Site icon Vistara News

ಅಶ್ಲೀಲ ವಿಡಿಯೊ ನೋಡಿದ ಬಳಿಕ ಮಕ್ಕಳನ್ನು ಹುಡುಕುತ್ತ ಮೈಲುಗಟ್ಟಲೆ ನಡೆಯುತ್ತಿದ್ದ, ಕಾಮ ತೀರಿಸಿಕೊಂಡು ಕೊಲ್ಲುತ್ತಿದ್ದ!

murder Case

ನವ ದೆಹಲಿ: ಅಮಲೇರಿ..ಮಿಕ್ಕುವಷ್ಟು ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ. ಅಶ್ಲೀಲ ವಿಡಿಯೊಗಳನ್ನು ನೋಡುತ್ತಿದ್ದ. ಕಾಮವನ್ನೇರಿಸಿಕೊಂಡ ಆ ದುರುಳ ಕಿಲೋಮೀಟರ್​ಗಟ್ಟಲೆ ನಡೆದು ಮಕ್ಕಳನ್ನೇ ಹುಡುಕಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಬಾಲಕ/ಬಾಲಕಿ ಎಂಬ ಬೇಧ ಇರುತ್ತಿರಲಿಲ್ಲ. ಸಿಕ್ಕ ಮಕ್ಕಳನ್ನು ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ. ಇಂಥ ದುಷ್ಟ ರವೀಂದ್ರ ಕುಮಾರ್​​​ ವಿರುದ್ಧ ಹತ್ತು-ಹಲವು ಕೇಸ್​ಗಳು ದಾಖಲಾಗಿವೆ. 2015ರಿಂದಲೂ ಆತ ಜೈಲಿನಲ್ಲಿ ಇದ್ದುಕೊಂಡು ಕೋರ್ಟ್​ನಲ್ಲಿ ವಿಚಾರಣೆ ಎದುರಿಸುತ್ತಿದ್ದಾನೆ. ಇತ್ತೀಚೆಗೆ ಒಂದು ಕೇಸ್​ನಲ್ಲಿ ರವೀಂದ್ರ ಕುಮಾರ್​​ನನ್ನು ದೋಷಿ ಎಂದು ದೆಹಲಿಯ ಒಂದು ಕೋರ್ಟ್​ ತೀರ್ಪು ಕೊಟ್ಟಿದ್ದು, ಇನ್ನೆರಡು ವಾರಗಳಲ್ಲಿ ಶಿಕ್ಷೆ ಪ್ರಕಟಗೊಳ್ಳಲಿದೆ. ಆದರೆ ಈ ರವೀಂದ್ರನ ಭಯಂಕರ ದುಷ್ಟತನ ಬೆಚ್ಚಿಬೀಳಿಸುವಂತಿದೆ.

ರವೀಂದ್ರ ಕುಮಾರ ದೆಹಲಿಯ ಕರಳಾ ಎಂಬಲ್ಲಿ ಕೂಲಿ ಕೆಲಸ ಮಾಡುತ್ತಿದ್ದ. 2008ರಿಂದ ಅವನ ಈ ದುಷ್ಕೃತ್ಯ ಪ್ರಾರಂಭವಾಗಿತ್ತು. ಮಾದಕ ವಸ್ತುಗಳಿಗೆ ವ್ಯಸನಿಯಾದ ರವೀಂದ್ರ ಕುಮಾರ ತನ್ನ ಜತೆ ಕೆಲಸ ಮಾಡುತ್ತಿದ್ದ ಇತರ ಕಾರ್ಮಿಕರ ಮಕ್ಕಳನ್ನು ಟಾರ್ಗೆಟ್ ಮಾಡುತ್ತಿದ್ದ. ರಾತ್ರಿ ಕಾರ್ಮಿಕರು ಮಲಗಿದ ಮೇಲೆ, ನಿಧಾನಕ್ಕೆ ಹೋಗಿ ಅವರ ಪುಟ್ಟ ಮಕ್ಕಳನ್ನು ಎಬ್ಬಿಸಿ ಚಾಕಲೇಟ್​, ಸಿಹಿ ತಿಂಡಿಗಳ, 10 ರೂಪಾಯಿ ನೋಟಿನ ಆಮಿಷವೊಡ್ಡುತ್ತಿದ್ದ. ಇತ್ತ ಕರೆದುಕೊಂಡು ಬಂದು ಅವರ ಮೇಲೆ ರೇಪ್ ಮಾಡುತ್ತಿದ್ದ.

