ಬೆಂಗಳೂರು: ಸೋಮವಾರ ಸುರಿದ ಧಾರಾಕಾರ ಮಳೆಗೆ ಕಂಬದಿಂದ ಕೆಳಕ್ಕೆ ಬಿದ್ದ ವಿದ್ಯುತ್ ತಂತಿಯಿಂದ ಯುವಕ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಪಾರ್ಕ್ನಲ್ಲಿ ಮರದ ಸಮೀಪ ನಿಂತಿದ್ದ ಯುವಕ ಕಿಶೋರ್ {27} ಮರದ ಮೇಲೆ ಹಾದುಹೋಗಿರುವ ಹೈ ಟೆನ್ಷನ್ ವಿದ್ಯುತ್ ವೈರ್ ತಗಲಿ ಸಾವಿಗೀಡಾಗಿದ್ದಾರೆ. ಇದು ಸಂಜಯ್ ನಗರದಲ್ಲಿ ನಡೆದ ಘಟನೆ.
ಮಂಗಮ್ಮನಪಾಳ್ಯದ ನಿವಾಸಿ ಕಿಶೋರ್ ಸಂಬಂಧಿಕರ ಸಂಕಟ ವಿಕ್ಟೋರಿಯಾ ಆಸ್ಪತ್ರೆ ಬಳಿ ಮುಗಿಲು ಮುಟ್ಟಿತ್ತು. ನನ್ನ ಮಗನನ್ನ ಬಲಿ ತೆಗೆದುಕೊಂಡರು ಒಬ್ಬನೇ ಮಗ ನನಗೆ ಮನೆಗೆ ಆಧಾರವಾಗಿದ್ದ ಎಂದು ಯುವಕನ ತಾಯಿ ಜಯಲಕ್ಷ್ಮಮ್ಮ ತಮ್ಮ ನೋವು ತೋಡಿಕೊಂಡಿದ್ದಾರೆ. ನಿನ್ನೆ ಮಧ್ಯಾಹ್ನ ನನ್ನ ಮಗ ಪೋನ್ ನಲ್ಲಿ ಮಾತಾಡಿದ್ದ. ಇವತ್ತು ಊರಲ್ಲಿ ಜಾತ್ರೆ ಇತ್ತು ಹೋಗಬೇಕಿತ್ತು. ಆದರೆ ಮಗನ ಹೆಣದ ಜತೆಗೆ ಈಗ ಹೋಗುವಂತಾಗಿದೆ. ಆ ಮರದ ರೆಂಬೆಗಳನ್ನ ಮೊದಲೇ ಕಟ್ ಮಾಡಿದ್ದಿದ್ದರೆ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ ಎಂದು ಗೋಳಾಡಿದರು.
ಬೆಂಗಳೂರಿನಲ್ಲಿ ಮಳೆ ಬಂದರೆ ಸಾಕು ಒಂದೆಲ್ಲ ಒಂದು ಅವಾಂತರಗಳು ಸಂಭವಿಸುತ್ತದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ಹಾಗಾಗಿ ಈ ಬಗ್ಗೆ ಬಿಬಿಎಂಪಿ ಮತ್ತು ಸಂಬಂಧಪಟ್ಟ ಇಲಾಖೆ ಕ್ರಮ ಕೈಗೊಳ್ಳಬೇಕು ಎಂಬುದು ಜನರ ಬೇಡಿಕೆ.
ಇದನ್ನೂ ಓದಿ | ಸೆಲ್ಫಿ ತೆಗೆಯಲು ಹೋದ ಕಾಲೇಜು ವಿದ್ಯಾರ್ಥಿಗಳಿಬ್ಬರು ನೀರುಪಾಲು