Site icon Vistara News

Ujjivan Small Finance Bank : ಸಾಮಾನ್ಯ ಗ್ರಾಹಕರ ಎಫ್‌ಡಿಗೆ 8.25%‌ ಬಡ್ಡಿ ಪ್ರಕಟಿಸಿದ ಉಜ್ಜೀವನ್

Ujjeevan small finance bank

#image_title

ಬೆಂಗಳೂರು: ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ (Ujjivan Small Finance Bank) ನಿಶ್ಚಿತ ಅವಧಿಯ ಠೇವಣಿಗಳಿಗೆ (fixed deposits) ಸಂಬಂಧಿಸಿ ಸಾಮಾನ್ಯ ಗ್ರಾಹಕರಿಗೆ 8.25% ಹಾಗೂ ಹಿರಿಯ ನಾಗರಿಕರಿಗೆ 8.25% ಬಡ್ಡಿಯನ್ನು ಘೋಷಿಸಿದೆ. 12 ತಿಂಗಳಿನ ಅವಧಿಯ ಠೇವಣಿಗೆ ಇದು ಅನ್ವಯಿಸಲಿದೆ. ಜೂನ್‌ 1ರಿಂದ ನೂತನ ಬಡ್ಡಿ ದರ ಜಾರಿಯಾಗಿದೆ.

ಬ್ಯಾಂಕಿನ ಪ್ಲಾಟಿನಾ ಎಫ್‌ಡಿಯಲ್ಲಿ 15 ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿಗೆ ಹೆಚ್ಚುವರಿ 0.20% ಬಡ್ಡಿ ಸಿಗಲಿದೆ ಎಂದು ಬ್ಯಾಂಕ್‌ ತಿಳಿಸಿದೆ. ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಲಿಮಿಟೆಡ್‌ ದೇಶದಲ್ಲಿನ ಸಣ್ಣ ಹಣಕಾಸು ಬ್ಯಾಂಕ್‌ಗಳಲ್ಲಿ ಒಂದಾಗಿದೆ. 2017ರಲ್ಲಿ ಸ್ಥಾಪನೆಯಾಗಿರುವ ಬ್ಯಾಂಕ್‌, 639 ಶಾಖೆಗಳು, 17000 ಉದ್ಯೋಗಿಗಳನ್ನು ಒಳಗೊಂಡಿದೆ. 76 ಲಕ್ಷಕ್ಕೂ ಹೆಚ್ಚು ಗ್ರಾಹಕರ ನೆಲೆಯನ್ನು ಒಳಗೊಂಡಿದೆ. ಬೆಂಗಳೂರಿನಲ್ಲಿ ಬ್ಯಾಂಕಿನ ಪ್ರಧಾನ ಕಚೇರಿ ಇದೆ. 24 ರಾಜ್ಯಗಳಲ್ಲಿ 464 ಶಾಖೆಗಳನ್ನು ಹೊಂದಿದೆ.

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ತನ್ನ ಗ್ರಾಹಕರಿಗೆ ಸೇವಿಂಗ್ಸ್‌ ಅಕೌಂಟ್‌, ಕರೆಂಟ್‌ ಅಕೌಂಟ್‌, ಫಿಕ್ಸೆಡ್‌ ಡಿಪಾಸಿಟ್‌, ರಿಕರಿಂಗ್‌ ಡಿಪಾಸಿಟ್‌, ವೆಹಿಕಲ್‌ ಲೋನ್‌, ಎಂಎಸ್‌ಇ ಲೋನ್‌, ಹೌಸಿಂಗ್‌ ಲೋನ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಸ್ಮಾಲ್‌ ಬಿಸಿನೆಸ್‌ ಲೋನ್‌ ಇತ್ಯಾದಿ ಹಣಕಾಸು ಸೇವೆ ಒದಗಿಸುತ್ತದೆ. 2019ರಲ್ಲಿ ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ 1200 ಕೋಟಿ ರೂ. ಸಂಗ್ರಹಿಸಲು ಐಪಿಒ ಮೂಲ ಷೇರು ಮಾರುಕಟ್ಟೆ ಪ್ರವೇಶಿಸಿತ್ತು.

ಬ್ಯಾಂಕ್‌ ತನ್ನ ಗ್ರಾಹಕರಿಗೆ ಮಾಸಿಕ, ತ್ರೈಮಾಸಿಕ ಮತ್ತು ಮೆಚ್ಯೂರಿಟಿ ಅವಧಿಯಲ್ಲಿ ಬಡ್ಡಿ ದರವನ್ನು ಪಾವತಿಸುವ ವ್ಯವಸ್ಥೆಯನ್ನು ಹೊಂದಿದೆ. ಭಾರತದಲ್ಲಿ ಕಿರು ಹಣಕಾಸು ಬ್ಯಾಂಕ್‌ಗಳು ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯವಾಗುತ್ತಿವೆ. ಇತರ ಬ್ಯಾಂಕ್‌ಗಳಿಂದ ಬ್ಯಾಂಕಿಂಗ್‌ ಸೇವೆ ಸಿಗದವರಿಗೆ ಈ ಬ್ಯಾಂಕ್‌ಗಳು ಅನುಕೂಲಕರವಾಗಿರುತ್ತವೆ. ಸಣ್ಣ ಪುಟ್ಟ ವ್ಯಾಪಾರಸ್ಥರು, ಕಿರು ಕೈಗಾರಿಕೆ, ಅಸಂಘಟಿತ ವಲಯಕ್ಕೆ ಬ್ಯಾಂಕಿಂಗ್‌ ಸೇವೆ ವಿಸ್ತರಿಸಲು ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ಗಳು ಮುಂದಾಗುತ್ತವೆ.

ಇದನ್ನೂ ಓದಿ: RBI Monetary Policy : 2,000 ರೂ. ನೋಟುಗಳಲ್ಲಿ ಬ್ಯಾಂಕ್‌ಗಳಿಗೆ ಸಿಕ್ಕಿದ್ದು 50%

Exit mobile version