Site icon Vistara News

ವಿಕೃತ ಕಾಮಿಯ ದೌರ್ಜನ್ಯಕ್ಕೆ ನರಳಿದ ಹಸು; ಕೂಗು ಕೇಳಿ ಹೋದ ಮಾಲೀಕ ದೃಶ್ಯ ನೋಡಿ ಬೆಚ್ಚಿ ನಿಂತಿದ್ದ !

mumbai Man Arrested

ಪುಣೆ: ವಿಕೃತ ಕಾಮಿಗಳು ಪ್ರಾಣಿಗಳನ್ನೂ ಬಿಡುವುದಿಲ್ಲ. ನಾಯಿ, ಆಡು, ಬೆಕ್ಕು, ಎಮ್ಮೆಗಳ ಮೇಲೆ ಮನುಷ್ಯ ಅತ್ಯಾಚಾರ ಮಾಡಿದ ಪ್ರಕರಣಗಳನ್ನು ಈ ಹಿಂದೆಯೂ ನೋಡಿದ್ದೇವೆ. ಪುಣೆಯಲ್ಲೊಬ್ಬ ಕಾಮುಕ ಹಸುವಿನ ಮೇಲೆ ತನ್ನ ತೃಷೆ ತೀರಿಸಿಕೊಳ್ಳಲು ಹೋಗಿ ಈಗ ಅರೆಸ್ಟ್‌ ಆಗಿದ್ದಾನೆ. ಆರೋಪಿಯ ಹೆಸರು ದೀಪಕ್‌ ರಾಜವಾಡೆ ಎಂದಾಗಿದ್ದು ಕುಸ್‌ಗಾಂವ್‌ ನಿವಾಸಿ. ಐಪಿಸಿ ಸೆಕ್ಷನ್‌ 377 ರಡಿ ಲೂನಾವಾಲಾ ಪೊಲೀಸ್‌ ಸ್ಟೇಶನ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹಸುವಿನ ಮೇಲೆ ದೀಪಕ್‌ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ದೂರು ನೀಡಿದ್ದು ಸತೀಶ್‌ ದಗ್ಡು ಕೊಕಾರೆ. ʼಮೇ 31ರ ರಾತ್ರಿ ನಮ್ಮ ಮನೆಯ ಹಸು ಒಮ್ಮೆಲೇ ವಿಚಿತ್ರವಾಗಿ ಕೂಗಲು ಶುರು ಮಾಡಿತು. ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳಿಗೆ ಏನಾಯಿತು ಎಂದು ನೋಡಲು ಹೋದಾಗ ನನಗೇ ಶಾಕ್‌ ಆಯಿತು. ನಗ್ನನಾಗಿದ್ದ ಯುವಕನೊಬ್ಬ ಹಸುವಿನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ಆತ ದೀಪಕ್‌ ಎಂದು ನನಗೆ ಕೂಡಲೇ ಗೊತ್ತಾಯಿತು. ಯಾಕೆಂದರೆ ಅವನು ಅಲ್ಲೇ ನಮ್ಮ ಮನೆಯ ಕೊಟ್ಟಿಗೆಯ ಪಕ್ಕದಲ್ಲೇ ವಾಸ ಮಾಡುತ್ತಾನೆʼ ಎಂದು ಹೇಳಿದ್ದಾರೆ.

ಅಂದು ಕೊಟ್ಟಿಗೆಯಲ್ಲಿ ಗಲಾಟೆ ಕೇಳುತ್ತಿದ್ದಂತೆ ಸತೀಶ್‌ ಹಿಂದೆ ಅವರ ಕುಟುಂಬದವರೆಲ್ಲ ಬಂದಿದ್ದಾರೆ. ಎಲ್ಲರೂ ಸೇರಿ ದೀಪಕ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಷ್ಟೇ ಅಲ್ಲ, ದೀಪಕ್‌ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿದೆ.

ಇದನ್ನೂ ಓದಿ: ಹಾರರ್‌ ಫಿಲ್ಮ್‌ ಸೈಡ್‌ ಎಫೆಕ್ಟ್‌: ಮಕ್ಕಳ ಕೈಗೆ ಮೊಬೈಲ್‌ ಕೊಟ್ಟೀರಿ ಜೋಕೆ

Exit mobile version