Site icon Vistara News

Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್​ನ ಲಾಭಾಂಶ ಹೆಚ್ಚಳ

Ujjivan Small Finance Bank

ಬೆಂಗಳೂರು: ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಲಿ. (Ujjivan Small Finance Bank) ತನ್ನ ಕಳೆದ ಹಣಕಾಸು ವರ್ಷದ ಮತ್ತು ಮಾರ್ಚ್ 31, 2024ಕ್ಕೆ ಅಂತ್ಯಗೊಂಡ 4ನೇ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಬಿಡುಗಡೆ ಮಾಡಿದೆ. ಬ್ಯಾಂಕ್ ಮಾರ್ಚ್ 31ಕ್ಕೆ ಕೊನೆಯಾದ ತ್ರೈಮಾಸಿಕ ಅವಧಿಯಲ್ಲಿ 6,681 ಕೋಟಿ ರೂ. ಸಾಲವನ್ನು ವಿತರಿಸಿದ್ದು, ಕಳೆದ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಸಾಲ ವಿತರಣೆಯಲ್ಲಿ ಶೇ.11ರಷ್ಟು ಬೆಳವಣಿಗೆ ಸಾಧಿಸಲಾಗಿದೆ. ಅದೇ ರೀತಿ, 2023-2024ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ಒಟ್ಟಾರೆ 23,389 ಕೋಟಿ ರೂ. ಸಾಲ ವಿತರಿಸಿದ್ದು, ಕಳೆದ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ.17ರಷ್ಟು ಹೆಚ್ಚಳವಾಗಿದೆ ಎಂದು ಬ್ಯಾಂಕ್​ ಮೂಲಗಳು ತಿಳಿಸಿವೆ.

ಮಾ.31ಕ್ಕೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಕೈಗೆಟಕುವ ದರದಲ್ಲಿ ಒಟ್ಟು 730 ಕೋಟಿ ರೂ.ಗಳ ಗೃಹ ಸಾಲ ನೀಡಲಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಈ ಬಾರಿ ಶೇ.66ರಷ್ಟು ಹೆಚ್ಚು ಸಾಲ ವಿತರಣೆಯಾಗಿದೆ. 2023-2024ನೇ ಹಣಕಾಸು ವರ್ಷದಲ್ಲಿ 2,284 ಕೋಟಿ ರೂ. ಗೃಹ ಸಾಲ ವಿತರಿಸಲಾಗಿದ್ದು, ಕಳೆದ ವಿತ್ತ ವರ್ಷಕ್ಕೆ ಹೋಲಿಸಿದರೆ ಶೇ.64ರಷ್ಟು ಹೆಚ್ಚಳ ಕಂಡಿದೆ ಎಂದು ಬ್ಯಾಂಕ್ ಹೇಳಿದೆ.

23-24ರ ಒಟ್ಟಾರೆ ಸಾಲದ ಮೊತ್ತವು ಶೇ.24ರಷ್ಟು ಏರಿಕೆಯಾಗಿ, 29,780 ಕೋಟಿ ರೂ.ಗಳಾಗಿವೆ. ಹಿಂದಿನ ತ್ರೈಮಾಸಿಕ ಅವಧಿಗೆ ಹೋಲಿಸಿದರೆ ಮಾರ್ಚ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ ಒಟ್ಟಾರೆ ಸಾಲದ ಪ್ರಮಾಣವು ಶೇ.7ರಷ್ಟು ಏರಿಕೆಯಾಗಿದೆ. ಇನ್ನು, 2024ರ ಮಾರ್ಚ್ ನಲ್ಲಿ ಸೆಕ್ಯೂರ್ಡ್ ಬುಕ್ ಶೇ.30.2ರಷ್ಟಿದ್ದರೆ, 2023ರ ಡಿಸೆಂಬರ್ ನಲ್ಲಿ ಇದು ಶೇ.28.4ರಷ್ಟಿತ್ತು ಎಂದು ಅಂಕಿ ಅಂಶಗಳು ತಿಳಿಸಿವೆ.

