ಜಬಲ್ಪುರ: ಮುಂಬೈನಲ್ಲಿ ಅಪ್ಪನೊಂದಿಗೆ ವಾಸ ಮಾಡುತ್ತಿದ್ದ 16 ವರ್ಷದ ಹುಡುಗಿಯೊಬ್ಬಳು ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ತನ್ನ ಅಜ್ಜಿ (ತಂದೆಯ ಅಮ್ಮ) ಮನೆಗೆ ಹೋಗಿದ್ದಳು. ಆದರೆ ಅಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಮೃತಪಟ್ಟಿದ್ದಾಳೆ. ಹುಡುಗಿಯ ಮೇಲೆ ಅತ್ಯಾಚಾರ ಮಾಡಿದ್ದು ಆಕೆಯ ಇಬ್ಬರು ಸಂಬಂಧಿಕರೇ. ಹುಡುಗಿಯನ್ನು ಹೆದರಿಸಿ-ಬೆದರಿಸಿ ಅಲ್ಲೇ ಉಳಿಸಿಕೊಂಡು, ಹಲವು ದಿನಗಳ ಕಾಲ ನಿರಂತರವಾಗಿ ರೇಪ್ ಮಾಡಿದ್ದಾರೆ. ಹೀಗೆ ಒಂದು ದಿನ ಇವರ ಕ್ರೌರ್ಯ ಅಜ್ಜಿಯ ಕಣ್ಣಿಗೆ ಬಿದ್ದು, ತಪ್ಪಿಸಲೂ ಬಂದರು. ಆದರೆ ದುರುಳರು ಆ ವಯಸ್ಸಾದ ಮಹಿಳೆಯ ಮೇಲೆಯೂ ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗಸ್ಟ್ 11ರಂದು ಜಬಲ್ಪುರಕ್ಕೆ ಹೋಗಿದ್ದ ಹುಡುಗಿಯ ಮೇಲೆ ಆಕೆಯ ಸೋದರ ಸಂಬಂಧಿಗಳು ರೇಪ್ ಮಾಡಲು ಪ್ರಾರಂಭಿಸಿದ್ದು ಆಗಸ್ಟ್ 13ರಿಂದ. ಅತ್ಯಾಚಾರ ಮಾಡಿರುವ ಜತೆ ಅವಳಿಗೆ ಹೊಡೆದು ಹಲ್ಲೆಯನ್ನೂ ನಡೆಸಿದ್ದಾರೆ. ಆಕೆಯ ಪರಿಸ್ಥಿತಿ ತೀರ ಹದಗೆಟ್ಟಾಗ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ದಿನ ಚಿಕಿತ್ಸೆ ನೀಡಿದರೂ ಫಲಿಸದೆ 21ನೇ ತಾರೀಖಿನಂದು ಸಾವನ್ನಪ್ಪಿದ್ದಾರೆ. ಜಬಲ್ಪುರದಲ್ಲಿಯೇ ಹುಡುಗಿಯ ಅಂತಿಮ ಸಂಸ್ಕಾರವೂ ಆಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಮೃತ ಹುಡುಗಿಯ ತಂದೆ, ನನ್ನ ಮಗಳ ಮೇಲೆ ಗ್ಯಾಂಗ್ ರೇಪ್ ಆಗಿದ್ದಾಗಿ ನನ್ನ ತಾಯಿ ನನಗೆ ತಿಳಿಸಿದರು ಎಂದು ಹೇಳಿದ್ದಾಗಿ ಜಬಲ್ಪುರ ಎಎಸ್ಪಿ ಪ್ರದೀಪ್ ಕುಮಾರ್ ತಿಳಿಸಿದ್ದಾರೆ. ಹಾಗೇ, ಆ ವ್ಯಕ್ತಿಯ ತಾಯಿ ಅಂದರೆ, ಮೃತ ಹುಡುಗಿಯ ಅಜ್ಜಿಯ ಮೇಲೆ ರೇಪ್ ಆಗಿದ್ದನ್ನೂ ಸ್ಪಷ್ಟಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಸೇರಿ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿದೆ. ಒಬ್ಬನನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನೊಬ್ಬ ತಪ್ಪಿಸಿಕೊಂಡಿದ್ದಾನೆ.
ಇದನ್ನೂ ಓದಿ:Bilkis Bano Case | ಬಿಲ್ಕಿಸ್ ಬಾನೊ ಅತ್ಯಾಚಾರ ಆರೋಪಿಗಳು ಮತ್ತೆ ಜೈಲು ಸೇರ್ತಾರಾ?