Site icon Vistara News

Startup investment| ಬೆಂಗಳೂರಿನ ಐಸ್ಟೆಮ್‌ನಲ್ಲಿ 51 ಕೋಟಿ ರೂ. ಹೂಡಿಕೆ

eyestem

ಬೆಂಗಳೂರು: ಬೆಂಗಳೂರು ಮೂಲದ ಸೆಲ್‌ ಥೆರಪಿ ಕಂಪನಿಯಾದ ಐಸ್ಟೆಮ್‌ ನಲ್ಲಿ (Eyestem) ಮೂರು ಔಷಧ ಕಂಪನಿಗಳು ೫೧ ಕೋಟಿ ರೂ. ಬಂಡವಾಳವನ್ನು ಹೂಡಿಕೆ ಮಾಡಿವೆ.

ಬಯೊಲಾಜಿಕಲ್‌ ಇ (ಬಿಇ), ಅಲ್ಕೆಮ್‌, ನ್ಯಾಟ್ಕೊ ಮತ್ತು ಕೆಮ್‌ವೆಲ್‌ ಬಯೊಫಾರ್ಮಾದ ಪ್ರವರ್ತಕರಾದ ಅನುರಾಗ್‌ ಮತ್ತು ಕರಣ್‌ ಬಗಾರಿಯಾ ಅವರು ಬಂಡವಾಳ ಹೂಡಿಕೆ ಮಾಡಿದ್ದಾರೆ.

ಹಾಲಿ ಹೂಡಿಕೆದಾರರಾದ ಎಂಡಿಯಾ ಪಾರ್ಟ್‌ನರ್ಸ್‌ ಮತ್ತು ಕೋಟಕ್‌ ಪ್ರೈವೇಟ್‌ ಈಕ್ವಿಟಿ ಕೂಡ ಈ ಸುತ್ತಿನಲ್ಲಿ ಭಾಗವಹಿಸಿವೆ. ಇದರೊಂದಿಗೆ ಸಂಸ್ಥೆಯ ಒಟ್ಟು ಮೌಲ್ಯ ೩೭೧ ಕೋಟಿ ರೂ.ಗೆ ಏರಿಕೆಯಾಗಿದೆ.

೨೦೧೬ರಲ್ಲಿ ಸ್ಥಾಪನೆಯಾದ ಐಸ್ಟೆಮ್‌, ಕ್ಲಿನಿಕಲ್‌ ಸಂಶೋಧನೆ, ಔಷಧ ಉತ್ಪಾದನೆ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದೆ.

Exit mobile version