Site icon Vistara News

Actor Darshan: ವಿಗ್‌ ಹಾಕಿದ್ದರಿಂದಲೇ ದರ್ಶನ್‌ಗೆ ಕಂಟಕ ಆಯ್ತು ಎಂದ ಕಾಳಿ ಉಪಾಸಕಿ ಚಂದಾ ಪಾಂಡೇ!

Actor Darshan Astrologer Chanda Pandey Said Facing Problems Because Of His vig

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ನಟ ದರ್ಶನ್ (Actor Darshan) ಜೈಲು ಸೇರಿದ್ದಾರೆ. ದರ್ಶನ್ ಜೈಲು ಸೇರಿದ ಬಳಿಕ ಅವರ ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದೀಗ ಕಾಳಿ ಉಪಾಸಕಿ ಚಂದಾ ಪಾಂಡೇ ಅಮ್ಮಾಜಿ ಅವರು ದರ್ಶನ್​ಗೆ ಈ ಸಂಕಷ್ಟ ಎದುರಾಗಲು ಅವರ ತಲೆ ಗೂದಲಿನಿಂದ ಹಿಡಿದು ಹಲವು ಕಾರಣಗಳಿವೆ ಎಂದಿದ್ದು, ಅವುಗಳ ಬಗ್ಗೆ ಮಾಹಿತಿ ಮಾಧ್ಯಮವೊಂದಕ್ಕೆ ನೀಡಿದ್ದಾರೆ. ಕಾಳಿ ಉಪಾಸಕಿ ಚಂದಾ ಪಾಂಡೆ ‘ನಾನು 2018ರಲ್ಲಿ ದರ್ಶನ್ ಗೆ ಎಚ್ಚರಿಕೆ ನೀಡಿದ್ದೆ’ ಎಂದಿದ್ದಾರೆ.

ಈಗಾಗಲೇ ಚಂಡಿ ಯಾಗ ಮಾಡಿದ್ದಾರೆ ದರ್ಶನ್‌ ಪತ್ನಿ. ಈ ಬಗ್ಗೆ ಕಾಳಿ ಉಪಾಸಕಿ ಚಂದಾ ಪಾಂಡೆ ಮಾತನಾಡಿ ʻಈ ಯಾಗದಿಂದ ಮನೆ ಊಟ ಸಿಗುವ ಸಾಧ್ಯತೆ ಇದೆ. ಅದರ ಜತೆಗೆ ಬೈಲ್‌ ಸಿಗುವಂತದ್ದು. ಯಾರು ತೀರ್ಪು ಕೊಡುತ್ತಾರೆ ಅವರ ಮನಸ್ಸಿನ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಹಾಗಂತ ಎಲ್ಲವೂ ಸಿಕ್ಕೇ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ದರ್ಶನ್, ದಸರಾ ಕಾರ್ ರೇಸ್​ನಲ್ಲಿ ಭಾಗವಹಿಸುತ್ತಿರುವುದಾಗಿ ಹೇಳಿದ್ದರು. ಆದರೆ ನಾನು ಬೇಡ, ದರ್ಶನ್​ಗೆ ಕಂಟಕ ಇದೆ. ರೇಸ್​ಗೆ ಹೋದರೆ ಮರಳಿ ಬರುವುದಿಲ್ಲ ಅದನ್ನು ತಪ್ಪಿಸು ಎಂದಿದ್ದೆ. ಹಾಗೆಯೇ ಆತ ಅದನ್ನು ತಪ್ಪಿಸಿದ. ಆದರೆ ಅದಾದ ಸ್ವಲ್ಪ ದಿನಕ್ಕೆ ದರ್ಶನ್​ಗೆ ಕಾರು ಅಪಘಾತವಾಗಿ ಕೈಗೆ ಪೆಟ್ಟಾಯ್ತು. ಆ ಘಟನೆ ಆದ ಬಳಿಕ ದರ್ಶನ್ ನನ್ನ ಬಂದು ಭೇಟಿ ಆಗಿ ಆಶೀರ್ವಾದ ಪಡೆದರುʼʼಎಂದರು.

ʻʻಚಂಡಿಯಾಗಕ್ಕೆ ಅದರದ್ದೇ ಆದ ವಿಧಿ ವಿಧಾನಗಳನ್ನು ಮಾಡಲೇ ಬೇಕು. ಮುಖ್ಯವಾಗಿ ಅಹಂ ವನ್ನು ಬಿಡಬೇಕು. ನಾನು ಎನ್ನುವ ಶಬ್ದ ಬಿಡಬೇಕು. ಅಹಂ ಎನ್ನುವುದಕ್ಕೆ ಶನಿನೂ ಕಾರಣವೇ.ನಮ್ಮಲ್ಲಿ ತರ್ಕವನ್ನು ಅಳವಡಿಸಿಕೊಳ್ಳಬೇಕು. ಆಗ ಇಂತಹ ದುರಂತಗಳು ನಡೆಯಲ್ಲ. ನನ್ನ ಸಲಹೆ ಮೀರಿ ವಿಗ್ ಹಾಕಿದ್ರು. ಇದರಿಂದಾಗಿ ಅವರ ಗ್ರಹಗತಿಯಲ್ಲಿ ಬದಲಾವಣೆ ಆಗಿದೆ. ಅವರಿಗೆ ಇನ್ನೂ ಸಾಕಷ್ಟು ಗಂಡಾಂತರ ಬರೋ ಸಾಧ್ಯತೆ ಇದೆ. ನಾನು ಪ್ರಚಾರ ತಗೋತೀನಿ ಅಂದ್ಕೋಬಾರ್ದು ಅಂತ ನಾನು ಯಾವುದನ್ನೂ ನಾನೇ ನಾನಾಗಿ ಹೇಳೋದಿಲ್ಲ. ನಾನಿವತ್ತು ಮಾತನಾಡ್ತಾ ಇರೋದು ವಿಜಯಲಕ್ಷ್ಮಿ ಅವರ ಮುಖ ನೋಡಿ, ತುಂಬಾ ನೊಂದಿದಾರೆ ಅವರು. ಜನ್ಮತಃ ಬಂದಿರುವ ಕೇಶವಿನ್ಯಾಸ ಮಾಡಿಸಿಕೊಂಡರೆ ಉತ್ತಮ’ ಎಂದಿದ್ದಾರೆ ಕಾಳಿಕಾಮಾತೆ ಉಪಾಸಕಿ ಚಂದಾ ಪಾಂಡೆ.ʼʼಎಂದರು.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕುಟುಂಬ ಭೇಟಿಯಾಗಿ ಧನ ಸಹಾಯ ಮಾಡಿದ ವಿನೋದ್‌ ರಾಜ್‌ !

(Actor Darshan) ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನಲ್ಲಿದ್ದಾರೆ. ಇಷ್ಟಾದರೂ ದರ್ಶನ್‌ಗೆ ಕೆಲವು ಅಭಿಮಾನಿಗಳು ಹಾಗೂ ನಟ ನಟಿಯರು ಬೆಂಬಲ ನೀಡಿದ್ದಾರೆ. ದಿನ ಕಳೆದಂತೆ ತನಿಖೆಯಿಂದ ಬೆಚ್ಚಿ ಬೀಳಿಸುವ ಸತ್ಯಗಳು ಹೊರಬೀಳುತ್ತಿವೆ. ಕಲೆವರು ಅಂದಿನಿಂದ ದರ್ಶನ್‌ಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. 

Exit mobile version