Site icon Vistara News

Price rise | ದೀಪಾವಳಿ ಹಬ್ಬಕ್ಕೆ ಹೂವು-ಹಣ್ಣುಗಳ ಬೆಲೆ ಗಣನೀಯ ಏರಿಕೆ

kr market

ಹೂವಪ್ಪ, ಬೆಂಗಳೂರು

ನವರಾತ್ರಿ ಹಾಗೂ ದೀಪಾವಳಿಯ ಹಬ್ಬದ ಸಂದರ್ಭದಲ್ಲಿ ಹೂವು-ಹಣ್ಣುಗಳ ದರದಲ್ಲಿ (Price rise) ಗಣನೀಯ ಏರಿಕೆಯಾಗಿದೆ.
ಹೀಗಿದ್ದರೂ, ಮಾರುಕಟ್ಟೆಗಳಲ್ಲಿ ಹಬ್ಬಕ್ಕೆ ಬೇಕಾದ ಹೂವು- ಹಣ್ಣು, ತೆಂಗಿನಕಾಯಿ ಬಾಳೆ, ಮಾವಿನ ಸೊಪ್ಪು, ಕಬ್ಬು, ದೀಪಗಳ ಖರೀದಿ ಭರಾಟೆ ಜೋರಾಗಿತ್ತು.
ಕೆ ಆರ್ ಮಾರುಕಟ್ಟೆ ಅಲ್ಲದೆ ಗಾಂಧಿ ಬಜಾರ್‌, ಮಲ್ಲೇಶ್ವರಂ, ಶಿವಾಜಿನಗರ, ಜಯನಗರ, ಮಡಿವಾಳ ಯಶವಂತಪುರದ ಮಾರುಕಟ್ಟೆ ಗಳಲ್ಲಿ ಜನರಿಂದ ತುಂಬಿ ತುಳುಕುತ್ತಿತ್ತು. ರಾಜಾಜಿನಗರ, ಹೆಬ್ಬಾಳ, ಮಹಾಲಕ್ಷ್ಮಿಪುರದಲ್ಲೂ ಇದೇ ದೃಶ್ಯ ಕಂಡು ಬಂದಿತು. ಕಳೆದ ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಜನಸಾಮಾನ್ಯರು ಮಾರುಕಟ್ಟೆಗೆ ಬರಲು ಭಯಭೀತರಾಗಿದ್ದರು. ವ್ಯಾಪಾರ ಚಟುವಟಿಕೆ ಭಾರಿ ಕುಸಿದಿತ್ತು.

ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ, ಚಿಂತಾಮಣಿ ಸುತ್ತ ಮುತ್ತ ಹೂವು ಬೆಳೆಯುತ್ತಿದ್ದು, ಈ ವರ್ಷ ಅತಿವೃಷ್ಟಿಯಿಂದಾಗಿ ಮಾರುಕಟ್ಟೆಗೆ ಗುಣಮಟ್ಟದ ಹೂವು ಬಂದಿಲ್ಲ. ಹೂವು ಕಟಾವು ಮಾಡಿ ಮಾರುಕಟ್ಟೆಗೆ ಬರುವಷ್ಟರಲ್ಲಿ ಬಾಡಿರುತ್ತವೆ. ತಮಿಳುನಾಡಿನಿಂದ ಮಲ್ಲಿಗೆ ರೋಜಾ, ಸುಗಂಧ ರಾಜ ಹೂವು ಪೂರೈಕೆ ಯಾಗುತ್ತದೆ. ಅಲ್ಲಿಯೂ ಈ ವರ್ಷ ಬೆಳೆ ಕಡಿಮೆಯಾಗಿದ್ದು, ಮಾರುಕಟ್ಟೆಗೆ ಪೂರೈಕೆ ತಗ್ಗಿದೆ. ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ಕೆ ಆರ್ ಮಾರುಕಟ್ಟೆಯ ಹೂವಿನ ವ್ಯಾಪಾರಿ ರುದ್ರೇಶ್.

ಕೆ ಆರ್ ಮಾರುಕಟ್ಟೆಯಲ್ಲಿ ಹೂವು- ಹಣ್ಣುಗಳ ದರ

ಬಾಳೆ ಹಣ್ಣು ಕೆಜಿಗೆ 80-100 ರೂ. ಸೇಬು 120-200 ರೂ. ಪೇರಲ ಹಣ್ಣು 80-100 ರೂ, ಸೀತಾ ಫಲ 150-200 ರೂ. ದಾಳಿಂಬ 120-220 ರೂ.

