ಬೆಳಗಾವಿ: ತನ್ನ ಮೇಲೆ ಅತ್ಯಾಚಾರ (Physical Abuse) ನಡೆದಿದೆ ಎಂದು ಸುಳ್ಳು ದೂರು (Fake Complaint) ಕೊಟ್ಟಿದ್ದಕ್ಕೆ ದೂರುದಾರೆ ಸೇರಿ 13 ಮಂದಿ ಜೈಲು ಪಾಲಾಗಿದ್ದಾರೆ. ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಡಿಸಿದೆ. ಅತ್ಯಾಚಾರದ ದೂರುದಾರೆ ಬಿ.ವಿ ಸಿಂಧೂ ಸೇರಿ 13 ಜನರಿಗೆ 3 ವರ್ಷ ಆರು ತಿಂಗಳು ಜೈಲು ಶಿಕ್ಷೆ ಹಾಗೂ 13 ಆರೋಪಿಗಳಿಗೂ ತಲಾ 86 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶೆ ಎಲ್.ವಿಜಯಲಕ್ಷ್ಮಿದೇವಿ ಮಹತ್ವದ ತೀರ್ಪು ಹೊರಡಿಸಿದ್ದಾರೆ.
ಅಂದಿನ ಹೆಸ್ಕಾಂ ಸಹಾಯಕ ಅಧೀಕ್ಷಕ ಅಭಿಯಂತರ ತುಕಾರಾಮ್ ಮಜ್ಜಿಗೆ ವಿರುದ್ಧ ಬಿ.ವಿ ಸಿಂಧೂ ಅತ್ಯಾಚಾರ ಹಾಗೂ ಜೀವ ಬೆದರಿಕೆ ಕೇಸ್ ದಾಖಲಿಸಿದ್ದಳು. 2014 ನವೆಂಬರ್ 19ರಂದು ಮಾಳಮಾರುತಿ ಠಾಣೆಯಲ್ಲಿ ಅತ್ಯಾಚಾರ, ಜೀವ ಬೆದರಿಕೆ, ಆತ್ಮಹತ್ಯೆ ಪ್ರಚೋದನೆ ಕೇಸ್ ದಾಖಲಾಗಿತ್ತು.
ಈ ಪ್ರಕರಣದಲ್ಲಿ ವಿಚಾರಣೆ ನಡೆಸಿದ ಮಾಳಮಾರುತಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. ತನಿಖೆಯಲ್ಲಿ ಅತ್ಯಾಚಾರ, ಜೀವಬೆದರಿಕೆ ಹಾಕಿದ್ದು ಸುಳ್ಳು ಎಂದು ಬಯಲಾಗಿತ್ತು. ಆ ನಂತರ ಇತರೆ ಆರೋಪಗಳಿಂದ ಪ್ರಚೋದನೆಗೆ ಒಳಗಾಗಿ ಸುಳ್ಳು ದೂರು ನೀಡಿದ್ದಾಗಿ ದೂರುದಾರೆ ಸಿಂಧೂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದಳು. ಆದರೆ 2017ರಲ್ಲಿ ದೂರುದಾರೆ ಸಿಂಧೂ ಸೇರಿ 13 ಮಂದಿ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನ ಸಾಕ್ಷಿದಾರರಿಂದ 81 ಸಾಕ್ಷಿಗಳ ಸಂಗ್ರಹಿಸಿದ್ದರು. ಅಂದಿನಿಂದ ಸುದೀರ್ಘ ವಿಚಾರಣೆ ನಡೆಸಿ ವಾದ-ವಿವಾದ ಆಲಿಸಿದ ನ್ಯಾಯಾಲಯವು ಗುರುವಾರ ತೀರ್ಪು ಪ್ರಕಟಿಸಿದೆ.
ಇದನ್ನೂ ಓದಿ: Actor Darshan : ನಟ ದರ್ಶನ್‌ಗಾಗಿ ಊಟ ಬಿಟ್ಟು ಜೈಲಿನ ಹೊರಗೆ ವಿಶೇಷಚೇತನ ಯುವತಿ ಗೋಳಾಟ
ಮಗಳನ್ನೇ ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ
ಮಂಡ್ಯ: ಅಪ್ರಾಪ್ತ ವಯಸ್ಸಿನ ಮಗಳನ್ನು ಅಪ್ಪನೇ ಗರ್ಭಿಣಿ (Physical abuse) ಮಾಡಿರುವ ಆರೋಪ ಮಂಡ್ಯ (Mandya news) ಗುತ್ತಲಿನ ಮುನೀರ್ ಎಂಬಾತನ ಮೇಲೆ ಬಂದಿದೆ. ಈ ಕೃತ್ಯದಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮುನೀರ್‌ನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಂಡ್ಯ ನಗರದ ಗುತ್ತಲಿನಲ್ಲಿ ಈ ಘಟನೆ ನಡೆದಿದೆ. ಮುನೀರ್ ತನ್ನ ಅಪ್ರಾಪ್ತ ಮಗಳನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿದ್ದಾನೆ. ಗರ್ಭಿಣಿಯಾದ ಬಾಲಕಿ ನಿನ್ನೆ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಇದನ್ನು ಕೇಳಿ ಕೆರಳಿ ಕೆಂಡವಾದ ಗ್ರಾಮಸ್ಥರು ಮುನೀರ್‌ಗೆ ನಡು ರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಮುನೀರ್‌ನನ್ನು ಪ್ರಶ್ನಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರ ತಿಳಿದ ಮಂಡ್ಯ ಈಸ್ಟ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರ ಕೈಯಿಂದ ಆರೋಪಿ ಮುನೀರ್‌ನನ್ನು ಬಿಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಮಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