ಬೆಂಗಳೂರು: ಸಿಂಗಾಪುರ ಮೂಲದ ಫ್ಯಾಷನ್ ಸ್ಟಾರ್ಟಪ್ ಝಿಲಿಂಗೊದಲ್ಲಿ ಸಿಇಒ ಆಗಿದ್ದ ಭಾರತೀಯ ಮೂಲದ ಸಿಇಒ ಅಂಕಿತಿ ಬೋಸ್ ಅವರನ್ನು ಹಣಕಾಸು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ವಜಾಗೊಳಿಸಲಾಗಿದೆ.
ಕಳೆದ ಮಾರ್ಚ್ 31ರಂದು ಅಂಕಿತಾ ಬೋಸ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತು.
ಬಿಸಿನೆಸ್ ಟು ಬಿಸಿನೆಸ್ ಫ್ಯಾಷನ್ ಸ್ಟಾರ್ಟಪ್ ಆಗಿರುವ ಝಿಲಿಂಗೊದ ಸಹ ಸಂಸ್ಥಾಪಕರೂ ಆಗಿದ್ದ ಅಂಕಿತಿ ಬೋಸ್ ಅವರು ಈಗ ತಮ್ಮ ಕಂಪನಿಯಿಂದಲೇ ವಜಾಗೊಂಡಿದ್ದಾರೆ.
ಕಂಪನಿಯಲ್ಲಿ ಗಂಭೀರ ಹಣಕಾಸು ಅಕ್ರಮಗಳು ನಡೆದಿರುವುದನ್ನು ವಿಧಿ ವಿಜ್ಞಾನ ತನಿಖೆ ದೃಢಪಡಿಸಿತ್ತು. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಲಾಗಿದೆ.
ಝಿಲಿಂಗೊ ಆಗ್ನೇಯ ಏಷ್ಯಾ ವಲಯದಲ್ಲಿ ಪ್ರಭಾವಿ ಆನ್‌ಲೈನ್ ಫ್ಯಾಷನ್ ಸ್ಟಾರ್ಟಪ್ ಆಗಿದೆ. ಅಪಾರೆಲ್ ವ್ಯಾಪಾರಿಗಳು ಮತ್ತು ಕಾರ್ಖಾನೆಗಳಿಗೆ ತಂತ್ರಜ್ಞಾನವನ್ನು ಝಿಲಿಂಗೊ ಒದಗಿಸುತ್ತದೆ. 2015ರಲ್ಲಿ ಸ್ಥಾಪನೆಯಾಗಿತ್ತು. ಅಂಕಿತಿ ಬೋಸ್ ಮತ್ತು ಮುಖ್ಯ ತಂತ್ರಜ್ಞಾನ ಅಧಿಕಾರಿ ಧ್ರುವ್ ಕಪೂರ್ ಝಿಲಿಂಗೊದ ಸ್ಥಾಪಕರು. 600 ಉದ್ಯೋಗಿಗಳನ್ನು ಒಳಗೊಂಡಿದೆ.