ಹಬ್ಬಕ್ಕೆ ಮೊದಲು ಕನಕಾಂಬರ ಹೂವಿನ ದರ ಪ್ರತಿ ಕೆ.ಜಿಗೆ 500-600 ರೂ. ಇತ್ತು. ಈಗ 1500-1700 ರೂ.ಗೆ ಏರಿಕೆಯಾಗಿದೆ. ಗುಂಡು ಮಲ್ಲಿಗೆಗೆ 250-300 ರೂ. ಇದ್ದ ಬೆಲೆ, 800-900 ರೂ.ಗೆ ಏರಿಕೆಯಾಗಿದೆ. ಕಾಕಡ ಮಲ್ಲಿಗೆಗೆ 150-200 ರೂ. ಇದ್ದ ಬೆಲೆ 400-500 ರೂ.ಗೆ ಜಿಗಿದಿದೆ. ಸೇವಂತಿಗೆ ಬೆಲೆ 200-250 ರೂ.ನಷ್ಟಿತ್ತು.

ಬಾಳೆ ಹಣ್ಣು ದರ 90-120 ರೂ, ಸೇಬು 100-120 ರೂ, ದಾಳಿಂಬೆ 120-150 ರೂ, ಸೀತಾಪಲ 50-70 ರೂ, ಪೇರಲ 50-60 ರೂ.ಗೆ ನಿಗದಿಯಾಗಿತ್ತು.

ನಿಂಬೆಹಣ್ಣು : ನಿಂಬೆಹಣ್ಣು ಗಾಡಿ ಪೂಜೆಗೆ ಅಂಗಡಿ ಪೂಜೆಗೆ ಅಗತ್ಯವಾಗಿ ಬೆಕಾಗಿದ್ದರಿಂದ ಬೇಡಿಕೆ ಹೆಚ್ಚಿದೆ. ಕಳೆದ ಎರಡು ವರ್ಷಾದಿಂದ ಅತಿವೃಷ್ಟಿ ಮಳೆಗೆ ನಿಂಬೆ ಇಳುವರಿ ಕಡಿಮೆಯಾಗಿದ್ದರಿಂದ ಬೇಡಿಕೆ ತಕ್ಕಷ್ಟು ಸರಬರಾಜು ಇಲ್ಲ ದಸರಾ ದೀಪಾವಳಿ ಇಂಥ ಹಬ್ಬಗಳಿಗೆ ಬೇಡಿಕೆ ಹೆಚ್ಚು ಹೀಗಾಗಿ ಒಂದು ನಿಂಬೆಹಣ್ಣು ಬೆಲೆ 5-8 ರೂ. ಗೆ ಮಾರಾಟವಾಗಿದೆ.

ತರಕಾರಿ ಬೆಲೆ ಯಥಾಸ್ಥಿತಿ:
ತರಕಾರಿಗಳ ಬೆಲೆಗಳು ಹಬ್ಬದ ಮೊದಲೇ ಏರಿಕೆಯಾಗಿತ್ತು. ಕ್ಯಾರೆಟ್, ಹುರುಳಿಕಾಯಿ, ಸೌತೆಕಾಯಿ ಹೊರತುಪಡಿಸಿ ಎಲ್ಲಾ ಬೆಲೆ ಗಳು ಯಥಾಸ್ಥಿತಿಯಲ್ಲಿದೆ.
ಪ್ರತಿ ಕೆ.ಜಿ ಕ್ಯಾರೆಟ್‌ಗೆ 80- 120 ರೂ, ಹುರುಳಿಕಾಯಿಗೆ 80-90 ರೂ, ಕ್ಯಾಪ್ಸಿಕಮ್ 50-60 ರೂ, ಬದನೆಕಾಯಿ 40-45 ರೂ, ಬೆಂಡೆಕಾಯಿ 40-50 ರೂ, ಟೊಮೊಟೊ 35-45 ರೂ. ಹಸಿಮೆಣಸಿನಕಾಯಿ 50-60 ರೂ.ಗೆ ಮಾರಾಟವಾಗಿದೆ.

ಬೆಂಗಳೂರಿನ ಕೆ.ಆರ್.‌ ಮಾರುಕಟ್ಟೆಯಲ್ಲಿ ಹೂವು-ಹಣ್ಣು ದರ

ಸೇವಂತಿಗೆ 200-250 ರೂ.
ಗುಂಡು ಮಲ್ಲಿಗೆ 800-900
ಕಾಕಡ ಮಲ್ಲಿಗೆ 400-500
ಮಳ್ಳೆ 700-800
ಕನಕoಬರ 1500-1700
ಕಣಗಲ 300-400
ರೋಜಾ 100-150
ಸುಗಂಧ ರಾಜ 150-200
ಚೆಂಡು ಹೂವು 100-120

ಬಾಳೆ ಹಣ್ಣು 80-100
ಸೇಬು 120-200
ದಾಳಿಂಬೆ 120-220
ಪೇರಲ 80-100
ಅನಾನಾಸು ಜೋಡಿ 80-100
ಸೀತಾ ಫಲ 150-200
ದ್ರಾಕ್ಷಿ 150-200

Exit mobile version