Site icon Vistara News

Wipro ceo ಸಂಬಳ 79.8 ಕೋಟಿ ರೂ. ಭಾರತದ ಐಟಿ ಕಂಪನಿಗಳಲ್ಲೇ ಗರಿಷ್ಠ

wipro ceo

ಬೆಂಗಳೂರು: ಐಟಿ ದಿಗ್ಗಜ ವಿಪ್ರೊದ ಸಿಇಒ ಥೈರಿ ಡೆಲಪೋರ್ಟ್‌ ಅವರ ವಾರ್ಷಿಕ ವೇತನ 2021-22ರಲ್ಲಿ 79.8 ಕೋಟಿ ರೂ.ಗಳಾಗಿದ್ದು, ಭಾರತದ ಐಟಿ ಕ್ಷೇತ್ರದಲ್ಲೇ ಗರಿಷ್ಠ ಸಂಬಳವನ್ನು ಎಣಿಸಿದ್ದಾರೆ.

ವಿಪ್ರೊ ಯುಎಸ್‌ ಸೆಕ್ಯುರಿಟೀಸ್‌ ಆಂಡ್‌ ಎಕ್ಸ್‌ಚೇಂಜ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ವಿಷಯ ತಿಳಿಸಿದೆ.

ಕಳೆದ 2020-21ರಲ್ಲಿ ಡೆಲಪೋರ್ಟ್‌ ಅವರ ವೇತನ 64.3 ಕೋಟಿ ರೂ.ಗಳಾಗಿತ್ತು. ಅದು ಅವರ 9 ತಿಂಗಳಿನ ಸಂಬಳ ಆಗಿತ್ತು. ಏಕೆಂದರೆ ಅವರು 2020ರ ಜುಲೈನಲ್ಲಿ ಕೆಲಸಕ್ಕೆ ಸೇರಿದ್ದರು.

ಡೆಲಪೋರ್ಟ್‌ ಅವರ ಟೇಕ್‌ ಹೋಮ್‌ ಸ್ಯಾಲರಿ 13.2 ಕೋಟಿ ರೂ.ಗಳಾಗಿದೆ. 19.3 ಕೋಟಿ ರೂ. ಕಮೀಶನ್‌ ಮತ್ತು ವೆರಿಯೆಬಲ್‌ ಪೇ ಆಗಿದೆ. ಇತರ ಭತ್ಯೆಗಳ ರೂಪದಲ್ಲಿ 31.8 ಕೋಟಿ ರೂ. ಲಭಿಸಿದೆ.

ಸಿಇಒಗಳು ಮತ್ತು ಉದ್ಯೋಗಿಗಳ ನಡುವಣ ವೇತನದ ಅಂತರ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುತ್ತದೆ. ಇದರ ಬಗ್ಗೆ ಕಾರ್ಪೊರೇಟ್‌ ವಲಯದಲ್ಲಿ, ಸಾಮಾಜಿಕ ಮತ್ತು ಚಿಂತಕರ ಚಾವಡಿಯಲ್ಲಿ ಚರ್ಚೆಯಾಗುತ್ತದೆ. ಆದರೆ ಪರಿಸ್ಥಿತಿ ಬದಲಾದಂತಿಲ್ಲ.

ಭಾರತದ 3 ಐಟಿ ದಿಗ್ಗಜ ಕಂಪನಿಗಳ ಸಿಇಒ ವೇತನ

ವಿಪ್ರೊ ಸಿಇಒ ಥೈರಿ ಡೆಲಪೋರ್ಟ್‌79.8 ಕೋಟಿ ರೂ.
ಇನ್ಫೋಸಿಸ್‌ ಸಿಇಒ ಸಲೀಲ್‌ ಪರೇಖ್‌71 ಕೋಟಿ ರೂ.
ಟಿಸಿಎಸ್‌ ಸಿಇಒ ರಾಜೇಶ್‌ ಗೋಪಿನಾಥನ್‌25.77 ಕೋಟಿ ರೂ.

ಇದನ್ನೂ ಓದಿ:CEO Salary jump: ಇನ್ಫೋಸಿಸ್‌ ಸಿಇಒ ಸಲೀಲ್ ಪರೇಖ್‌ ಸಂಬಳ 71 ಕೋಟಿ ರೂ.ಗೆ ಹೆಚ್ಚಳ, ವೇತನ ಪಡೆಯದ ನಿಲೇಕಣಿ

Exit mobile version