ಆದರೆ ಬರುಬರುತ್ತ ಅವನು ಮಕ್ಕಳನ್ನು ಹುಡುಕಿಕೊಂಡು ಹಲವು ಕಿಮೀ ದೂರ ನಡೆಯಲು ಪ್ರಾರಂಭಿಸಿದ. ಅದೂ ಕತ್ತಲಾದ ಮೇಲೆ. ರಾತ್ರಿ 8ಗಂಟೆಯಿಂದ ಅವನು ನಡೆಯಲು ಶುರು ಮಾಡಿದರೆ, ಮಧ್ಯರಾತ್ರಿವರೆಗೆ ಹೀಗೆ ಮಕ್ಕಳಿಗಾಗಿ ಹುಡುಕಾಟ ಮುಂದುವರಿಯುತ್ತಿತ್ತು. ಯಾವುದಾದರೂ ಕಟ್ಟಡ ನಿರ್ಮಾಣವಾಗುತ್ತಿದ್ದರೆ, ಅಲ್ಲಿ ಕಾರ್ಮಿಕರು ಇರುತ್ತಾರೆ. ಅವರಿಗೆ ಮಕ್ಕಳಿರುತ್ತಾರೆ ಎಂಬುದನ್ನು ತಿಳಿದಿದ್ದ ಆತ ಅಂಥ ಜಾಗದಲ್ಲೇ ಹುಡುಕುತ್ತಿದ್ದ. ಮಕ್ಕಳು ಸಿಕ್ಕಿ, ಅವರನ್ನು ಅತ್ಯಾಚಾರ ಮಾಡಿದ ಮೇಲೆ ಮತ್ತೆ ಅವರನ್ನು ಜೀವ ಸಹಿತ ಉಳಿಸುತ್ತಿರಲಿಲ್ಲ. ಥಳಿಸಿ, ಕೊಂದು ಪೊದೆಯಾಚೆ ಬಿಸಾಡಿ ಬರುತ್ತಿದ್ದ. ಅವನೇ ಪೊಲೀಸರಿಗೆ ಹೇಳಿಕೊಂಡಿರುವ ಪ್ರಕಾರ ಹೀಗೆ ಸುಮಾರು 30 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. 2015ರವರೆಗೂ ಅವನ ಈ ಹೊಲಸು ಕೃತ್ಯ ಮುಂದುವರಿದೇ ಇತ್ತು. ಈ ಅವಧಿಯಲ್ಲಿ ಅವನು 2 ವರ್ಷದ ಮಗುವಿಂದ ಹಿಡಿದು 12 ವರ್ಷದ ಮಕ್ಕಳವರೆಗೆ ಎಲ್ಲ ವಯಸ್ಸಿನವರಿಗೂ ಲೈಂಗಿಕ ಕಿರುಕುಳ ನೀಡಿದ್ದಾನೆ.

2014ರಲ್ಲಿ ರವೀಂದ್ರ ಕುಮಾರ್​ ಒಬ್ಬ ಏಳು ವರ್ಷದ ಹುಡುಗನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದು ಹಾಕಿದ್ದ. ಬಾಲಕನ ಶವ ಸೆಪ್ಟಿಕ್​ ಟ್ಯಾಂಕ್​ನಲ್ಲಿ ಪತ್ತೆಯಾಗಿತ್ತು. ಆಗ ಆತನನ್ನು ಅರೆಸ್ಟ್ ಮಾಡಲಾಗಿತ್ತು. ಆದರೆ ಈ ಕೇಸ್​ನಲ್ಲಿ ಜಾಮೀನು ಸಿಕ್ಕಿ ಬಿಡುಗಡೆಯಾಗಿದ್ದ. ಮತ್ತೆ 2015ರಲ್ಲಿ ದೆಹಲಿಯ ಬೇಗಂಪುರದಲ್ಲಿ 6ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿ, ಅವಳನ್ನು ಹತ್ಯೆ ಮಾಡಿದ ಕೇಸ್​ನಡಿ ಅರೆಸ್ಟ್ ಆಗಿದ್ದ. ಮತ್ತೆ ಅವನನ್ನು ಜೈಲಿನಿಂದ ಆಚೆಗೆ ಬಿಟ್ಟಿರಲಿಲ್ಲ. ಇನ್ನೊಂದೇನೆಂದರೆ, ರವೀಂದ್ರ ಕುಮಾರ್ ಪಾರ್ನ್​ ವಿಡಿಯೊಗಳಿಗೆ ಅಡಿಕ್ಟ್ ಆಗಿದ್ದ. ಇದೇ ಕಾರಣ ಆತನ ಮಾನಸಿಕ ಸ್ಥಿತಿ ಹದಗೆಟ್ಟಿತ್ತು ಎಂಬ ವಿಷಯವೂ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ರೇಪ್​ ಮಾಡಲು ಬಂದವನ ಜನನಾಂಗ ಕತ್ತರಿಸಿದ ಮಹಿಳೆ; ಕಾಮದಾಹ ತಂದಿಟ್ಟ ಸಂಕಷ್ಟ

ರವೀಂದ್ರ ಕುಮಾರ್ ವಿಚಾರಣೆ ವೇಳೆ ಆತನ ಮಾತುಗಳನ್ನು ಕೇಳಿ ನಾವೇ ನಡುಗಿಹೋಗಿದ್ದೇವೆ ಎಂದು ಪೊಲೀಸ್ ಹಿರಿಯ ಅಧಿಕಾರಿ ವಿಕ್ರಮ್​ಜಿತ್ ಸಿಂಗ್ ಹೇಳಿದ್ದಾರೆ. ಆತ ತನ್ನ ಕ್ರೈಂ ಬಗ್ಗೆ ಚಾಚೂತಪ್ಪದೆ, ಅಷ್ಟೂ ವರದಿಯನ್ನು ನೀಡಿದ್ದಾನೆ. ತನ್ನಿಂದ ದೌರ್ಜನ್ಯ/ಹತ್ಯೆಗೆ ಒಳಗಾದ ಬಹುತೇಕ ಎಲ್ಲರ ಹೆಸರನ್ನೂ ಹೇಳಿದ್ದಾನೆ’ ಎಂದು ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಈತ ಕೆಲವೊಮ್ಮೆ ಬಸ್​ ಹತ್ತಿ, ದೆಹಲಿಯಿಂದ ಬೇರೆ ರಾಜ್ಯಕ್ಕೂ ಹೋಗಿದ್ದಾನೆ. ಬರೀ ಕಾಮತೃಷೆ ತೀರಿಸಿಕೊಳ್ಳುವ ಸಲುವಾಗಿ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version