Site icon Vistara News

Stock market crash Today : ಸೆನ್ಸೆಕ್ಸ್‌ 700 ಅಂಕ ಪತನ, ಜಾಗತಿಕ ಬ್ಯಾಂಕಿಂಗ್‌ ಬಿಕ್ಕಟ್ಟಿನ ಭೀತಿ

stock invest

ಮುಂಬಯಿ: ಭಾರತೀಯ ಷೇರು ಪೇಟೆ ಸೂಚ್ಯಂಕಗಳು ( Stock market crash Today) ಸೋಮವಾರ ಬೆಳಗ್ಗೆಯಿಂದಲೇ ಕುಸಿದಿವೆ. ಜಾಗತಿಕ ಬ್ಯಾಂಕಿಂಗ್‌ ಬಿಕ್ಕಟ್ಟು, ಸ್ವಿಜರ್ಲೆಂಡ್‌ ಮೂಲದ ಕ್ರೆಡಿಟ್‌ ಸ್ವೀಸ್‌ ಅನ್ನು ಯುಬಿಎಸ್‌ ಗ್ರೂಪ್‌ ಖರೀದಿಸಿರುವ ವಿದ್ಯಮಾನ ನಕಾರಾತ್ಮಕ ಪ್ರಭಾವ ಬೀರಿದೆ. ಎಲ್ಲ 13 ಪ್ರಮುಖ ವಲಯಾವಾರು ಸೂಚ್ಯಂಕಗಳು ಮುಗ್ಗರಿಸಿತು. ಮಧ್ಯಾಹ್ನ 11.20ರ ವೇಳೆಗೆ ಸೆನ್ಸೆಕ್ಸ್‌ (sensex) 556 ಅಂಕ ಕುಸಿದು 57,433ಕ್ಕೆ ಇಳಿಕೆಯಾದರೆ, ನಿಫ್ಟಿ 169 ಅಂಕ (nifty) ಕುಸಿದು 16,930 ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು.

ಅಮೆರಿಕ ಮತ್ತು ಯುರೋಪ್‌ನಲ್ಲಿ ಬ್ಯಾಂಕಿಂಗ್‌ ಬಿಕ್ಕಟ್ಟು ಸಂಭವಿಸಿದ್ದು, ಏಷ್ಯಾದ್ಯಂತ ಷೇರು ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿತು. ಬ್ಯಾಂಕಿಂಗ್‌, ಹಣಕಾಸು, ಐಟಿ ಷೇರುಗಳ ದರ ಇಳಿಯಿತು. ಇನ್ಫೋಸಿಸ್‌, ಟಿಸಿಎಸ್‌ ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ನಷ್ಟಕ್ಕೀಡಾಯಿತು.

ಕಳೆದ ಮೂರು ತಿಂಗಳುಗಳಿಂದ ನಿಫ್ಟಿ 50 ಇಂಡೆಕ್ಸ್‌ ತನ್ನ ಉನ್ನತ ಮಟ್ಟದಿಂದ 10% ಇಳಿಕೆ ದಾಖಲಿಸಿದೆ. 136 ಷೇರುಗಳು 52 ವಾರಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ. ಕನಿಷ್ಠ 51 ಷೇರುಗಳ ದರಗಳಲ್ಲಿ 20% ಇಳಿಕೆಯಾಗಿದೆ.

ಡಿಸೆಂಬರ್‌ 1ರಿಂದ 20% ಗೂ ಹೆಚ್ಚು ದರ ಕುಸಿತಕ್ಕೀಡಾಗಿರುವ ಷೇರುಗಳು:

ರೆಲಾಕ್ಸೊ ಫುಟ್‌ವೇರ್‌, ಜ್ಯುಬಿಲಿಯೆಂಟ್‌ ಫುಡ್‌ ವರ್ಕ್ಸ್‌, ಇಮಾಮಿ, ಬ್ಲೂ ಡಾರ್ಟ್‌ ಎಕ್ಸ್‌ಪ್ರೆಸ್‌, ಎಚ್‌ಎಲ್‌ಇ ಗ್ಲಾಸ್‌ಕೋಟ್‌, ಎಚ್‌ಡಿಎಫ್‌ಸಿ ಲೈಫ್‌ ಇನ್ಷೂರೆನ್ಸ್‌, ಸಿಪ್ಲಾ, ಸೆಂಟ್ರಲ್‌ ಡಿಪಾಸಿಟರಿ ಸರ್ವೀಸ್‌ (ಇಂಡಿಯಾ)

Exit mobile version