Site icon Vistara News

Reliance Jio : ಅಮೆರಿಕ ಮೂಲದ ಮಿಮೋಸಾ ನೆಟ್‌ವರ್ಕ್ಸ್‌ ರಿಲಯನ್ಸ್‌ ತೆಕ್ಕೆಗೆ, 492 ಕೋಟಿ ರೂ.ಗಳ ಡೀಲ್

mukesh ambani

mukesh ambani

ನವ ದೆಹಲಿ: ರಿಲಯನ್ಸ್‌ ಜಿಯೊದ ( Reliance Jio) ಭಾಗವಾಗಿರುವ ರ‍್ಯಾಡಿಸಿಸ್‌ ಕಾರ್ಪ್‌, ದೂರಸಂಪರ್ಕ ಸಾಧನಗಳನ್ನು ಉತ್ಪಾದಿಸುವ ಮಿಮೋಸಾ ನೆಟ್‌ ವರ್ಕ್ಸ್‌ ಅನ್ನು 60 ದಶಲಕ್ಷ ಡಾಲರ್‌ಗೆ (ಅಂದಾಜು 492 ಕೋಟಿ ರೂ.) ಖರೀದಿಸಲಿದೆ. ರಿಲಯನ್ಸ್‌ ಜಿಯೊಗೆ 5ಜಿ ಮತ್ತು ಬ್ರಾಡ್‌ ಬ್ಯಾಂಡ್‌ ಸೇವೆಯನ್ನು ವಿಸ್ತರಿಸಲು ಸಹಕಾರಿಯಾಗಲಿದೆ. ರ‍್ಯಾಡಿಸಿಸ್‌ ಕಾರ್ಪ್‌ ಮತ್ತು ಅಮೆರಿಕ ಮೂಲದ ಏರ್‌ಸ್ಪಾನ್‌ ನೆಟ್‌ ವರ್ಕ್ಸ್‌ ಹೋಲ್ಡಿಂಗ್ಸ್‌ (ಮೀಮೋಸಾದ ಮಾಲಿಕತ್ವವನ್ನು ಹೊಂದಿರುವ ಸಂಸ್ಥೆ) ಒಪ್ಪಂದಕ್ಕೆ ಸಹಿ ಹಾಕಿವೆ.

ಟೆಲಿಕಾಂ ನೆಟ್‌ವರ್ಕ್‌ ಉತ್ಪನ್ನಗಳು ಮತ್ತು ಟೆಲಿಕಾಂ ನೆಟ್‌ ವರ್ಕ್‌ ಪ್ರಾಡಕ್ಸ್ಟ್‌ಗಳಲ್ಲಿ ಗ್ರಾಹಕರು ಮತ್ತು ಉದ್ಯಮಿಗಳಿಗೆ ಹೆಚ್ಚಿನ ಮೌಲ್ಯ ನೀಡಲು ಸಹಕಾರಿಯಾಗಲಿದೆ ಎಂದು ಜಿಯೊದ ಹಿರಿಯ ಅಧಿಕಾರಿ ಮಾಥ್ಯೂ ಒಮ್ಮೆನ್‌ ತಿಳಿಸಿದ್ದಾರೆ.

ಕ್ಯಾಂಪಾ ತಂಪು ಪಾನೀಯದ ಬಿಡುಗಡೆ:

ಕ್ಯಾಂಪಾ ಎನ್ನುವ 50 ವರ್ಷ ಹಳೆಯ ತಂಪು ಪಾನೀಯ ಬ್ರಾಂಡ್‌ ಅನ್ನು ಮೂರು ಹೊಸ ಸ್ವಾದದ ಜತೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಕ್ಯಾಂಪಾವನ್ನು ಹೊಸ ಅವತಾರದಲ್ಲಿ ಬಿಡುಗಡೆಗೊಳಿಸುತ್ತಿರುವುದರಿಂದ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದು ಆರ್‌ಸಿಪಿಎಲ್‌ ವಕ್ತಾರರು ತಿಳಿಸಿದ್ದಾರೆ.

Exit mobile version