ಸಾಲ ವಸೂಲಿ ಮುಂದುವರಿಕೆ

ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಸಾಲ ವಸೂಲಾತಿ ಪ್ರಕ್ರಿಯೆಯೂ ಉತ್ತಮವಾಗಿ ಮುಂದುವರಿದಿದ್ದು, ಶೇ.99ರಷ್ಟು ದಕ್ಷತೆಯನ್ನು ಕಾಯ್ದುಕೊಳ್ಳಲಾಗಿದೆ. ಎನ್ ಡಿಎ ಸಂಗ್ರಹ ಶೇ.100ರಷ್ಟಾಗಿದೆ. ಮರುಪಾವತಿಗೆ ಬಾಕಿಯಿರುವ ಸಾಲವು(ಪೋರ್ಟ್ ಫೋಲಿಯೋ ಅಟ್ ರಿಸ್ಕ್) ಶೇ.3.5ರಷ್ಟಿದ್ದು, ಒಟ್ಟು ಅನುತ್ಪಾದಕ ಆಸ್ತಿ (ಜಿಎನ್ ಪಿಎ) ಸ್ಥಿರವಾಗಿದ್ದು, ಶೇ.2.1 ರಷ್ಟಿದೆ. 2023ರ ಡಿಸೆಂಬರ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಇದು ಶೇ.2.1 ರಷ್ಟಿತ್ತು. ಮಾರ್ಚ್ ಗೆ ಕೊನೆಯಾದ ತ್ರೈಮಾಸಿಕದಲ್ಲಿ ಎನ್ಎನ್ ಪಿಎ(ನಿವ್ವಳ ಅನುತ್ಪಾದಕ ಆಸ್ತಿ) ಕೇವಲ ಶೇ.0.3ರಲ್ಲಿ ಮುಂದುವರಿದಿದೆ. ಈ ಅವಧಿಯಲ್ಲಿ ಒಟ್ಟು 65 ಕೋಟಿ ರೂ.ಗಳ ಸಾಲವನ್ನು ರೈಟ್ ಆಫ್ ಮಾಡಲಾಗಿದೆ ಎಂದು ಬ್ಯಾಂಕ್​ ಮೂಲಗಳು ತಿಳಿಸಿವೆ.

ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ 31,462 ಕೋಟಿ ರೂ. ಠೇವಣಿ ಸಂಗ್ರಹವಾಗಿದ್ದು, ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.6 ಹಾಗೂ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ.23ರಷ್ಟು ಹೆಚ್ಚಳವಾಗಿದೆ. ಸಿಎಎಸ್ಎ(ಚಾಲ್ತಿ ಖಾತೆ ಉಳಿತಾಯ ಖಾತೆ) ಮೊತ್ತವು ಕಳೆದ ವಿತ್ತೀಯ ವರ್ಷಕ್ಕೆ ಹೋಲಿಸಿದರೆ ಶೇ.24ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸದರೆ ಶೇ.10ರಷ್ಟು ಏರಿಕೆಯಾಗಿದ್ದು, ಮಾರ್ಚ್ ತ್ರೈಮಾಸಿಕದಲ್ಲಿ ಒಟ್ಟು 8,335 ಕೋಟಿ ರೂ. ಸಂಗ್ರಹವಾಗಿದೆ. ಸಿಎಎಸ್ಎ ಅನುಪಾತವು ಈ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಶೇ.26.5ರಷ್ಟಿದ್ದರೆ, ಅದರ ಹಿಂದಿನ ತ್ರೈಮಾಸಿಕ ಅವಧಿಯಲ್ಲಿ ಶೇ.25.5ರಷ್ಟಿತ್ತು. ಚಿಲ್ಲರೆ ಅವಧಿ ಠೇವಣಿ (ರಿಟೇಲ್ ಟಿಡಿ) ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2023-24ರ ಹಣಕಾಸು ವರ್ಷದಲ್ಲಿ ಶೇ.36ರಷ್ಟು ಮತ್ತು ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಮಾರ್ಚ್ ಗೆ ಅಂತ್ಯವಾದ ತ್ರೈಮಾಸಿಕದಲ್ಲಿ ಶೇ.7ರಷ್ಟು ಬೆಳವಣಿಗೆ ದಾಖಲಿಸಿದೆ.

