ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ತಟಸ್ಥವಾಗಿದ್ದ ಬಂಗಾರದ ದರ (Gold Price) ಮಂಗಳವಾರ ೪3೦ ರೂ. ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ೨೪ ಕ್ಯಾರಟ್‌ನ ಪ್ರತಿ ೧೦ ಗ್ರಾಮ್ ಚಿನ್ನದ ದರ ೫೨,೩೬೦ ರೂ.ಗೆ ಏರಿಕೆಯಾಗಿದೆ. ಆಭರಣ ಚಿನ್ನ ಅಥವಾ ೨೨ ಕ್ಯಾರಟ್ ಬಂಗಾರದ ದರದಲ್ಲಿ ೪೦೦ ರೂ. ಏರಿದ್ದು, ೪೮,೦೦೦ ರೂ.ಗೆ ವೃದ್ಧಿಸಿದೆ. ೧ ಕೆಜಿ ಬೆಳ್ಳಿಯ ದರದಲ್ಲಿ ೧,೫೦೦ ರೂ. ವೃದ್ಧಿಸಿದ್ದು, ೬4,5೦೦ ರೂ.ಗೆ ಹೆಚ್ಚಳವಾಗಿದೆ. ಪ್ಲಾಟಿನಮ್ ದರ ಪ್ರತಿ ೧೦ ಗ್ರಾಮ್‌ಗೆ ೨4,060 ರೂ.ಗೆ ಏರಿದ್ದು, ೪೪೦ ರೂ. ವೃದ್ಧಿಸಿದೆ.
ಭಾರತ ತನ್ನ ಬೇಡಿಕೆಯ ಚಿನ್ನಕ್ಕೆ ಆಮದನ್ನು ಅವಲಂಬಿಸಿರುವುದರಿಂದ ಜಾಗತಿಕ ದರಗಳು ನೇರವಾಗಿ ಪ್ರಭಾವಿಸುತ್ತದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್ ಚಿನ್ನದ ದರ 1,778 ಡಾಲರ್‌ಗೆ ಮುಟ್ಟಿದೆ. ಒಟ್ಟಾರೆಯಾಗಿ ಬಂಗಾರದ ದರ ಉನ್ನತ ಮಟ್ಟದಲ್ಲಿದ್ದರೂ, ಜ್ಯುವೆಲ್ಲರ್ಸ್ ತಮ್ಮ ಗ್ರಾಹಕರಿಗೆ ಡಿಸ್ಕೌಂಟ್‌ಗಳು ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಿವೆ.