ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೊದಲಿಗೆ (Actor Darshan) ರೇಣುಕಾ ಸ್ವಾಮಿಯನ್ನು ಶೆಡ್‌ನಲ್ಲಿ ಇಟ್ಟು ಹಿಂಸೆ ನೀಡಿ ಮರ್ಡರ್ ಮಾಡಲಾಯ್ತು ಎನ್ನಲಾಗಿತ್ತು. ಇದೀಗ ಪೊಲೀಸರ ತನಿಖೆ ವೇಳೆ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ರೇಣುಕಾ ಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ಮೊದಲು ಹಾಕಿದ್ದು ಶೆಡ್ ಕಾವಲಿಗಿದ್ದ ಸೆಕ್ಯುರಿಟಿ ರೂಂನಲ್ಲಿ ಎಂದು ತಿಳಿದು ಬಂದಿದೆ.
ರೇಣುಕಾ ಸ್ವಾಮಿ ಹತ್ಯೆ ಬಳಿಕ ಶವವನ್ನು ಮೊದಲು ಹಾಕಿದ್ದು, ಸೆಕ್ಯುರಿಟಿ ರೂಂನಲ್ಲಿ. ಶೆಡ್ ಕಾವಲಿಗಿದ್ದ ಸೆಕ್ಯುರಿಟಿ ರೂಂನಲ್ಲಿ ಮೃತದೇಹವನ್ನು ಆರೋಪಿಗಳು ಎಸೆದಿದ್ದರು. ಮೃತದೇಹ ಸಾಗಿಸುವವರೆಗೂ ಸೆಕ್ಯುರಿಟಿ ರೂಂನಲ್ಲಿಯೇ ಶವ ಇತ್ತು. ಪೊಲೀಸರ ತನಿಖೆ ವೇಳೆ ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು ಪತ್ತೆಯಾದ ಕಾರಣ ಈ ನಿಜಾಂಶ ಬೆಳಕಿಗೆ ಬಂದಿದೆ.
ಪೊಲೀಸರ ತನಿಖೆ ವೇಳೆ ಸೆಕ್ಯುರಿಟಿ ರೂಂ ನಲ್ಲಿ ರಕ್ತದ ಕಲೆಗಳು ಪತ್ತೆಯಾಗಿತ್ತು. ಸೆಕ್ಯುರಿಟಿ ರೂಂನಲ್ಲಿ ಕೂಡ ಪೊಲೀಸರು ಮಹಜರು ಮಾಡಿದ್ದರು. ನಂತರ ಸೆಕ್ಯುರಿಟಿ ಗಾರ್ಡ್‌ನ್ನು ವಿಚಾರಣೆ ನಡೆಸಿದಾಗ ಈ ಬಗ್ಗೆ ಗೊತ್ತಾಗಿದೆ. ಹಿಂದಿ ಭಾಷೆಯಲ್ಲಿ ಸೆಕ್ಯುರಿಟಿ ಗಾರ್ಡ್ ಮಾತನಾಡಿದ್ದ.
ಇದನ್ನೂ ಓದಿ: Actor Darshan: ʼದರ್ಶನ್ ನನ್ನ ಸ್ವಂತ ಮಗʼ ಎಂದಿದ್ದ ಸುಮಲತಾ ಅಂಬರೀಶ್ ಏಕೀ ಗಾಢ ಮೌನ?
ಈವರೆಗೂ ಎಲ್ಲೆಲ್ಲಿ ಮಹಜರು?
