Site icon Vistara News

Sugar production : ಸಕ್ಕರೆ ದರದಲ್ಲಿ ಏರಿಕೆಯಾಗುವ ಸಾಧ್ಯತೆ, ಕಾರಣವೇನು?

Indian Government extends curbs on sugar export

ನವ ದೆಹಲಿ: ಭಾರತದ ಸಕ್ಕರೆ ಉತ್ಪಾದನೆ 2022-23ರಲ್ಲಿ 10% ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೈಗಾರಿಕಾ ಮಂಡಳಿ ನ್ಯಾಶನಲ್‌ ಫೆಡರೇಷನ್‌ ಆಫ್‌ ಕೋಪರೇಟಿವ್‌ ಶುಗರ್‌ ಫ್ಯಾಕ್ಟರೀಸ್‌ (Industry body National Federation of Co-operative Sugar factories) ವರದಿ ತಿಳಿಸಿದೆ. 2022-23ರಲ್ಲಿ ಸಕ್ಕರೆ ಉತ್ಪಾದನೆ 325 ಲಕ್ಷ ಟನ್‌ನಷ್ಟಿತ್ತು. 2021-22ರಲ್ಲಿ 359.25 ಲಕ್ಷ ಟನ್‌ ಉತ್ಪಾದನೆಯಾಗಿತ್ತು.

ಸೆಂಟ್ರುಮ್‌ ಇನ್‌ಸ್ಟಿಟ್ಯೂಷನಲ್‌ ರಿಸರ್ಚ್‌, ಉತ್ತರಪ್ರದೇಶದಲ್ಲಿ ಇತ್ತೀಚೆಗೆ ದರ ಏರಿಕೆಯಾಗಿರುವುದನ್ನು ಬಿಂಬಿಸಿದೆ. ಉತ್ಪಾದನೆ ಇಳಿಕೆಯಾದರೆ ಸಹಜವಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆಯಾಗದೆ ದರ ಏರಿಕೆಯಾಗುತ್ತದೆ.

ಕೇಂದ್ರ ಸರ್ಕಾರ ಹೆಚ್ಚುವರಿ ಸಕ್ಕರೆಯ ರಫ್ತಿಗೆ ಈ ವರ್ಷ ಅನುಮೋದನೆ ನೀಡುವ ಸಾಧ್ಯತೆ ಕ್ಷೀಣಿಸಿದೆ. ಆಹಾರ ಸಚಿವಾಲಯವು 2022-23ರ ಮಾರುಕಟ್ಟೆ ವರ್ಷದಲ್ಲಿ ( ಅಕ್ಟೋಬರ್-ಸೆಪ್ಟೆಂಬರ್) 60 ಲಕ್ಷ ಟನ್‌ ಸಕ್ಕರೆ ರಫ್ತಿಗೆ ಅನುಮತಿ ನೀಡಿತ್ತು.‌ ಇದುವರೆಗೆ 40 ಲಕ್ಷ ಟನ್‌ ಸಕ್ಕರೆ ರಫ್ತಾಗಿದೆ.

ಪ್ರಸಕ್ತ ಮಾರುಕಟ್ಟೆ ಸಾಲಿನಲ್ಲಿ 3.86 ಕೋಟಿ ಟನ್‌ ಸಕ್ಕರೆ ಉತ್ಪಾದನೆಯ ಗುರಿಯನ್ನು ಹೊಂದಲಾಗಿದೆ. ಆದರೆ ಉತ್ಪಾದನೆಯಲ್ಲಿ 2-3 ಲಕ್ಷ ಟನ್‌ ಇಳಿಕೆಯಾಗುವ ಸಾಧ್ಯತೆ ಇದೆ.

Exit mobile version