ವಯಾನಾಡ್: ಪಾಲುದಾರಿಕೆಯಲ್ಲಿ ಮಾಡುವ ಉದ್ಯಮಗಳಲ್ಲಿ ಬರುಬರುತ್ತ ಮನಸ್ತಾಪಗಳು, ಹೊಂದಾಣಿಕೆ ಆಗದೆ ಇರುವುದು ಸಹಜ. ಆ ಉದ್ಯಮಿಗಳು ಪ್ರಬುದ್ಧರಾಗಿದ್ದರೆ, ಚಿಕ್ಕಪುಟ್ಟ ಮನಸ್ತಾಪಗಳು, ಸಂಘರ್ಷಗಳನ್ನೆಲ್ಲ ಕುಳಿತು ಬಗೆಹರಿಸಿಕೊಳ್ಳುತ್ತಾರೆ ಅಥವಾ ಹೊಂದಾಣಿಕೆ ಸಾಧ್ಯವೇ ಇಲ್ಲದಾಗ ಪಾರ್ಟ್ನರ್ಶಿಪ್ನ್ನು ಮುರಿದುಕೊಳ್ಳುತ್ತಾರೆ. ಆದರೆ ಕೆಲವರು ಮಿತಿಮೀರಿ ವರ್ತನೆ ಮಾಡುತ್ತಾರೆ. ದ್ವೇಷ-ಪ್ರತೀಕಾರಕ್ಕೆ ಮುಂದಾಗುತ್ತಾರೆ. ಹಲ್ಲೆ, ಕೊಲೆಯಂಥ ಕ್ರೈಂಗಳಿಗೂ ಕೈ ಹಾಕುತ್ತಾರೆ. ಇಲ್ಲೊಬ್ಬ ವ್ಯಕ್ತಿಯೂ ಮಾಡಿದ್ದು ಅದನ್ನೇ…!
ಕೇರಳದ ವಯಾನಾಡ್ನಲ್ಲಿ ಜಿತೇಶ್ (45) ಎಂಬಾತ ಜಯಪ್ರಕಾಶ್ ಎಂಬ ಉದ್ಯಮಿಯೊಂದಿಗೆ ಉದ್ಯಮದಲ್ಲಿ ಪಾಲುದಾರಿಕೆ ಹೊಂದಿದ್ದ. ಆದರೆ ಇವರಿಬ್ಬರ ಮಧ್ಯೆ ಕೆಲವು ವಿವಾದಗಳು ಭುಗಿಲೆದ್ದಿದ್ದವು. ಸಂಘರ್ಷ ನಡೆಯುತ್ತಿತ್ತು. ಈ ಜಿತೇಶ್ ಈಗ ಜಯಪ್ರಕಾಶ್ ಅವರ ನಾಲ್ಕು ವರ್ಷದ ಮಗನನ್ನು ಹತ್ಯೆ ಮಾಡಿದ್ದಾನೆ. ಆ ಮಗು ಆದಿದೇವ್ ಮತ್ತು ಅವನ ಅಮ್ಮ (ಜಯಪ್ರಕಾಶ್ ಪತ್ನಿ) ಅನಿಲಾ ಅಂಗನವಾಡಿ ಬಳಿ ಇದ್ದಾಗ ಜಿತೇಶ್ ಮಾರಕಾಸ್ತ್ರದಿಂದ ಇಬ್ಬರ ಮೇಲೆಯೂ ಹಲ್ಲೆ ಮಾಡಿದ್ದಾನೆ. ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದರಲ್ಲಿ ಜಿತೇಶ್ ಸಾವನ್ನಪ್ಪಿದ್ದಾನೆ. ಅನಿಲಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ದ್ವೇಷದ ಕೊಲೆ ಎಂದು ಗೊತ್ತಾಗುತ್ತಿದೆ. ಆದರೆ ಸಂಪೂರ್ಣವಾಗಿ, ಆಳವಾಗಿ ತನಿಖೆ ನಡೆಸಿದ ಬಳಿಕವೇ ಪೂರ್ಣ ಮಾಹಿತಿ ನೀಡುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜಪಾನ್‌ನಲ್ಲಿ ವರ್ಷಕ್ಕೊಂದು Gun ವಿತರಣೆಯಾದರೆ ದೊಡ್ಡ ವಿಷಯ! ಹೀಗಿರುವಾಗ…