Site icon Vistara News

ಬಾಲಕಿ ಮೇಲೆ 2 ವರ್ಷ ನಿರಂತರ ರೇಪ್​; ಆರೋಪಿಗೆ 142 ವರ್ಷ ಕಠಿಣ ಜೈಲು ಶಿಕ್ಷೆ, 5 ಲಕ್ಷ ರೂ. ದಂಡ

pocso

ತಿರುವನಂತಪುರಂ: 10 ವರ್ಷದ ಬಾಲಕಿಗೆ ಸತತ ಎರಡು ವರ್ಷ ಲೈಂಗಿಕ ಕಿರುಕುಳ ನೀಡಿದ 41 ವರ್ಷದ ವ್ಯಕ್ತಿಗೆ 142 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿ ಕೇರಳದ ಪಥನಂತಿಟ್ಟದಲ್ಲಿರುವ ಪೋಕ್ಸೋ ನ್ಯಾಯಾಲಯವೊಂದು ಆದೇಶ ನೀಡಿದೆ. ಅಷ್ಟೇ ಅಲ್ಲ, 5 ಲಕ್ಷ ರೂಪಾಯಿ ದಂಡವನ್ನು ಪಾವತಿಸಲು ಆ ವ್ಯಕ್ತಿ ವಿಫಲನಾದರೆ ಮತ್ತೂ ಹೆಚ್ಚುವರಿಯಾಗಿ ಮೂರು ವರ್ಷ ಅಂದರೆ 145 ವರ್ಷಗಳ ಕಾಲ ಜೈಲು ಶಿಕ್ಷೆ ಅನುಭವಿಸೇಕು ಎಂದು ನ್ಯಾಯಾಲಯ ಹೇಳಿದೆ.

ಆರೋಪಿಯ ಹೆಸರು ಆನಂದನ್​ ಪಿ.ಆರ್. (ಬಾಬು) ಎಂದಾಗಿದ್ದು, 2019ರಿಂದ 2021ರವರೆಗೆ ನಿರಂತರವಾಗಿ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈತ ಆ ಬಾಲಕಿಯ ಸಂಬಂಧಿಯೇ ಆಗಿದ್ದ. ಹುಡುಗಿಯ ಮನೆಯಲ್ಲೇ ವಾಸವಾಗಿದ್ದ. ಆ ಹುಡುಗಿಯ ಪಾಲಕರ ಕಣ್ತಪ್ಪಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಆತನ ವಿರುದ್ಧ ದೂರು ದಾಖಲಾಗಿತ್ತು. ಸಂತ್ರಸ್ತ ಹುಡುಗಿಯ ಹೇಳಿಕೆ, ಆಕೆಯ ಪಾಲಕರ ಹೇಳಿಕೆಗಳು, ವೈದ್ಯಕೀಯ ವರದಿಗಳೆಲ್ಲವೂ ಆಕೆಯ ಮೇಲೆ ನಡೆದಿದ್ದ ಲೈಂಗಿಕ ದೌರ್ಜನ್ಯವನ್ನು ಸ್ಪಷ್ಟಪಡಿಸಿದ್ದವು. ಅಂತಿಮವಾಗಿ ತಿರುವಲ್ಲಾ ಪೊಲೀಸ್​ ಠಾಣೆ ಅಧಿಕಾರಿ ಕೋರ್ಟ್​​ಗೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಇದೀಗ ಪೋಕ್ಸೋ ನ್ಯಾಯಾಲಯ ಆತನಿಗೆ 142 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬಾಬುಗೆ ಈಗಾಗಲೇ 41 ವರ್ಷ ಆಗಿದ್ದು, ಆತ 100 ವರ್ಷ ಬದುಕಿದರೂ 60 ವರ್ಷಗಳ ಕಾಲ ಜೈಲಿನಲ್ಲಿಯೇ ಇರಬೇಕು. ಪೋಕ್ಸೋ ಕಾಯ್ದೆಗೆ 2019ರಲ್ಲಿ ತಂದ ತಿದ್ದುಪಡಿ ಅನ್ವಯ, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದೆ. ಆದರೆ ವ್ಯಕ್ತಿ ಬದುಕಿರುವುದೇ ಅನುಮಾನ ಎಂಬಷ್ಟು ವರ್ಷ ಜೈಲು ಶಿಕ್ಷೆ ನೀಡಿದ ಅಪರೂಪದ ಪ್ರಕರಣಗಳಲ್ಲಿ ಇದೂ ಒಂದು.

ಇದನ್ನೂ ಓದಿ: POCSO ACT | ಏನಿದು ಪೋಕ್ಸೋ ಕಾಯಿದೆ, ಅಪರಾಧಿಗಳಿಗೆ ಶಿಕ್ಷೆ ಏನು?

Exit mobile version