Site icon Vistara News

Small saving schemes : ಜುಲೈ-ಸೆಪ್ಟೆಂಬರ್‌ಗೆ ಈ ಅಂಚೆ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳ

cash

ನವ ದೆಹಲಿ: ಸರ್ಕಾರ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಜುಲೈ-ಸೆಪ್ಟೆಂಬರ್‌ ಅವಧಿಗೆ 0.30% ತನಕ ಹೆಚ್ಚಿಸಿದೆ. (Small saving schemes) ಸಣ್ಣ ಉಳಿತಾಯಗಾರರಿಗೆ ಇದರಿಂದ ಅನುಕೂಲವಾಗಲಿದೆ. ಅಂಚೆ ಇಲಾಖೆಯಲ್ಲಿ 1-2 ವರ್ಷ ಅವಧಿಯ ಟೈಮ್‌ ಡೆಪಾಸಿಟ್‌, 5 ವರ್ಷ ಅವಧಿಯ ರಿಕರಿಂಗ್‌ ಡೆಪಾಸಿಟ್‌ ಬಡ್ಡಿ ದರ ಏರಿಕೆಯಾಗಿದೆ. ಸಾರ್ವಜನಿಕ ಭವಿಷ್ಯನಿಧಿ (public provident fund) ಬಡ್ಡಿ ದರ 7.1% ರ ಯಥಾಸ್ಥಿತಿಯಲ್ಲಿದೆ. 2023-24ರ ನಾನಾ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ವಿವರ ಇಂತಿದೆ.

ಅಂಚೆ ಇಲಾಖೆ ಉಳಿತಾಯ ಯೋಜನೆ ಬಡ್ಡಿ ದರ, ಜುಲೈ-ಸೆಪ್ಟೆಂಬರ್
ಸ್ಕೀಮ್ಬಡ್ಡಿ ದರ (%)
1.4.2023-30.6.2023
1.7.2023-30.9.2023
ಉಳಿತಾಯ ಠೇವಣಿ44
1 ವರ್ಷದ ಡೆಪಾಸಿಟ್‌6.86.9
‌2 ವರ್ಷದ ಡೆಪಾಸಿಟ್6.96.9
‌3 ವರ್ಷದ ಡೆಪಾಸಿಟ್77
5‌ ವರ್ಷದ ಟೈಮ್ ಡೆಪಾಸಿಟ್7.57.5
5 ವರ್ಷ ರಿಕರಿಂಗ್‌ ಡೆಪಾಸಿಟ್‌6.26.5
ಹಿರಿಯ ನಾಗರಿಕರ ಉಳಿತಾಯ ಯೋಜನೆ8.28.2
ಮಾಸಿಕ ಆದಾಯ ಯೋಜನೆ7.47.4
ನ್ಯಾಶನಲ್‌ ಸೇವಿಂಗ್ಸ್‌ ಸರ್ಟಿಫಿಕೇಟ್7.77.7
ಸಾರ್ವಜನಿಕ ಭವಿಷ್ಯನಿಧಿ ಯೋಜನೆ7.17.1
ಕಿಸಾನ್‌ ವಿಕಾಸ್‌ ಪತ್ರ7.57.5
ಸುಕನ್ಯಾ ಸಮೃದ್ಧಿ ಖಾತೆ88

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಸರ್ಕಾರವು ಸರಕಾರಿ ಸಾಲಪತ್ರಗಳಲ್ಲಿ ಸಿಗುವ ಆದಾಯದ ಆಧಾರದಲ್ಲಿ ನಿಗದಿಪಡಿಸುತ್ತದೆ. ಐದು ವರ್ಷ ಅವಧಿಯ ಸರ್ಕಾರಿ ಬಾಂಡ್‌ಗಳ ಆದಾಯ 0.30% ಏರಿಕೆಯಾಗಿದ್ದು, 10 ವರ್ಷ ಅವಧಿಯ ಬಾಂಡ್‌ ಆದಾಯ 0.20% ಏರಿಕೆಯಾಗಿದೆ. ಹೀಗಾಗಿ ಬಡ್ಡಿ ದರ ಏರಿಕೆಯನ್ನು ನಿರೀಕ್ಷಿಸಲಾಗಿತ್ತು. ಶ್ಯಾಮಲಾ ಗೋಪಿನಾಥ್‌ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಲಾಗುತ್ತದೆ. ಸರ್ಕಾರ ಕಳೆದ ಸಲ 2023ರ ಏಪ್ರಿಲ್-ಜೂನ್‌ ಅವಧಿಯಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವನ್ನು ಏರಿಸಿತ್ತು.

