Site icon Vistara News

Wage revision : ಸಾರ್ವಜನಿಕ ಬ್ಯಾಂಕ್‌ ಉದ್ಯೋಗಿಗಳಿಗೆ ಶೀಘ್ರ ವೇತನ ಏರಿಕೆ ಸಂಭವ

cash

ನವ ದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‌ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ ಪ್ರಸ್ತಾವವನ್ನು 2023ರ ಡಿಸೆಂಬರ್‌ 1 ರೊಳಗೆ ಅಂತಿಮಗೊಳಿಸುವಂತೆ ಸರ್ಕಾರ ( Wage revision) ಇಂಡಿಯನ್‌ ಬ್ಯಾಂಕ್ಸ್‌ ಅಸೋಸಿಯೇಶನ್‌ಗೆ (Indian Banks association -IBA) ಸೂಚಿಸಿದೆ.

ಸಾರ್ವಜನಿಕ ಬ್ಯಾಂಕ್‌ ಉದ್ಯೋಗಿಗಳ ಈಗಿನ ವೇತನ ಒಪ್ಪಂದ (wage agreement) 2022ರ ನವೆಂಬರ್‌ 1ಕ್ಕೆ ಮುಕ್ತಾಯವಾಗುತ್ತಿದೆ. ಐಬಿಎ ಮತ್ತು ಪಿಎಸ್‌ಯು ಬ್ಯಾಂಕ್‌ ಯೂನಿಯನ್‌ಗಳು ವೇತನ ಪರಿಷ್ಕರಣೆಗೆ ಸಂಬಂಧಿಸಿ ಮಾತುಕತೆ ನಡೆಸುತ್ತಿವೆ.

ಈ ನಡುವೆ ಹಣಕಾಸು ಸಚಿವಾಲಯವು ಐಬಿಎಗೆ, ಬ್ಯಾಂಕ್‌ ಉದ್ಯೋಗಿಗಳ ಹಿತಾಸಕ್ತಿ ರಕ್ಷಿಸುವಂತೆ ತಿಳಿಸಿದೆ. ಐಬಿಎ ಮತ್ತು ಬ್ಯಾಂಕ್‌ ಯೂನಿಯನ್‌ಗಳ ನಡುವೆ ಸೌಹಾರ್ದಯುತ ಒಪ್ಪಂದ ಏರ್ಪಡುವ ವಿಶ್ವಾಸವನ್ನು ಹಣಕಾಸು ಸಚಿವಾಲಯವು ವ್ಯಕ್ತಪಡಿಸಿದೆ.

ಪಿಎಸ್‌ಯು ಬ್ಯಾಂಕ್‌ಗಳ ವೇತನ ಪರಿಷ್ಕರಣೆ ಸಂಕೀರ್ಣ ವಿಷಯವಾಗಿದೆ. ಇದಕ್ಕಾಗಿ ಹಲವು ಆಯಾಮಗಳನ್ನು ಪರಿಗಣಿಸಲಾಗುತ್ತದೆ. ಬ್ಯಾಂಕ್‌ಗಳ ಆರ್ಥಿಕ ಆರೋಗ್ಯ, ಜೀವನ ವೆಚ್ಚ, ಇತರ ವಲಯದ ಉದ್ಯೋಗಿಗಳ ವೇತನ ಇತ್ಯಾದಿ ಅಂಶಗಳನ್ನು ಪರಿಗಣಿಸಬೇಕಾಗುತ್ತದೆ.

ಬ್ಯಾಂಕ್‌ ಉದ್ಯೋಗಿಗಳ ಯೂನಿಯನ್‌ಗಳ ಜತೆಗೆ ವೇತನಕ್ಕೆ ಸಂಬಂಧಿಸಿ ಮಾತುಕತೆ ಅಂತಿಮಪಡಿಸುವ ವಿಶ್ವಾಸವನ್ನು ಐಬಿಎ ವ್ಯಕ್ತಪಡಿಸಿದೆ. ಯೂನಿಯನ್‌ಗಳು ಕೂಡ ಐಬಿಎ ಉತ್ತಮ ವೇತನ ಹೆಚ್ಚಳದ ಪ್ರಸ್ತಾಪ ನೀಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿವೆ. ವೇತನ ಪರಿಷ್ಕರಣೆಯಲ್ಲಿ 2-3 ವರ್ಷಗಳ ವಿಳಂಬ ಆದರೆ ಬಾಕಿ ಕೊಡಬೇಕಾಗುವ ಮೊತ್ತ ಕೂಡ ಏರಿಕೆಯಾಗುತ್ತದೆ.

ಇದನ್ನೂ ಓದಿ: RBI Bond : ಈ ಸುರಕ್ಷಿತ ಹೂಡಿಕೆಯಲ್ಲಿ ನಿಮಗೆ ಸಿಗಲಿದೆ 8.05% ಬಡ್ಡಿ, ಬ್ಯಾಂಕ್‌ ಎಫ್‌ಡಿಗಿಂತ ಹೆಚ್ಚು!

ಪ್ರಸ್ತುತ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿವೆ. 2022-23ರಲ್ಲಿ ಸಾರ್ವಜನಿಕ ಬ್ಯಾಂಕ್‌ಗಳ ನಿವ್ವಳ ಆದಾಯ ಮೂರು ಪಟ್ಟು ವೃದ್ಧಿಸಿದೆ. 1.04 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. 2013-14ರಲ್ಲಿ ಇದು 36,270 ಕೋಟಿ ರೂ.ನಷ್ಟಿತ್ತು.

Exit mobile version