Site icon Vistara News

Stock Market : ಷೇರುಪೇಟೆಗೆ ಪ್ರವೇಶಿಸಿದ ಬೆಂಗಳೂರಿನ ಗ್ರೀನ್‌ಷೆಫ್‌ ಅಪ್ಲೈಯನ್ಸಸ್‌, ಷೇರು ದರ ಎಷ್ಟು?

NSE Building

ಬೆಂಗಳೂರು: ಬೆಂಗಳೂರು ಮೂಲದ ಗೃಹೋಪಯೋಗಿ ಉಪಕರಣಗಳ ಉತ್ಪಾದಕ ಗ್ರೀನ್‌ಷೆಫ್‌ ಅಪ್ಲೈಯನ್ಸ್‌ ಲಿಮಿಟೆಡ್‌ (Greenchef appliances) ಇತ್ತೀಚೆಗೆ ಷೇರು ಮಾರುಕಟ್ಟೆಯನ್ನು (Stock Market) ಐಪಿಒ ಮೂಲಕ ಪ್ರವೇಶಿಸಿದೆ. ಎನ್‌ಎಸ್‌ಇನಲ್ಲಿ 87 ರೂ.ಗೆ ಲಿಸ್ಟ್‌ ಆಗಿದ್ದ ಕಂಪನಿಯ ಷೇರು ದರ ಕಳೆದ ಗುರುವಾರ 104 ರೂ.ಗೆ ಏರಿಕೆ ದಾಖಲಿಸಿತ್ತು. ಅಂದರೆ 17 ರೂ. ಏರಿಕೆಯಾಯಿತು.

ಆರಂಭಿಕ ಷೇರು ಬಿಡುಗಡೆ ಅಥವಾ ಐಪಿಒ ಮೂಲಕ ಗ್ರೀನ್‌ ಷೆಫ್‌ ಕಂಪನಿಯು 54 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಸಾರ್ವಜನಿಕರಿಂದ ಷೇರು ಖರೀದಿಯ ಉತ್ಸಾಹ ಕಂಡು ಬಂದಿತು.

ಬೆಂಗಳೂರು ಮೂಲದ ಗ್ರೀನ್‌ಷೆಫ್‌ ಕಂಪನಿಯು ಬೆಂಗಳೂರಿನಲ್ಲಿ 3 ಹಾಗೂ ಹಿಮಾಚಲ ಪ್ರದೇಶದಲ್ಲಿ ಒಂದು ಘಟಕವನ್ನು ಒಳಗೊಂಡಿದೆ. ಮುಂಬರುಬ ದಿನಗಳಲ್ಲಿ ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ ಮೊದಲಾದ ರಾಜ್ಯಗಳಲ್ಲಿ ವಹಿವಾಟು ವಿಸ್ತರಿಸಲು ಉದ್ದೇಶಿಸಿದೆ.

ಗ್ರೀನ್‌ಷೆಫ್‌ ಮುಖ್ಯವಾಗಿ ಅಡುಗೆ ಉಪಕರಣಗಳನ್ನು ಉತ್ಪಾದಿಸುತ್ತದೆ. ಐಪಿಒ ಮೂಲಕ ಸಿಗುವ ಹಣವನ್ನು ತುಮಕೂರು ಸಮೀಪದ ವಸಂತ ನರಸಾಪುರದಲ್ಲಿನ ಕಾರ್ಖಾನೆಯ ವಿಸ್ತರಣೆಗೆ ಬಳಸಲಾಗುವುದು. 15 ಎಕರೆ ಜಾಗದಲ್ಲಿ 2 ಲಕ್ಷ ಚದರ ಅಡಿಯ ಸುಸಜ್ಜಿತ ಕಾರ್ಖಾನೆ ಅಸ್ತಿತ್ವಕ್ಕೆ ಬರುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್‌ ಜೈನ್‌ ತಿಳಿಸಿದ್ದಾರೆ.

ಇದನ್ನೂ ಓದಿ: Adani group : ಅದಾನಿ ಎಂಟರ್‌ಪ್ರೈಸಸ್‌ನ 1.8 ಕೋಟಿ ಷೇರು ಮಾರಿದ ಅದಾನಿ ಕುಟುಂಬ

ಗ್ರೀನ್‌ಷೆಫ್‌ ಕಂಪನಿಯು ಹಲವಾರು ಗೃಹೋಪಯೋಗಿ ಉಪಕರಣಗಳನ್ನು ತಯಾರಿಸುತ್ತಿದೆ. ಗ್ಯಾಸ್‌ ಸ್ಟೌವ್‌, ಮಿಕ್ಸರ್‌ ಗ್ರೈಂಡರ್‌, ರೈಸ್‌ ಕುಕ್ಕರ್‌, ವೆಟ್‌ ಗ್ರೈಂಡರ್‌, ಸ್ಟೈನ್‌ಲೆಸ್‌ ಸ್ಟೀಲ್‌ ಪಾತ್ರೆಗಳು ಇತರ ಉಪಕರಣಗಳನ್ನು ತಯಾರಿಸುತ್ತದೆ.

Exit mobile version