Site icon Vistara News

Smuggling watches : ಕೋಲ್ಕತಾ ಏರ್‌ಪೋರ್ಟ್‌ನಲ್ಲಿ 30 ಕೋಟಿ ರೂ. ಬೆಲೆಬಾಳುವ ವಾಚ್‌ಗಳ ಸ್ಮಗ್ಲಿಂಗ್

watch

ಮುಂಬಯಿ: ಕೋಲ್ಕತಾ ಏರ್‌ಪೋರ್ಟ್‌ನಲ್ಲಿ 30 ಕೋಟಿ ರೂ. ಬೆಲೆ ಬಾಳುವ ಹೈ ಎಂಡ್‌ ವಾಚ್‌ಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಕಂದಾಯ ವಿಚಕ್ಷಣ ದಳ ಅರೆಸ್ಟ್‌ ( Smuggling watches) ಮಾಡಿದೆ. ಗ್ರೂಬೆಲ್‌ ಫೋರ್ಸೆ ಬ್ರಾಂಡ್‌ನ ಲಕ್ಸುರಿ ವಾಚ್‌ಗಳನ್ನು ಸ್ಮಗ್ಲಿಂಗ್‌ ಮಾಡಲಾಗುತ್ತಿತ್ತು. ಆರೋಪಿಯ ಮನೆಯ ಮೇಲೆ ಬಳಿಕ ದಾಳಿ ನಡೆಸಲಾಯಿತು.

ಈ ಸಂದರ್ಭ 34 ಹೈ ಎಂಡ್‌ ವಾಚ್‌ಗಳನ್ನೂ ಜಪ್ತಿ ಮಾಡಲಾಯಿತು. ಇದರಲ್ಲಿ ಗ್ರೂಬೆಲ್‌ ಫರ್ಸೆ, ಪ್ರೂರ್ನೆಲ್‌, ಲೂಯಿಸ್‌ ವ್ಯೂಟ್ಟೋನ್‌, ಎಂಬಿ&ಎಫ್‌, ಮ್ಯಾಡ್‌, ರೊಲೆಕ್ಸ್‌, ಆಡ್‌ಮಾರ್ಸ್‌ ಪಿಗ್ಯುಯೆಟ್‌, ರಿಚರ್ಡ್‌ ಮಿಲ್ಲೇ ವಾಚುಗಳಿದ್ದವು.

ಬಹುತೇಕ ವಾಚುಗಳು ಲಿಮಿಟೆಡ್‌ ಎಡಿಶನ್‌ ವಾಚುಗಳಾಗಿದ್ದು, ದುಬಾರಿಯಾಗಿವೆ. ಇವುಗಳ ಒಟ್ಟು ಮಾರುಕಟೆ ಮೌಲ್ಯ 30 ಕೋಟಿ ರೂ.ಗೂ ಹೆಚ್ಚು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂದಾಯ ಇಲಾಖೆಯ ಮುಂಬಯಿ ವಿಭಾಗದ ವಿಚಕ್ಷಣ ದಳ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಯಾವುದೇ ಕಸ್ಟಮ್ಸ್‌ ಸುಂಕ ನೀಡದೆಯೇ ಈ ವಾಚುಗಳನ್ನು ಭಾರತದೊಳಕ್ಕೆ ಕಳ್ಳ ಸಾಗಣೆ ಮಾಡಲಾಗುತ್ತಿತ್ತು.

Exit mobile version