Site icon Vistara News

ರಾಜ್ಯಗಳು ಪೆಟ್ರೋಲ್‌ , ಡೀಸೆಲ್ ದರದಲ್ಲಿ ಲೀಟರ್‌ಗೆ ಒಟ್ಟು 5 ರೂ. ಕಡಿತ ಮಾಡಬಹುದು ಎಂದ ಎಸ್‌ಬಿಐ ವರದಿ

petrol

ನವದೆಹಲಿ: ಕೇಂದ್ರ ಸರಕಾರ ಇತ್ತೀಚೆಗೆ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಬಳಿಕ ರಾಜ್ಯ ಸರಕಾರಗಳು ವ್ಯಾಟ್‌ ಅನ್ನು ತಗ್ಗಿಸಬಹುದಲ್ಲವೇ ಎಂಬ ಪ್ರಶ್ನೆ ಉಂಟಾಗಿದೆ. ಇದಕ್ಕೆ ಉತ್ತರಿಸಿರುವ ಎಸ್‌ಬಿಐ, ಪೆಟ್ರೋಲ್-ಡೀಸೆಲ್‌ ದರದಲ್ಲಿ ಲೀಟರ್‌ಗೆ ಒಟ್ಟು 5 ರೂ. ಇಳಿಸಲು ಅವಕಾಶ ಇದೆ ಎಂದು ತಿಳಿಸಿದೆ.

ತೈಲ ದರಗಳು ಉನ್ನತ ಮಟ್ಟದಲ್ಲಿ ಇದ್ದಾಗ ರಾಜ್ಯಗಳು ವ್ಯಾಟ್‌ ರೂಪದಲ್ಲಿ 49,229 ಕೋಟಿ ರೂ.ಗಳನ್ನು ಸಂಗ್ರಹಿಸಿವೆ. ಹೀಗಿದ್ದರೂ 5 ರೂ. ಇಳಿಸಿದರೆ ಅಬಕಾರಿ ಸುಂಕದ ಬಾಬ್ತು 15,021 ಕೋಟಿ ರೂ. ನಷ್ಟವಾಗಬಹುದು. ಹೀಗಾಗಿ 34,208 ಕೋಟಿ ರೂ. ಉಳಿಯುತ್ತದೆ. ಇದರ ನೆರವಿನಿಂದ ವ್ಯಾಟ್‌ನಲ್ಲಿ 5 ರೂ. ಕಡಿತಗೊಳಿಸಲು ಅವಕಾಶ ಇದೆ ಎಂದು ಎಸ್‌ಬಿಐ ಸಂಶೋಧನಾ ವರದಿ ತಿಳಿಸಿದೆ.

ರಾಜ್ಯಗಳು ಡೀಸೆಲ್‌ನಲ್ಲಿ ಲೀಟರ್‌ಗೆ 2 ರೂ. ಹಾಗೂ ಪೆಟ್ರೋಲ್‌ನಲ್ಲಿ 3 ರೂ. ಕಡಿತ ಮಾಡಲು ಅವಕಾಶ ಇದೆ ಎಂದು ಎಸ್‌ಬಿಐ ವರದಿ ತಿಳಿಸಿದೆ. ತೈಲ ದರಗಳು ಉನ್ನತ ಮಟ್ಟದಲ್ಲಿ ಇದ್ದಾಗ ಗಳಿಸಿರುವ ಹೆಚ್ಚುವರಿ ವ್ಯಾಟ್‌ನಿಂದಾಗಿ ಐದು ರೂ. ತನಕ ಕಡಿತಗೊಳಿಸಿದರೂ, ವಾರ್ಷಿಕ ಲೆಕ್ಕಾಚಾರದಲ್ಲಿ ವ್ಯಾಟ್‌ ಆದಾಯ ಸಂಗ್ರಹದ ಗುರಿಯಲ್ಲಿ ನಷ್ಟ ಆಗುವುದಿಲ್ಲ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ದೇಶಾದ್ಯಂತ 70,000 ಪೆಟ್ರೋಲ್ ಪಂಪ್‌ ಡೀಲರ್‌ಗಳಿಂದ ಸಾಂಕೇತಿಕ ಪ್ರತಿಭಟನೆ

Exit mobile version