ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ (ಶಿವಾನಂದ ಸರ್ಕಲ್) ಉದ್ಘಾಟನಾ ಸಮಾರಂಭವನ್ನು (Actor Darshan) ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಹೊಸ ಕಟ್ಟಡವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ನಟ ಶಿವರಾಜ್ ಕುಮಾರ್, ಜಗ್ಗೇಶ್ , ಸಾಧು ಕೋಕಿಲಾ ಸೇರದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಜಗ್ಗೇಶ್, ಚಿತ್ರರಂಗದ ಕೆಲಸಗಳನ್ನು ಪಟ್ಟು ಹಿಡಿದು ಮಾಡಿಸಬೇಕು, ಸಿದ್ದರಾಮಯ್ಯ ಅವರು ಬಂದಾಗ ಹೇಳಿ ಸುಮ್ಮನಾಗುವುದಲ್ಲ ಆಗಾಗ್ಗೆ ಹೋಗಿ ಅವರ ತಲೆ ನಿನ್ನುತ್ತಿರಬೇಕು, ಸಿಎಂ ಅವರಿಗೆ ಕೆಲಸದ ಭಾರ ತುಂಬಾ ಇರುತ್ತದೆ. ಒಟಿಟಿ ಎಂಬುದು ಒಳ್ಳೆಯ ಯೋಜನೆ. ಇದನ್ನು ಸರ್ಕಾರ ಮಾಡಿದ್ರೆ ಪ್ರಾಫಿಟ್ ತಂದು ಕೊಡುತ್ತದೆ. ಈಗಾಗಲೇ ಮಲ್ಟಿ ನ್ಯಾಷನಲ್ ಕಂಪನಿ ಮಾಡಿಕೊಂಡಿದೆ. ನಮ್ಮ ದುಡ್ಡು ಹೊರ ರಾಜ್ಯಕ್ಕೆ ಹೋಗ್ತಿದೆ’ ಎಂದಿದ್ದಾರೆ.
ಇದನ್ನೂ ಓದಿ: Actor Darshan : ಶಂಖ ಊದುತ್ತ, ಜಾಗಟೆ ಬಾರಿಸುತ್ತ ದರ್ಶನ್ ಭೇಟಿಗೆ ಬಂದ ವಿಶೇಷ ಚೇತನ ಅಭಿಮಾನಿ!
ಸಿನಿಮಾ ರಂಗದ ಇತ್ತೀಚಿನ ಬೆಳವಣಿಗೆ ಬಗ್ಗೆ ಜಗ್ಗೇಶ್ ಮಾತನಾಡಿ ಪರೋಕ್ಷವಾಗಿ ʻʻ ನಿರ್ಮಾಪಕರು ಸಿನಿಮಾ ನಾಯಕನ ಹಿಂದೆ ಹೋಗಿ ಸಿನಿಮಾ ಮಾಡಬೇಡಿ. ಕಥೆ ಹಿಂದೆ ಹೋಗಿ ಸಿನಿಮಾ ಮಾಡಿ. ಇವತ್ತು ನಾಯಕರ ಹಿಂದೆಯೇ ಹೋದಾಗಲೇ ನಿರ್ಮಾಪಕರಿಗೆ ಸಮಸ್ಯೆ ಆಗಿದೆ. ಹಿಂದೆ ಕಥೆ ಹಿಂದೆ ಹೋದಾಗ ನಿರ್ಮಾಪಕರು ಚನ್ನಾಗಿದ್ದರುʼʼಎಂದರು.
ಈ ವೇಳೆ ನಟ ಶಿವರಾಜ್‌ಕುಮಾರ್ ಕೂಡ ಭಾಗಿಯಾಗಿದ್ದರು. ಈ ವೇಳೆ ದರ್ಶನ್ (Actor Darshan) ಕುರಿತಾಗಿ ಮಾತನಾಡಿದರು. ಶಿವಣ್ಣ ಮಾತನಾಡಿ ʻʻಈ ವಿಚಾರದ ಬಗ್ಗೆ ಬೇಸರ ಆಗತ್ತೆ. ಅದೆಲ್ಲ ಹಣೆಬರಹ. ಹಣೆ ಬರಹ ಅನ್ನೋದು ಒಂದು ಇರುತ್ತೆ. ಏನೇ ಮಾತನಾಡಿದರೂ ಅದು ಸರಿನಾ ಎಂದು ಯೋಚನೆ ಮಾಡಬೇಕು. ನಾವು ಬಂದರೋದು ಎದುರಿಸಲೇ ಬೇಕು. ಈಗಾಗಲೇ ತನಿಖೆ ಆಗುತ್ತಿದೆ. ಯಾಕಪ್ಪ ಹೀಗೆ ಆಯ್ತು ಅಂತ ಬೇಜಾರ ಆಗುತ್ತೆ. ಎರಡೂ ಕುಟಂಬಗಳು ಬೇಜಾರಿನ ಲ್ಲಿದೆ. ನ್ಯಾಯ ಎಲ್ಲಿದೆ ಮುಂದೆ ಗೊತ್ತಾಗತ್ತೆʼʼಎಂದರು.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Actor Darshan ) ತೂಗುದೀಪ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನ ದೂಡುತಿದ್ದಾರೆ. ಹಲವು ಅಭಿಮಾನಿಗಳು ದರ್ಶನ್ರನ್ನು ಭೇಟಿಯಾಗಲು ಪ್ರತಿನಿತ್ಯ ಜೈಲಿನ ಬಳಿ ಬರುತ್ತಿದ್ದಾರೆ. ಆದರೆ ಪೊಲೀಸರು ಯಾರಿಗೂ ಅವಕಾಶ ನೀಡುತ್ತಿಲ್ಲ. ಕೇವಲ ಕುಟುಂಬ ಸದಸ್ಯರಿಗೆ ಹಾಗೂ ವಕೀಲರಿಗಷ್ಟೆ ಅವಕಾಶ ನೀಡಲಾಗಿದೆ. ಭಾನುವಾರ ರಜೆ ಹಿನ್ನೆಲೆಯಲ್ಲಿ ಯಾರಿಗೂ ಭೇಟಿಯಾಗುವ ಅವಕಾಶ ಇರುವುದಿಲ್ಲ. ಹೀಗಿದ್ದರೂ ದಾಸಪ್ಪ ವೃತ್ತಿ ಮಾಡುವ ವಿಶೇಷ ಚೇತನ ಅಭಿಮಾನಿ, ಹಾಗೂ ಮಾರತ್ತಹಳ್ಳಿಯಿಂದ ಆಟೋ ಚಾಲಕ ಸುನೀಲ್ ದರ್ಶನ್ ನೋಡಲು ಬಂದಿದ್ದಾರೆ.