ಇದನ್ನೂ ಓದಿ: Chitta Ranjan Dash: ಆರ್‌ಎಸ್‌ಎಸ್‌ನ ಸ್ವಯಂಸೇವಕನಾಗಿದ್ದೆ; ಈಗಲೂ ಮರಳಲು ಸಿದ್ಧ ಎಂದ ಹೈಕೋರ್ಟ್‌ ನಿವೃತ್ತ ಜಡ್ಜ್‌ ಚಿತ್ತರಂಜನ್‌ ದಾಸ್‌

ನಿವ್ವಳ ಬಡ್ಡಿ ಆದಾಯ(ಎನ್ಐಐ)ವು 4ನೇ ತ್ರೈಮಾಸಿಕದಲ್ಲಿ 934 ಕೋಟಿ ರೂ. ಆಗಿದ್ದು, ಕಳೆದ ತ್ರೈಮಾಸಿಕಕ್ಕಿಂತ ಶೇ.27ರಷ್ಟು ಹೆಚ್ಚಳವಾಗಿದೆ. 2023-24ರ ವಿತ್ತ ವರ್ಷದಲ್ಲಿ ಇದು 3,409 ಕೋಟಿ ರೂ.ಗಳಾಗಿದ್ದು ಕಳೆದ ವಿತ್ತ ವರ್ಷಕ್ಕಿಂತ ಶೇ.26ರಷ್ಟು ಬೆಳವಣಿಗೆ ಸಾಧಿಸಿದೆ. ಇದೇ ವೇಳೆ, ಬ್ಯಾಂಕಿನ ನಿವ್ವಳ ಬಡ್ಡಿ ಅಂತರ(ಎನ್ಐಎಂ)ವು 4ನೇ ತ್ರೈಮಾಸಿಕದಲ್ಲಿ ಶೇ.9.4ರಷ್ಟು, ಇಡೀ ವಿತ್ತ ವರ್ಷದಲ್ಲಿ ಶೇ.9.1ರಷ್ಟು ಇತ್ತು. ವೆಚ್ಚದಿಂದ ಆದಾಯ ಅನುಪಾತವು 4ನೇ ತ್ರೈಮಾಸಿಕದಲ್ಲಿ ಶೇ.55.7 ಆಗಿದ್ದು, 2024ನೇ ಹಣಕಾಸು ವರ್ಷದಲ್ಲಿ ಶೇ.54.3ರಷ್ಟಾಗಿದೆ.

ಮಾರ್ಚ್ ಗೆ ಅಂತ್ಯಗೊಂಡ 4ನೇ ತ್ರೈಮಾಸಿಕದಲ್ಲಿ ಬ್ಯಾಂಕಿನ ಕಾರ್ಯಾಚರಣೆಯಿಂದ ಬಂದ ಆದಾಯ(ಪಿಪಿಒಪಿ) 519 ಕೋಟಿ ರೂ.ಗಳಾಗಿದ್ದು, ಕಳೆದ ತ್ರೈಮಾಸಿಕಕ್ಕಿಂತ ಶೇ.26ರಷ್ಟು ಪ್ರಗತಿ ಸಾಧಿಸಲಾಗಿದೆ. ಅದೇ ರೀತಿ, 24ನೇ ಹಣಕಾಸು ವರ್ಷದಲ್ಲಿ ಕಾರ್ಯಾಚರಣೆಯಲ್ಲಿ ಬಂದ ಆದಾಯವು 1,917 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.29ರ ಏರಿಕೆ ಕಂಡಿದೆ. ತೆರಿಗೆ ನಂತರದ ಲಾಭ (ಪಿಎಟಿ)ವು 4ನೇ ತ್ರೈಮಾಸಿಕದಲ್ಲಿ 330 ಕೋಟಿ ರೂ.ಗಳಾಗಿದ್ದು (3ನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.7ರಷ್ಟು ಹೆಚ್ಚಳ), 24ನೇ ಹಣಕಾಸು ವರ್ಷದಲ್ಲಿ 1,281 ಕೋಟಿ ರೂ.ಗಳಷ್ಟಾಗಿದೆ (ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.17 ಹೆಚ್ಚಳ).

