Site icon Vistara News

Jigani Shankar : ದಲಿತ ಪರ ಹೋರಾಟದ ಮುಂಚೂಣಿ ನಾಯಕ ಜಿಗಣಿ ಶಂಕರ್‌ ಇನ್ನಿಲ್ಲ

Jigani Shankar no more

ಆನೇಕಲ್‌: ಕರ್ನಾಟಕ ರಿಪಬ್ಲಿಕ್ ಸೇನೆಯ (Karnataka Republican sene) ರಾಜ್ಯಾಧ್ಯಕ್ಷರೂ ಆಗಿದ್ದ ಹಿರಿಯ ಹೋರಾಟಗಾರ, ದಲಿತ ಪರ ಹೋರಾಟದ ಮುಂಚೂಣಿ ನಾಯಕರಲ್ಲಿ ಒಬ್ಬರಾದ ಜಿಗಣಿ ಶಂಕರ್ (Jigani Shankar) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಿಂತಕರು ಹಾಗೂ ವಿಚಾರವಾದಿ ಎಂದು ಖ್ಯಾತರಾಗಿದ್ದ ಜಿಗಣಿ ಶಂಕರ್‌ ಜಿಗಣಿ ಬಳಿಯ ಬಂಡೇನಲ್ಲಸಂದ್ರ ಗ್ರಾಮದ ನಿವಾಸಿ. ಅವರು ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಕೋಲಾರಕ್ಕೆ ಹೋಗಿದ್ದಾಗ ಹೃದಯಾಘಾತ ಸಂಭವಿಸಿದೆ.

ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಜಿಗಣಿ ಬಳಿಯ ಬಂಡೇನಲ್ಲಸಂದ್ರ ಗ್ರಾಮದ ನಿವಾಸದ ಬಳಿ ವ್ಯವಸ್ಥೆ ಮಾಡಲಾಗಿದ್ದು, ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಬಂಡೇನಲ್ಲಸಂದ್ರ ಗ್ರಾಮದ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಸಲಿರುವುದಾಗಿ ಕುಟುಂಬಿಕರು ತಿಳಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ ತಾಲೂಕಿನ ಜಿಗಣಿಯವರಾದ ಶಂಕರ್ ಅವರು ದಲಿತ ಸಂಘರ್ಷ ಸಮಿತಿ ಚಳವಳಿಯ ಸಂದರ್ಭದಲ್ಲಿ ಮತ್ತು ಆ ನಂತರವೂ ನಿಷ್ಠುರ ಹೋರಾಟ ಮಾಡಿಕೊಂಡು ಬಂದಿದ್ದು, ಆಳವಾದ ಒಳನೋಟ ಉಳ್ಳವರಾಗಿದ್ದರು ಎಂದು ಸ್ನೇಹಿತರು ನೆನಪಿಸಿಕೊಂಡಿದ್ದಾರೆ.

ಜಿಗಣಿ ಶಂಕರ್ ಅವರು‌ ತಮ್ಮ ಬದುಕಿನುದ್ದಕ್ಕೂ ದಲಿತ ಸಂಘಟನೆ ಮತ್ತು ದಲಿತ ಪಕ್ಷಕಟ್ಟಿ ಹೋರಾಟ ಮಾಡಿದವರು.
ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳ ಪರವಾಗಿ ಅಪಾರ ಕಾಳಜಿ ಹೊಂದಿದ್ದರು. ಶಂಕರ್ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿ ಹೋರಾಟದ ಕಿಚ್ಚು ಹಚ್ಚಿದ್ದರು ಎನ್ನುವುದು ಅವರ ಗೆಳೆಯರ ನುಡಿ.

ಇದನ್ನೂ ಓದಿ: Death News: ರಂಗಕಲಾವಿದ ಚೇಳ್ಳಗುರ್ಕಿ ಅಂಗಡಿ ಲಕ್ಷ್ಮೀಶ ನಿಧನ

Exit mobile version