ಹೊಸದಿಲ್ಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯ ದರ ಸೋಮವಾರ ಹೊಸ ದಾಖಲೆಯ ಎತ್ತರಕ್ಕೇರಿದ್ದು, ಭಾರತದ ರಫ್ತು ನಿಷೇಧ ಪ್ರಭಾವ ಬೀರಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿಯ ದರ ಪ್ರತಿ ಟನ್ನಿಗೆ 453 ಡಾಲರ್‌ಗೆ (34,881 ರೂ.) ವೃದ್ಧಿಸಿದೆ. ಈ ಹಿಂದೆ 426 ಡಾಲರ್ (ಅಂದಾಜು 32,802 ರೂ.) ಇತ್ತು.
ರಷ್ಯಾ ಕಳೆದ ಫೆಬ್ರವರಿಯಲ್ಲಿ ಉಕ್ರೇನ್ ಮೇಲೆ ಅತಿಕ್ರಮಣ ನಡೆಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಗೋಧಿಯ ಪೈರೈಕೆ ಅಸ್ತವ್ಯಸ್ತವಾಗಿದೆ. ಜಾಗತಿಕ ಕೃಷಿ ಉತ್ಪನ್ನ ರಫ್ತಿನಲ್ಲಿ ಶೇ.12 ಪಾಲನ್ನು ಉಕ್ರೇನ್ ವಹಿಸುತ್ತಿತ್ತು.
ರಸಗೊಬ್ಬರ ಕೊರತೆ, ಅಲ್ಪ ಪ್ರಮಾಣದ ಕೊಯ್ಲು, ಹಣದುಬ್ಬರದ ಪರಿಣಾಮ ಬಡ ದೇಶಗಳಲ್ಲಿ ಪರಿಸ್ಥಿತಿ ಗಂಭೀರವಾಗಬಹುದು ಎಂಬ ಆತಣಕ ಉಂಟಾಗಿದೆ. ಭಾರತದಲ್ಲಿ 138 ಕೋಟಿ ಮಂದಿಗೆ ಆಹಾರ ಭದ್ರತೆಯ ಸವಾಲಿದೆ.
ಇದನ್ನೂ ಓದಿ: Wheat export ban: ಭಾರತದಿಂದ ಗೋಧಿ ರಫ್ತಿಗೆ ನಿಷೇಧ