Site icon Vistara News

Death News : ಪೇಜಾವರ ಶ್ರೀಗಳಿಗೆ ಪಿತೃ ವಿಯೋಗ; ತುಳು ಲಿಪಿಯ ಪಂಚಾಂಗ ಕರ್ತೃ ಇನ್ನಿಲ್ಲ

Pejavar seer father death news

ಉಡುಪಿ: ಪೇಜಾವರ ಮಠದ ಮಠಾಧಿಪತಿಗಳಾದ ಶ್ರೀ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ (Shri Vishwaprasanna theertha Swameeji of Pejavar Matt) ಪೂರ್ವಾಶ್ರಮದ ತಂದೆಯವರಾದ ಅಂಗಡಿಮಾರು ಕೃಷ್ಣಭಟ್ಟ (Angadimaru Krishna Bhat) ನಿಧನರಾಗಿದ್ದಾರೆ (Death News). ಅವರಿಗೆ 103 ವರ್ಷ ಆಗಿತ್ತು.

ಶ್ರೀಗಳ ಪೂರ್ವಾಶ್ರಮದ ತಂದೆಯವರಾದ ಕೃಷ್ಣ ಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ. ಅವರಿಗೆ ವಯೋಸಹಜವಾದ ಆರೋಗ್ಯ ಸಮಸ್ಯೆಗಳಿದ್ದವು.

ಶ್ರೀ ವಿಶ್ವಪ್ರಸನ್ನ ತೀರ್ಥರು ಸೇರಿದಂತೆ ಐವರು ಪುತ್ರರು, ಆರು ಪುತ್ರಿಯರು ಹಾಗೂ ಬಂಧು ವರ್ಗವನ್ನು ಕೃಷ್ಣ ಭಟ್ಟರು ಅಗಲಿದ್ದಾರೆ. ಇವರು ಹಿರಿಯ ವಿದ್ವಾಂಸರಾಗಿದ್ದು,, ತುಳು ಲಿಪಿ ತುಳು ಸೌರ ಪಂಚಾಂಗ ಕರ್ತೃವಾಗಿದ್ದಾರೆ.

ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥರು ಕೃಷ್ಣ ಭಟ್‌ ಮತ್ತು ಯಮುನಾ ಅವರ ಮಗನಾಗಿ 1964ರ ಮಾರ್ಚ್‌ 3ರಂದು ಜನಿಸಿದ್ದರು. ಸುಮಾರು 24 ವರ್ಷದವರಿದ್ದಾಗ 1988ರಲ್ಲಿ ಅವರು ಪೇಜಾವರ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ವಿಶ್ವಪ್ರಸನ್ನರ ಮೂಲ ಹೆಸರು ವಾಸುದೇವ ಭಟ್‌.

ತಂದೆಯಿಂದ ಮತ್ತು ಗುರುಗಳಿಂದ ಪಡೆದ ಜ್ಞಾನ ಮತ್ತು ಜೀವನದ ಅನುಭವಗಳು ಪೇಜಾವರ ಮಠದಂಥ ದೊಡ್ಡ ಮಟ್ಟವನ್ನು ಮುನ್ನಡೆಸಲು ವಿಶ್ವಪ್ರಸನ್ನರಿಗೆ ಶಕ್ತಿ ನೀಡಿದೆ. ಅದರಲ್ಲೂ ತಂದೆಯವರು ಕೊಟ್ಟ ಸಂಸ್ಕಾರದ ಪಾಲು ತುಂಬ ದೊಡ್ಡದು.

ಇದನ್ನೂ ಓದಿ: Death News : ಹಿರಿಯ ಪತ್ರಕರ್ತ, ದಿ ವೀಕ್‌ನ ನಿವೃತ್ತ ರೆಸಿಡೆಂಟ್‌ ಎಡಿಟರ್‌ ಸಚ್ಚಿದಾನಂದ ಮೂರ್ತಿ ಇನ್ನಿಲ್ಲ

ತುಲಾಭಾರದ ಹಗ್ಗ ತುಂಡಾಗಿತ್ತು

ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ದೆಹಲಿಯಲ್ಲಿ ಪ್ರಸನ್ನಾಭಿನಂದನ ಕಾರ್ಯಕ್ರಮದ ನಡೆಯಿತು. ಈ ವೇಳೆ ಅವರಿಗೆ ನಡೆಸಿದ ತುಲಾಭಾರದ ವೇಳೆ ಅಚಾತುರ್ಯವೊಂದು ನಡೆದಿತ್ತು. ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಮಾಡಲಾಗುತ್ತಿತ್ತು. ಆ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದಿದೆ. ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ. ಇದು ಅವರ ಬದುಕಿನ ಕೊಂಡಿಯೊಂದು ಕಳಚಿಕೊಳ್ಳುವುದಕ್ಕೆ ನೀಡಲಾದ ಮುನ್ಸೂಚನೆಯೇ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

Exit mobile version