ಇದನ್ನೂ ಓದಿ: Milage Scooters in India : ಪೆಟ್ರೋಲ್​ ಉಳಿತಾಯ ಮಾಡುವ ಕೆಲವು ಸ್ಕೂಟರ್​​ಗಳು

ಹಣಕಾಸು ಸಚಿವಾಲಯವು ಸಣ್ಣ ಉಳಿತಾಯ ಯೋಜನೆಗಳಲ್ಲಿನ (PPF Investment ) ಹೂಡಿಕೆ ಕುರಿತ ಕೆವೈಸಿ (KYC) ನಿಯಮಾವಳಿಗಳನ್ನು ಸಡಿಲಗೊಳಿಸಲು ಮುಂದಾಗಿದೆ. ಪ್ಯಾನ್‌ ಬದಲಿಗೆ ಆಧಾರ್‌ ಕಾರ್ಡ್‌ ಅನ್ನು ದಾಖಲೆಯಾಗಿಟ್ಟುಕೊಂಡು ಈ ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲೂ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಹೆಚ್ಚುವ ನಿರೀಕ್ಷೆ ಇದೆ. (small savings schemes)

ಕೆವೈಸಿ ನಿಯಮ ಸಡಿಲಗೊಳಿಸುವ ಭಾಗವಾಗಿ ಮೂರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮೊದಲನೆಯದಾಗಿ ಪ್ಯಾನ್‌ ಕಾರ್ಡ್‌ ಬದಲು ಆಧಾರ್‌ ಬಳಸಿಯೂ ಹೂಡಿಕೆಯನ್ನು ಮಾಡಬಹುದು. ಏಕೆಂದರೆ ಭಾರತದಲ್ಲಿ ಪ್ಯಾನ್‌ ಕಾರ್ಡ್‌ ಬಳಕೆದಾರರಿಗಿಂತ ಹೆಚ್ಚು ಆಧಾರ್‌ ಕಾರ್ಡ್‌ದಾರರು ಇದ್ದಾರೆ. ಈ ನೀತಿ ಸಡಿಲಗೊಳಿಸುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಠೇವಣಿಗಳು ಲಭಿಸುವ ಸಾಧ್ಯತೆ ಇದೆ.

ಎರಡನೆಯದಾಗಿ ಯಾವುದೇ ವಿವಾದ ಇಲ್ಲದೆ ಮೃತಪಟ್ಟಿರುವ ಠೇವಣಿದಾರರ ಹಣವನ್ನು ಅವರ ಉತ್ತರಾಧಿಕಾರಿಗಳಿಗೆ ಸರಾಗವಾಗಿ ಹಸ್ತಾಂತರಿಸಲು ಪ್ರಕ್ರಿಯೆ ಸುಗಮವಾಗಲಿದೆ. ಮೂರನೆಯದಾಗಿ ನಾಮಿನೇಶನ್‌ ಪ್ರಕ್ರಿಯೆ ಸರಳವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೂಡಿಕೆಯ ಕೆವೈಸಿ ನಿಯಮಗಳನ್ನು ಸಡಿಲಗೊಳಿಸುವುದರಿಂದ ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗೆ (National small savings fund) ಹೂಡಿಕೆಯ ಹರಿವು ಹೆಚ್ಚಲಿದೆ. ಸಾರ್ವಜನಿಕ ಭವಿಷ್ಯನಿಧಿ, ಸುಕನ್ಯಾಸಮೃದ್ಧಿ, ಎನ್‌ಎಸ್‌ಸಿ ಇತ್ಯಾದಿಗಳು ಸಣ್ಣ ಉಳಿತಾಯ ಯೋಜನೆಗಳಾಗಿವೆ.

Exit mobile version