- ದರ್ಶನ್, ಪವಿತ್ರಾ ಸೇರಿ `ಡಿ ಗ್ಯಾಂಗ್’ ಕರೆತಂದ ಶೆಡ್‌ನಲ್ಲಿ ಮಹಜರು
- ಗಿರಿನಗರದ ಪ್ರದೋಶ್ ನಿವಾಸದಲ್ಲಿ ಸ್ಥಳ ಮಹಜರು
- ಶವ ಬೀಸಾಡಿದ್ದ ಅನುಗ್ರಹ ಅಪಾರ್ಟ್ಮೆಂಟ್ ಬಳಿ ಮಹಜರು
- ಸ್ವಾಮಿ ಕೊಲೆಯಾದ ಪಟ್ಟಣಗೆರೆ ಜಯಣ್ಣ ಶೆಡ್ನಲ್ಲೂ ಪಂಚನಾಮೆ
- ಆರ್.ಆರ್.ನಗರದ ಐಡಿಯಲ್ ಹೋಮ್ಸ್ ಇ ಕ್ರಾಸ್ನಲ್ಲಿ ಮಹಜರು
- ಚಿತ್ರದುರ್ಗದಿಂದ ಕಿಡ್ನ್ಯಾಪ್ಗೆ ಬಳಸಿದ್ದ ಕಾರು ಪರಿಶೀಲನೆ (ಕಾರಿನೊಳಗೆ ರಕ್ತ, ಕೂದಲು ಪತ್ತೆ)
- ಸುಮ್ಮನಹಳ್ಳಿಯ ರಾಜಕಾಲುವೆಯಲ್ಲಿ ಮೊಬೈಲ್ಗಾಗಿ ಮಹಜರು
- ಐಡಿಯಲ್ ಹೋಮ್ಸ್ನಲ್ಲಿ ಬಟ್ಟೆ ಬದಲಿಸಿದ್ದ ಆರೋಪಿಗಳು
- ಟ್ರೋಬೋ ಹೋಟೆಲ್ನ ರೂಮ್ ನಂ. 203ರಲ್ಲಿ ಮಹಜರು
- ಆರ್.ಆರ್.ನಗರದ ದರ್ಶನ್ ನಿವಾಸದಲ್ಲೂ ಪಂಚನಾಮೆ (ದರ್ಶನ್ ಬಟ್ಟೆ, ಶೂ ವಶಕ್ಕೆ)
- ಪವಿತ್ರಾ ಗೌಡ ಕರೆದೊಯ್ದು RR ನಗರದ ನಿವಾಸದಲ್ಲಿ ಪಂಚನಾಮೆ
- ಆರೋಪಿ ದೀಪಕ್ ಕರೆದೊಯ್ದು ಮನೆಯಲ್ಲಿ ಮಹಜರು
- ಆರೋಪಿ ವಿನಯ್ ಕರೆದೊಯ್ದು ಸ್ಟೋನಿ ಬ್ರೂಕ್ನಲ್ಲಿ ಮಹಜರು
- ದರ್ಶನ್ ಪತ್ನಿ ವಿಜಯಲಕ್ಷ್ಮಿ ನಿವಾಸ (ನೀಲಿ ಕಲರ್ ಶೂ ವಶಕ್ಕೆ)
- ಮೈಸೂರಿನ ಅಡಿಸನ್ ಬ್ಲೂ ಹೋಟೆಲ್ನಲ್ಲಿ ಮಹಜರು
- ಸ್ಟೋನಿ ಬ್ರೂಕ್ ರೆಸ್ಟೋಬಾರ್ಗೆ ದರ್ಶನ್ ಕರೆತಂದು ಮಹಜರು
ರೇಣುಕಾ ಸ್ವಾಮಿ ಹತ್ಯೆ (Renuka Swamy murder case) ಕೇಸ್‌ನ ಆರೋಪಿ, ನಟ ದರ್ಶನ್ (Actor Darshan) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸ್ವ ಇಚ್ಛೆ ಹೇಳಿಕೆ ನೀಡಿದ್ದಾನೆ. ಪ್ರಕರಣ ಮುಚ್ಚಿಹಾಕಲು 30 ಲಕ್ಷ ರೂ. ನೀಡಿರುವುದಾಗಿ ತಿಳಿಸಿದ್ದಾರೆ.
ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಅಲಿಯಾಸ್ ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ ನೀಡಿದ್ದು, ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್ ಸ್ವ ಇಚ್ಛೆ ಹೇಳಿಕೆ ನೀಡಿದ್ದಾರೆ.
ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ನಡೆದ ಹಲ್ಲೆಯಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ದರ್ಶನ್ ಒಪ್ಪಿಕೊಂಡಿಲ್ಲ. ಶೆಡ್ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳು, ಜೂನ್ 8ರಂದು ರಾತ್ರಿ ದರ್ಶನ್ ತನ್ನ ಜೀಪಿನಲ್ಲಿ ಶೆಡ್ ಕಡೆಗೆ ಆಗಮಿಸಿದ್ದನ್ನು ತೋರಿಸಿವೆ. ಹತ್ಯೆಯ ನಂತರ ದರ್ಶನ್ ಆರೋಪಿಗಳ ಜೊತೆಗೆ ಪಾರ್ಟಿ ಮಾಡಿದ್ದು ಕೂಡ ಪ್ರತ್ಯಕ್ಷದರ್ಶಿಗಳ ಸಾಕ್ಷಿಯಿಂದ ಗೊತ್ತಾಗಿದೆ. ಆದರೆ ಪಟ್ಟಣಗೆರೆಯ ಶೆಡ್‌ನಲ್ಲಿ ಯಾವುದೇ ಸಿಸಿಟಿವಿ ಸಾಕ್ಷಿಗಳನ್ನು ಆರೋಪಿಗಳು ಉಳಿಸಿಲ್ಲ.