ಪಂಚಮಸಾಲಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ 2ಸಿ ಮತ್ತು 2ಡಿ ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ಇದು ರಾಜ್ಯ ಸರ್ಕಾರಕ್ಕೆ ಸಣ್ಣ ಜೀವದಾನ ಎನ್ನಲಾಗಿದೆ.
ಕಾಡು ದಾರಿಯಲ್ಲಿ ಅತಿ ವೇಗದಿಂದ ಚಲಿಸುವ ರೈಲುಗಳು (Train service in forest) ಪ್ರಾಣಿಗಳ ಪ್ರಾಣ ಕಸಿಯುತ್ತಿವೆ. ಹೀಗಾಗಿ ರಾತ್ರಿ ಹೊತ್ತಿನಲ್ಲಿ ವೇಗ ತಗ್ಗಿಸಲು ನಿರ್ದೇಶಿಸಿ ಎಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
2014ರ ಪ್ರಕರಣವೊಂದು ಎಡಿಜಿಪಿ ಅಲೋಕ್ ಕುಮಾರ್ (ADGP Alok kumar) ಅವರನ್ನು ಸುತ್ತಿಕೊಂಡಿದೆ. ಈಗ ರಾಜಕಾರಣಿಯಾಗಿರುವ ಫೈಟರ್ ರವಿ ಸಲ್ಲಿಸಿದ ಲಂಚದ ಆರೋಪದ ವಿಚಾರಣೆ ಮತ್ತೆ ಆರಂಭಗೊಂಡಿದ್ದು, ಫೈಟರ್ ರವಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಹಿಂದು ಧರ್ಮಕ್ಕೆ ಅವಹೇಳನವಾಗುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದಡಿ ಪೊಲೀಸರು ನಟ ಚೇತನ್ ಅಹಿಂಸಾ (Actor Chetan Ahimsa) ಅವರನ್ನು ಬಂಧಿಸಿದ್ದಾರೆ.
ತಾನೊಬ್ಬಳು ಭಾರತೀಯೆ ಎಂದು ಹೇಳಿಕೊಂಡು ವೈದ್ಯಕೀಯ ಸೀಟು (Medical seat) ಪಡೆದು, ಪದವಿ ಮುಗಿಸಿದ ಬಳಿಕ ಅಮೆರಿಕಕ್ಕೆ ಹೊರಟ ಯುವತಿಗೆ ಹೈಕೋರ್ಟ್ ತಪರಾಕಿ ನೀಡಿದೆ. ಎಲ್ಲಾ ಹಣ ಕಟ್ಟಿ ಹೋಗಿ ಎಂದಿದೆ.
ಐದು ಮತ್ತು ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ಅನುಮತಿ ನೀಡಿದ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಅದರ ವಿಚಾರಣೆ ಮಾರ್ಚ್ 27ರಂದು ನಡೆಯಲಿದೆ.
ಪತ್ರಕರ್ತೆ ಗೌರಿ ಅವರ ಕೊಲೆ (Gowri murder Case) ನಡೆದ ದಿನ ಅವರು ಮನೆಗೆ ಬಂದದ್ದು ಮತ್ತು ಅವರ ಮೇಲೆ ನಡೆದ ದಾಳಿಯ ವಿಡಿಯೊಗಳನ್ನು ನೋಡಲು ಆರೋಪಿಗಳಿಗೆ ಅವಕಾಶ ನೀಡಲು ಕೋರ್ಟ್ ನಿರ್ಧರಿಸಿದೆ. ಅದನ್ನು ತೋರಿಸಲು...