ಷೇರುದಾರರ ಅನುಮತಿಗೆ ಒಳಪಟ್ಟು, ಬ್ಯಾಂಕಿನ ಆಡಳಿತ ಮಂಡಳಿಯು ಪ್ರತಿ ಷೇರಿಗೆ 1.5 ರೂ.ಗಳಂತೆ ಅಂತಿಮ ಲಾಭಾಂಶ ನೀಡಲು ಶಿಫಾರಸು ಮಾಡಿದೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಕಾರ್ಯನಿರ್ವಹಣಾಧಿಕಾರಿ ಶ್ರೀ. ಇಟ್ಟಿರಾ ಡೇವಿಸ್ ರವರು ಮಾತನಾಡಿ, 2024ರ ಹಣಕಾಸು ವರ್ಷದ 4ನೇ ತ್ರೈಮಾಸಿಕವು ಮತ್ತೊಂದು ಯಶಸ್ವಿ ವಿತ್ತ ವರ್ಷಕ್ಕೆ ಉತ್ತಮ ಮುನ್ನುಡಿ ಬರೆದಿದೆ. ಈ  ಅವಧಿಯಲ್ಲಿ ನಮಗೆ ಗುಣಮಟ್ಟದ ಬೆಳವಣಿಗೆಯನ್ನು ಸಾಧಿಸಲು ಸಾಧ್ಯವಾಗಿದೆ. ನಾವು ಬ್ಯಾಂಕ್ ಮತ್ತು ಅದರ ಹೋಲ್ಡಿಂಗ್ ಕಂಪನಿ ನಡುವಿನ ವಿಲೀನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ನಮ್ಮ ಸೆಕ್ಯೂರ್ಡ್ ಬುಕ್ (ಸುರಕ್ಷಿತ ಪುಸ್ತಕ) ಈ ತ್ರೈಮಾಸಿಕದಲ್ಲಿ 177 ಮೂಲಾಂಕ (ಬಿಪಿಎಸ್) ನಷ್ಟು ಸುಧಾರಣೆ ಕಂಡು, 30.2%ಕ್ಕೆ ತಲುಪಿದೆ. 4ನೇ ತ್ರೈಮಾಸಿಕದಲ್ಲಿ ₹ 6,681 ಕೋಟಿ ರೂ. ಮತ್ತು ವಾರ್ಷಿಕವಾಗಿ ₹ 23,389 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ.  ಕೈಗೆಟುಕುವ ಗೃಹ (ಸೂಕ್ಷ್ಮ ಅಡಮಾನಗಳು ಸೇರಿದಂತೆ) ಸಾಲ ವಿತರಣೆಯಲ್ಲೂ ಪ್ರಗತಿ ಸಾಧಿಸಲಾಗಿದ್ದು, 4ನೇ ತ್ರೈಮಾಸಿಕದಲ್ಲಿ  ₹730 ಕೋಟಿ ಮತ್ತು ವಾರ್ಷಿಕ ₹ 2,284 ಕೋಟಿ ಸಾಲ ವಿತರಿಸಲಾಗಿದೆ. ಈ ಮೂಲಕ 2023-24ರ ಹಣಕಾಸು ವರ್ಷದಲ್ಲಿ ಗೃಹ ಸಾಲ ವಿತರಣೆಯಲ್ಲಿ ಶೇ.45ರ ಬೆಳವಣಿಗೆ ಸಾಧಿಸಲಾಗಿದೆ. ಈ ವೇಗವು ಮುಂದಿನ ವರ್ಷವೂ ಮುಂದುವರಿಯುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಹೇಳಿದರು. ಹೆಚ್ಚುವರಿಯಾಗಿ, ನಾವು ಪರಿಷ್ಕೃತ ಎಲ್ಒಎಸ್ ಅನ್ನು ಪರಿಚಯಿಸುವ ಅಂತಿಮ ಹಂತದಲ್ಲಿರುತ್ತೇವೆ, ಒಮ್ಮೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಿದರೆ ಅದು ವ್ಯವಹಾರ ದಕ್ಷತೆಯನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತ್ರೈಮಾಸಿಕದಲ್ಲಿ ಪೂರ್ವ-ಅರ್ಹ ಟಾಪ್-ಅಪ್ ಸಾಲಗಳನ್ನು ನಮ್ಮ ಉತ್ಪನ್ನ ಸೂಟ್ ಗೆ ಸೇರಿಸಲಾಗಿದೆ, ಇದು ನಮ್ಮ ಅಸ್ತಿತ್ವದಲ್ಲಿರುವ ಕೈಗೆಟುಕುವ ವಸತಿ ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ನುಡಿದರು.

Exit mobile version