Site icon Vistara News

ದೆಹಲಿಯಲ್ಲಿ ಮತ್ತೊಬ್ಬ ಮಹಿಳೆಯ ದೇಹ ಪೀಸ್ ​ಪೀಸ್​; ಶವ ಕತ್ತರಿಸಿ 2 ಕಡೆ ಬಿಸಾಕಿದ ಹಂತಕರು

Search Operation By Police

ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆಯಾಗಿದೆ (Delhi Murder). ಗೀತಾ ಕಾಲೋನಿ ಫ್ಲೈಓವರ್​ ಬಳಿ ಮಹಿಳೆಯೊಬ್ಬರ ದೇಹ ತುಂಡುತುಂಡಾದ ರೂಪದಲ್ಲಿ ಸಿಕ್ಕಿದೆ. ಸ್ಥಳದಲ್ಲಿ ಪೊಲೀಸ್ ತಂಡ ಬೀಡುಬಿಟ್ಟಿದ್ದು, ಪರಿಶೀಲನೆ ನಡೆಸುತ್ತಿದೆ. ಮಹಿಳೆಯ ದೇಹ ತುಂಡುತುಂಡಾಗಿದೆ. ಜನ್ಮುನಾ ಖಾದರ್ ಎಂಬಲ್ಲಿ ಈ ಗೀತಾ ಕಾಲೋನಿ ಇದೆ. ಸಮೀಪವೇ ಇರುವ ಮೇಲ್ಸೇತುವೆ ಬಳಿ ಎರಡು ಪ್ರದೇಶಗಳಲ್ಲಿ ಮಹಿಳೆಯ ದೇಹದ ತುಂಡುಗಳು ಸಿಕ್ಕಿವೆ. ಮೃತ ಮಹಿಳೆಗೆ ಅಂದಾಜು 35-40 ವರ್ಷ ವಯಸ್ಸಾಗಿರಬಹುದು ಎಂದು ಉತ್ತರ ದೆಹಲಿ ಡೈರೆಕ್ಟರ್​ ಜನರಲ್​ ಆಫ್ ಪೊಲೀಸ್​ ತಿಳಿಸಿದ್ದಾರೆ. ವಿಧಿವಿಜ್ಞಾನ ವಿಭಾಗದ ತಂಡದವರು ಮೃತದೇಹಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಹೆಣ ಸಿಕ್ಕ ಪ್ರದೇಶಗಳಲ್ಲಿ ಕೂಲಂಕಷವಾಗಿ ಹುಡುಕಾಟ ನಡೆದಿದೆ. ಏನಾದರೂ ಪುರಾವೆ ಸಿಗಬಹುದು ಎಂದಿದ್ದಾರೆ.

ಕಳೆದ ವರ್ಷ ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್​ ಹತ್ಯೆ ಪ್ರಕರಣ ಇಡೀ ದೇಶವನ್ನು ಬೆಚ್ಚಿಬೀಳಿಸಿತ್ತು. ಮುಂಬಯಿ ಮೂಲದ ಈಕೆ ತನ್ನ ಗೆಳೆಯ ಅಫ್ತಾಬ್ ಪೂನಾವಾಲಾ ಜತೆ ಲಿವ್​ ಇನ್ ರಿಲೇಶನ್​ಶಿಪ್​​ನಲ್ಲಿ ಇದ್ದಳು. ಇವರಿಬ್ಬರೂ ದೆಹಲಿಯ ಅಪಾರ್ಟ್​ಮೆಂಟ್​​ನಲ್ಲಿ ವಾಸವಾಗಿದ್ದರು. ಆದರೆ ಅಫ್ತಾಬ್ ಪೂನಾವಾಲಾ ಆಕೆಯನ್ನು ಉಸಿರುಗಟ್ಟಿಸಿಕೊಂದು, ಬಳಿಕ ಶವವನ್ನು 35 ತುಂಡುಗಳಾಗಿ ಕತ್ತರಿಸಿ, ಫ್ರಿಜ್​ನಲ್ಲಿ ಇಟ್ಟಿದ್ದ. ಪ್ರತಿದಿನ ಕೆಲವೇ ತುಂಡುಗಳನ್ನು ತೆಗೆದುಕೊಂಡು ಹೋಗಿ, ಮೆಹ್ರೌಲಿ ಅರಣ್ಯ ಪ್ರದೇಶದ ವಿವಿಧೆಡೆಗಳಲ್ಲಿ ಎಸೆದಿದ್ದ. ಶ್ರದ್ಧಾ ವಾಳ್ಕರ್​ ಹೀಗೆ ಭಯಾನಕ ಹತ್ಯೆಯಾದ ಬೆನ್ನಲ್ಲೇ ಇಂಥ ಸ್ವರೂಪದ ಹಲವು ಕೊಲೆಗಳು ಬೆಳಕಿಗೆ ಬಂದಿವೆ.

