ಮುಂಬೈ: ದೇಶದಲ್ಲಿ ಹೆಣ್ಣುಮಕ್ಕಳ ಸುರಕ್ಷತೆ ಇಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಅಷ್ಟರಮಟ್ಟಿಗೆ, ಕಾಂಮಾಧರು ದೇಶದಲ್ಲಿ ಭೀತಿಯ ವಾತಾವರಣ ನಿರ್ಮಿಸಿದ್ದಾರೆ. ಇದರಲ್ಲಿ ವ್ಯವಸ್ಥೆಯ ವೈಫಲ್ಯವೂ ಇದೆ. ಪರಿಸ್ಥಿತಿ ಹೀಗಿರುವಾಗಲೇ ಮುಂಬೈನಲ್ಲಿ 28 ವರ್ಷದ ಫುಡ್ ಡೆಲಿವರಿ ಬಾಯ್ ಒಬ್ಬ ಶ್ವಾನದ ಮೇಲೆ ಅತ್ಯಾಚಾರ (Dog Rapist) ಎಸಗಿದ್ದಾನೆ. ಮಾಡಿದ ತಪ್ಪಿಗೆ ಸದ್ಯ ಕಂಬಿ ಎಣಿಸುತ್ತಿದ್ದಾನೆ.
ಸೆಂಟ್ರಲ್ ಮುಂಬೈನ ಪೊವೈನಲ್ಲಿರುವ ಹೀರಾ ಪನ್ನಾ ಶಾಪಿಂಗ್ ಮಾಲ್‌ನ ಬಾಲ್ಕನಿಯಲ್ಲಿ ಇತ್ತೀಚೆಗೆ ವ್ಯಕ್ತಿಯು ಆರು ತಿಂಗಳ ಶ್ವಾನದ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನು ತಿಳಿದ ಪ್ರಾಣಿಗಳ ರಕ್ಷಣಾ ಹೋರಾಟಗಾರರೂ ಆದ ಬಾಂಬೆ ಪ್ರಾಣಿಗಳ ಹಕ್ಕುಗಳ ಎನ್‌ಜಿಒ ಸದಸ್ಯೆ ಮಿನು ಶೇಠ್ ಎಂಬುವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದರ ಕುರಿತು ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ಅಕ್ಟೋಬರ್ 29ರಂದು ಬಾಂಬೆ ಪ್ರಾಣಿಗಳ ಹಕ್ಕುಗಳ ಎನ್‌ಜಿಒ ಅಧ್ಯಕ್ಷ ವಿಜಯ್ ಮೊಹನ್ನಿ ಎಂಬುವರು ಮಿನು ಶೇಠ್ ಅವರಿಗೆ ಲೈಂಗಿಕ ದೌರ್ಜನ್ಯದ ವಿಡಿಯೊ ಕಳುಹಿಸಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡುವಂತೆ ಕೋರಿದ್ದಾರೆ. ಇದಾದ ಬಳಿಕ ಮಿನು ಅವರು ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Two Finger Test | ಅತ್ಯಾಚಾರ ಕೇಸ್‌ನಲ್ಲಿ ‘ಟು ಫಿಂಗರ್ ಟೆಸ್ಟ್’ ರದ್ದುಗೊಳಿಸಿದ ಸುಪ್ರೀಂ ಕೋರ್ಟ್