೃದ್ಧಿಪಡಿಸಲು ನೆರವಾಗಲಿದೆ. ಅದೇ ರೀತಿ ನಮ್ಮ ಉದ್ಯಮದ ಪ್ರಮುಖ ಮತ್ತು ಉದ್ಯಮದ ಜೀವಾಳವಾಗಿರುವ ಇಂಟರ್ನೆಟ್ ಆಫ್ ಥಿಂಗ್ಸ್ (ಐಒಟಿ) ವೈಶಿಷ್ಟ್ಯವನ್ನು ಬಲಪಡಿಸಲು ಡ್ರಿಂಕ್ ಪ್ರೈಮ್ ಗೆ ವಿಪುಲ ಅವಕಾಶ ನೀಡುತ್ತದೆ” ಎಂದು ಹೇಳಿದರು.

ಡ್ರಿಂಕ್ ಪ್ರೈಮ್ ನಲ್ಲಿ ದೀರ್ಘಕಾಲೀನ ಹೂಡಿಕೆದಾರರು ಹೊಂದಿರುವ ನಂಬಿಕೆ ಮತ್ತು ಸ್ಟಾರ್ಟ್ ಅಪ್ ನ ಸಾಮರ್ಥ್ಯ ಅಪೂರ್ವವಾಗಿದೆ. “ಡ್ರಿಂಕ್ ಪ್ರೈಮ್ ಕಳೆದ ಎಂಟು ವರ್ಷಗಳಿಂದ ಭಾರತದ ನೀರು ಶುದ್ಧೀಕರಣ ಮಾರುಕಟ್ಟೆಯನ್ನು ಆಳುತ್ತಿದೆ ದಶಕಗಳಿಂದ ಸ್ಥಗಿತಗೊಂಡಿದ್ದ ಉದ್ಯಮದಲ್ಲಿ ಅವರು ಅನ್ವೇಷಣೆ, ಆವಿಷ್ಕಾರ ಮತ್ತು ಬದಲಾವಣೆಯನ್ನು ಸೃಷ್ಟಿಸುವುದನ್ನು ನಾನು ನೋಡಿದ್ದೇನೆ. ಅದಕ್ಕಾಗಿಯೇ ನಾನು ಡ್ರಿಂಕ್​ಪ್ರೈಮ್​ನಲ್ಲಿ ಮರುಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್​​ನ ಕಾರ್ಯನಿರ್ವಾಹಕ ನಿರ್ದೇಶಕ ಭರತ್ ಜೈಸಿಂಘಾನಿ ಹೇಳಿದ್ದಾರೆ.

ಡ್ರಿಂಕ್ ಪ್ರೈಮ್ ಪ್ರಸ್ತುತ ಭಾರತದ ಏಳು ನಗರಗಳಲ್ಲಿ 2 ಲಕ್ಷಕ್ಕೂ ಹೆಚ್ಚು + ಕುಟುಂಬಗಳಿಗೆ ಶುದ್ಧ, ಸುರಕ್ಷಿತ ಮತ್ತು ಆರೋಗ್ಯಕರ ಕುಡಿಯುವ ನೀರಿನ ಲಭ್ಯತೆ ನೀಡಿದೆ. ಎಲ್ಲರಿಗೂ ಸುರಕ್ಷಿತ ಕುಡಿಯುವ ನೀರು ಲಭ್ಯವಾಗುವಂತೆ ಮಾಡುವ ತನ್ನ ಧ್ಯೇಯಕ್ಕೆ ಹತ್ತಿರವಾಗಲು ವಿಸ್ತರಣಾ ಯೋಜನೆಗಳು ಜಾರಿಯಲ್ಲಿರುವುದರಿಂದ, ಡ್ರಿಂಕ್ ಪ್ರೈಮ್ ತನ್ನ ಎರಡನೇ ಹಂತದ ನಿಧಿಸಂಗ್ರಹಕ್ಕೆ ಸಜ್ಜಾಗುತ್ತಿದೆ.

Exit mobile version