ಇದನ್ನೂ ಓದಿ: Crime News: ಪತ್ನಿಯ ಶವ ಫ್ರೀಜರ್‌ನಲ್ಲಿ ಇಟ್ಟ, ಪೊಲೀಸರು ಕೇಳಿದರೆ ಜಾಂಡೀಸ್‌ನಿಂದ ಸಾವು ಎಂದ, ಮುಂದೇನಾಯ್ತು?

ಅದೇ ರೀತಿ ಮುಂಬಯಿಯಲ್ಲೂ ಇಂಥದ್ದೇ ಘಟನೆ ನಡೆದಿತ್ತು. ಅಲ್ಲಿನ ಗೀತಾ ನಗರದ ಅಪಾರ್ಟ್​ಮೆಂಟ್​ನಲ್ಲಿದ್ದ ಮನೋಜ್​ ಸಹಾನಿ ಎಂಬಾತ ತನ್ನ ಲಿವ್​ ಇನ್ ಸಂಗಾತಿ ಸರಸ್ವತಿ ವೈದ್ಯ ಎಂಬಾಕೆಯನ್ನು ಕೊಂದು, ಮೃತದೇಹವನ್ನು ಸಣ್ಣಸಣ್ಣ ತುಣುಕಗಳಾಗಿ ಕತ್ತರಿಸಿದ್ದ. ಬಳಿಕ ಆ ತುಣುಕುಗಳನ್ನು ಫ್ರಿಜ್​​​ನಲ್ಲಿ ಇಟ್ಟು ಬೇಯಿಸಿದ್ದ. ಕಳೆದ ವರ್ಷ ಡಿಸೆಂಬರ್​ನಲ್ಲಿ ರಾಜಸ್ಥಾನ ಜೈಪುರದಲ್ಲೂ ಇಂಥದ್ದೇ ಕೊಲೆಯಾಗಿತ್ತು. 32ವರ್ಷದ ಯುವಕನೊಬ್ಬ, ತನ್ನ ಅತ್ತೆಯನ್ನು ಕೊಂದು, ಅವರ ಮೃತದೇಹವನ್ನು 10 ತುಂಡುಗಳಾಗಿ ಕತ್ತರಿಸಿ, ಬಕೆಟ್​ನಲ್ಲಿ ತುಂಬಿಕೊಂಡು ಹೋಗಿ ರಸ್ತೆ ಪಕ್ಕ ಎಸೆದಿದ್ದ. ಇತ್ತೀಚೆಗೆ ಕರ್ನಾಟಕದ ಚಿಕ್ಕೋಡಿಯಲ್ಲಿ ನಡೆದ ಜೈನಮುನಿ ಕಾಮಕುಮಾರ ಮಹಾರಾಜರ ಹತ್ಯೆಯೂ ಇದೇ ರೀತಿ ಭೀಕರವಾಗಿದೆ. ಅವರ ದೇಹವನ್ನು ತುಂಡು ಮಾಡಿದ ಹಂತಕರು ಕೊಳವೆಬಾವಿಗೆ ಎಸೆದಿದ್ದರು.

Exit mobile version