Site icon Vistara News

Delhi Double Murder: ಹಣಕ್ಕಾಗಿ ಬಿದ್ದವು ಇಬ್ಬರು ಸ್ತ್ರೀಯರ ಹೆಣ; ಮಾಡದ ತಪ್ಪಿಗೆ ಸಹೋದರಿಯರು ಬಲಿ

Two Women Shot Dead In Delhi

2 Women Shot Dead in Delhi, Cops Say Assailants Came Looking For Their Brother

ನವದೆಹಲಿ: ರಾಷ್ಟ್ರ ರಾಜಧಾನಿಯು ಅಪರಾಧ ಪ್ರಕರಣಗಳ ರಾಜಧಾನಿಯಾಗುತ್ತಿದೆ. ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ, ಬಾಲಕಿಯರ ಕೊಲೆ ಪ್ರಕರಣಗಳು ದೇಶಾದ್ಯಂತ ಸುದ್ದಿಯಾಗುತ್ತಿವೆ. ಇದರ ಬೆನ್ನಲ್ಲೇ, ದೆಹಲಿಯಲ್ಲಿ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು (Delhi Double Murder) ಹೆಣ್ಣುಮಕ್ಕಳ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಾಗೆಯೇ, ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಅಂಬೇಡ್ಕರ್‌ ಬಸ್ತಿ ಪ್ರದೇಶದಲ್ಲಿ ಭಾನುವಾರ ಬೆಳಗಿನ ಜಾವ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ಮೂಲಕ ಇಬ್ಬರು ಮಹಿಳೆಯರನ್ನು ಹತ್ಯೆಗೈದಿದ್ದಾರೆ. ಹತ್ಯೆಗೀಡಾದವರನ್ನು ಪಿಂಕಿ (30) ಹಾಗೂ ಜ್ಯೋತಿ (29) ಎಂದು ಗುರುತಿಸಲಾಗಿದೆ. ಇನ್ನು ಗುಂಡಿನ ದಾಳಿ ನಡೆಸಿದವರನ್ನು ಅರ್ಜುನ್‌ ಹಾಗೂ ಮೈಕೆಲ್‌ ಎಂಬುದಾಗಿ ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಭಾನುವಾರ ಬೆಳಗಿನ ಜಾವ 4.40ರ ಸುಮಾರಿಗೆ ಆರ್‌.ಕೆ.ಪುರಂ ಪಿಸಿಆರ್‌ಗೆ ವ್ಯಕ್ತಿಯೊಬ್ಬರು ಕರೆ ಮಾಡಿ, ನನ್ನ ಸಹೋದರಿಯರ ಮೇಲೆ ಗುಂಡಿನ ದಾಳಿ ನಡೆದಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಪಿಂಕಿ ಹಾಗೂ ಜ್ಯೋತಿ ಅವರನ್ನು ಕೂಡಲೇ ಎಸ್‌.ಜೆ. ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Lovers suicide: ಎರಡೇ ದಿನದ ಅಂತರದಲ್ಲಿ ಪ್ರೇಮಿಗಳ ಆತ್ಮಹತ್ಯೆ; Misunderstading ಕಾರಣ!

ಗುರಿ ಇಟ್ಟಿದ್ದೇ ಬೇರೆಯವರಿಗೆ

“ಪಿಂಕಿ ಹಾಗೂ ಜ್ಯೋತಿ ಅವರನ್ನು ಕೊಲ್ಲುವ ಉದ್ದೇಶವೇ ದುಷ್ಕರ್ಮಿಗಳಿಗೆ ಇರಲಿಲ್ಲ” ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ. “ಪಿಂಕಿ ಹಾಗೂ ಜ್ಯೋತಿಯ ಸಹೋದರನ ಜತೆ ಮಧ್ಯೆ ದುಷ್ಕರ್ಮಿಗಳಿಗೆ ಹಣಕಾಸು ವಿಚಾರಕ್ಕೆ ಬಿಕ್ಕಟ್ಟು ಇತ್ತು. ಹಾಗಾಗಿ, ಇಬ್ಬರ ಸಹೋದರನನ್ನು ಕೊಲ್ಲಲು ದುಷ್ಕರ್ಮಿಗಳು ಬಂದಿದ್ದರು. ಆಗ, ಸಹೋದರ ಸಿಗಲಿಲ್ಲ ಎಂದು ಇಬ್ಬರು ಹೆಣ್ಣುಮಕ್ಕಳಿಗೆ ಗುಂಡು ಹಾರಿಸಿ, ಕೊಲೆ ಮಾಡಿದ್ದಾರೆ” ಎಂದು ಹೇಳಿದ್ದಾರೆ. ಕೊಲೆ ನಡೆಯುತ್ತಲೇ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದ ದೆಹಲಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಹೇಳಿದ್ದಾರೆ.

Exit mobile version