Site icon Vistara News

Smallcase : ಹೊಸ ಮ್ಯೂಚುವಲ್‌ ಫಂಡ್‌ ಯೋಜನೆಗೆ ಜೆರೋಧಾ ಜತೆ ಕೈ ಜೋಡಿಸಿದ ಸ್ಮಾಲ್‌ಕೇಸ್

mutual fund

ಬೆಂಗಳೂರು: ಆನ್‌ಲೈನ್‌ ಬ್ರೋಕರೇಜ್‌ ವಲಯದಲ್ಲಿ ಮುಂಚೂಣಿಯಲ್ಲಿರುವ ಜೆರೋಧಾ ಮ್ಯೂಚುವಲ್‌ ಫಂಡ್‌ (ಎಎಂಸಿ) ಬಿಡುಗಡೆಗೆ ಸಜ್ಜಾಗುತ್ತಿದ್ದು, ಈ ಯೋಜನೆಯಲ್ಲಿ ಬೆಂಗಳೂರು ಮೂಲದ ನೂತನ ಫಿನ್‌ ಟೆಕ್‌ ಕಂಪನಿ ಸ್ಮಾಲ್‌ ಕೇಸ್‌ (Smallcase) ಕೈಜೋಡಿಸಲಿದೆ.

ಸ್ಮಾಲ್‌ಕೇಸ್‌ ಮ್ಯೂಚುವಲ್‌ ಫಂಡ್‌ ಸೇರಿದಂತೆ ಆಧುನಿಕ ಹಣಕಾಸು ಸಾಧನಗಳಲ್ಲಿ ಹೂಡಿಕೆ ಮಾಡಲು ಜನತೆಗೆ ಸಹಕರಿಸುತ್ತದೆ. ಷೇರು, ಇಟಿಎಫ್‌ ಸೇರಿದಂತೆ ಈಕ್ವಿಟಿ ವಲಯದ ತಜ್ಞರ ನೆರವನ್ನು ನೀಡುತ್ತದೆ.

ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯಾದ ಸ್ಮಾಲ್‌ ಕೇಸ್‌, ಅಗ್ಗದ ವೆಚ್ಚದ ಪ್ಯಾಸಿವ್‌ ಮ್ಯೂಚುವಲ್‌ ಫಂಡ್‌ ಉತ್ಪನ್ನಗಳನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಜೆರೋಧಾದ ಜತೆಗೆ ಜಂಟಿ ಸಹಭಾಗಿತ್ವ ಮಾಡಿಕೊಂಡಿದೆ. (Joint venture) ಜೆರೋಧಾ ಬ್ರೋಕಿಂಗ್‌ ಲಿಮಿಟೆಡ್‌ 2021ರ ಸೆಪ್ಟೆಂಬರ್‌ನಲ್ಲಿ ಸೆಬಿಯಿಂದ ಎಎಂಸಿ ಸ್ಥಾಪನೆಗೆ ತಾತ್ವಿಕ ಅನುಮೋದನೆ ಪಡೆದಿತ್ತು.

ಜೆರೋಧಾದ ಜತೆ ಜಂಟಿ ಸಹಭಾಗಿತ್ವಕ್ಕೆ ನಾವು ಕಾತರರಾಗಿದ್ದೇವೆ. ಇದರಿಂದ ಮ್ಯೂಚುವಲ್‌ ಫಂಡ್‌ ವಲಯದಲ್ಲಿ ಹೂಡಿಕೆದಾರರಿಗೆ ಹೊಸ ಆಯ್ಕೆ ಲಭಿಸಲಿದೆ. ಕಳೆದ 6 ವರ್ಷಗಳಲ್ಲಿ ಸ್ಮಾಲ್‌ ಕೇಸ್‌ ಲಕ್ಷಾಂತರ ಡಿಮ್ಯಾಟ್‌ ಖಾತೆಗಳನ್ನು ತೆರೆಯಲು ಸಹಕರಿಸಿದೆ. ಮ್ಯೂಚುವಲ್‌ ಫಂಡ್‌ ವಲಯಕ್ಕೆ ಹೊಸ ಹೂಡಿಕೆದಾರರನ್ನು ಕರೆ ತಂದಿದೆ ಎಂದು ಸ್ಮಾಲ್‌ಕೇಸ್‌ ಸಂಸ್ಥಾಪಕ ವಸಂತ್‌ ಕಾಮತ್‌ ಟ್ವೀಟ್‌ ಮಾಡಿದ್ದಾರೆ. ಜೆರೋಧಾದ ನಿತಿನ್‌ ಕಾಮತ್‌ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

#image_title
Exit mobile version