ನವ ದೆಹಲಿ: ದೀಪಾವಳಿಯ ಬಳಿಕ ಸ್ಮಾರ್ಟ್‌ಫೋನ್‌ಗಳ (Smartphone) ದರದಲ್ಲಿ 5-7% ಏರಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಹೆಚ್ಚು ಮಾರಾಟವಾಗುವ ಬಜೆಟ್ ಹ್ಯಾಂಡ್‌ಸೆಟ್‌ಗಳ ದರದಲ್ಲಿ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ದರ ಹೆಚ್ಚಳ ಆಗಬಹುದು ಎಂದು ಅಂದಾಜಿಸಲಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ ಕೂಡ ದರ ಏರಿಕೆಗೆ ಕಾರಣಗಳಲ್ಲೊಂದು ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.
ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗೆ ಬಿಡಿಭಾಗಗಳ ಆಮದು ವೆಚ್ಚದಲ್ಲಿ ಏರಿಕೆಯಾಗಿದೆ. ಇದು ಕೂಡ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.