ನವದೆಹಲಿ: ವಾಟ್ಸ್ ಆ್ಯಪ್ ಕಳೆದ ಏಪ್ರಿಲ್‌ನಲ್ಲಿ 16 ಲಕ್ಷ ಭಾರತೀಯ ಬಳಕೆದಾರರ ಖಾತೆಗಳನ್ನು ನಿಷೇಧಿಸಿದೆ. ಕಂಪನಿ ಬುಧವಾರ ಬಿಡುಗಡೆಗೊಳಿಸಿದ ತನ್ನ ಮಾಸಿಕ ವರದಿಯಲ್ಲಿ ಈ ವಿಷಯ ತಿಳಿಸಿದೆ.
ಬಳಕೆದಾರರು ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಖಚಿತವಾದರೆ ವಾಟ್ಸ್ ಆ್ಯಪ್ ತಾನಾಗಿಯೇ ನಿಷೇಧಿಸುತ್ತದೆ. ವಾರದ ಎಲ್ಲ ದಿನಗಳಲ್ಲೂ ದೋಷಪೂರಿತ ಅಕೌಂಟ್‌ಗಳನ್ನು ನಿಷೇಧಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ತಿಳಿಸಿದೆ.
ಸುಳ್ಳು ಸುದ್ದಿ, ವದಂತಿಗಳು, ದ್ವೇಷಪೂರಿತ ಹೇಳಿಕೆ, ವಿಡಿಯೊ ಪ್ರಸಾರ ಮಾಡುವವರ ವಿರುದ್ಧ ವಾಟ್ಸ್ ಆ್ಯಪ್ ನಿಗಾ ವಹಿಸುತ್ತಿದೆ ಎಂದು ಕಂಪನಿ ತಿಳಿಸಿದೆ.