Site icon Vistara News

Actor Darshan: ದರ್ಶನ್ ಕುಡಿಯದೇ ಇದ್ದಾಗ ಒಳ್ಳೆಯವ, ಪವಿತ್ರಾ ಬಗ್ಗೆ ಮಾತಾಡೋಕೆ ಅಸಹ್ಯ ಎಂದ ಚಿಂಗಾರಿ ಮಹದೇವ್!

Actor Darshan case respond by chingari mahadev

ಬೆಂಗಳೂರು: ದರ್ಶನ್‌ ಕೊಲೆ (Actor Darshan) ಕೇಸ್‌ನಲ್ಲಿ ಅರೆಸ್ಟ್‌ ಆದ ಬಳಿಕ ಹಲವು ನಿರ್ಮಾಪಕರು, ನಟ ನಟಿಯರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ʻಚಿಂಗಾರಿʼ ಸಿನಿಮಾ ನಿರ್ಮಾಪಕ ಚಿಂಗಾರಿ ಮಹದೇವ್ ಅವರು ವಿಸ್ತಾರ ಜತೆ ದರ್ಶನ್‌ ಕುರಿತಾಗಿ ಮಾತನಾಡಿದ್ದಾರೆ. ʻದರ್ಶನ್ ಕುಡಿಯದೇ ಇದ್ದಾಗ ಒಳ್ಳೆಯವನು, ಕುಡಿದಿದ್ರೆ ಕೆಟ್ಟವನು. ಈ ಎಲ್ಲ ಘಟನೆಗೆ ಪವಿತ್ರಾ ಗೌಡ ನೇರ ಕಾರಣʼʼಎಂದು ಹೇಳಿಕೆ ನೀಡಿದ್ದಾರೆ.

ವಿಸ್ತಾರ ಜತೆ ನಿರ್ಮಾಪಕ ಚಿಂಗಾರಿ ಮಹದೇವ್ ಮಾತನಾಡಿʻʻ ದರ್ಶನ್ ಕುಡಿಯದೇ ಇದ್ದಾಗ ಒಳ್ಳೆಯವನು, ಕುಡಿದಿದ್ರೆ ಕೆಟ್ಟವನು. ಇದೆಲ್ಲದಕ್ಕೂ ಪವಿತ್ರಾ ಗೌಡ ನೇರ ಕಾರಣ. ಆಕೆಯ ಬಗ್ಗೆ ಮಾತನಾಡೋಕೆ ಅಸಹ್ಯ ಆಗುತ್ತೆ. ವಿಜಯಲಕ್ಷ್ಮಿ ಒಳ್ಳೆ ಹೆಂಡ್ತಿಯಾಗಿದ್ದರು. ಅವರ ಸಂಸಾರದಲ್ಲಿ ಬಿರುಕು ಮೂಡಿ ದ್ದೇ ಪವಿತ್ರಾ ಇಂದ. ಪತ್ನಿ ಜೊತೆ ಜಗಳ ಮಾಡಿ ಜೈಲ್ ಸೇರಿದಾಗ ಆಚೆ ಬರೋಕೆ ನಾನೇ ಶ್ಯೂರಿಟಿ ಕೊಟ್ಟಿದ್ದೆ. ಚಿಂಗಾರಿ ಸಿನಿಮಾ ಪಬ್ಲಿಸಿಟಿಗಾಗಿ ದರ್ಶನ್ ಹಾಗು ನನ್ನ ಮಗ ಮನು ನಡುವೆ ಗಲಾಟೆ ಆಗಿತ್ತು . ನಂತರ 10ವರ್ಷ ದರ್ಶನ್‌ ಜತೆ ಸಂಪರ್ಕ ಇರಲಿಲ್ಲ. ಬೇರೆಯವರ ಮಾತು ಕೇಳಿ ನಮ್ ಜತೆ ಮಾತುಕತೆ ಮಾಡುತ್ತ ಇರ್ಲಿಲ್ಲ. ಇತ್ತೀಚೆಗೆ ಒಂದೆರಡು ಸಲ ʻಮೆಜೆಸ್ಟಿಕ್ʼ ಸಿನಿಮಾ 25ವರ್ಷ ಸಂಭ್ರಮದಲ್ಲಿ ಮಾತಾಡಿಸಿದ್ದರು. ತನಿಖೆ ಆದ್ಮೇಲೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕುʼʼಎಂದು ಹೇಳಿದರು.

ಇದನ್ನೂ ಓದಿ: Actor Darshan: ಕಸ್ಟಡಿಯಲ್ಲಿರೋ ದರ್ಶನ್‌ಗೆ ಹೆಚ್ಚಾಯ್ತು ಬಿಪಿ; ಪವಿತ್ರಾಗೌಡ ಮಾತ್ರ ಕೂಲ್‌ ಕೂಲ್‌..!

ಚಿಂಗಾರಿ ನಿರ್ಮಾಪಕ ಮಹದೇವ್ ಅವರು, ʻʻಸಿನಿಮಾ ಸಂದರ್ಭದಲ್ಲಿ ದರ್ಶನ್ ನಮ್ಮ ಜೊತೆ ಚೆನ್ನಾಗಿದ್ದರು. ರಿಲೀಸ್ ವೇಳೆ ಯಾರದೋ ಮಾತು ಕೇಳಿ ಪಬ್ಲಿಸಿಟಿ ವಿಚಾರವಾಗಿ ಜಗಳ ಮಾಡಿದ್ದಾರೆ ಎಂದಿದ್ದಾರೆ. ನಮ್ಮ ಸಿನಿಮಾ ವೇಳೆ ದರ್ಶನ್ ಜೊತೆ ಈಗ ಇರುವವರು ಇರಲಿಲ್ಲ. ಆಗ ನಾವು ದರ್ಶನ್ ಏನಾದರೂ ಮಾಡಿದರೆ ಅದು ಸರಿ ಇಲ್ಲ ಅಂತ ಬುದ್ದಿ ಮಾತು ಹೇಳುತ್ತಿದ್ದೆವು. ಈಗ ಯಾರು ಅವರ ತಪ್ಪಿನ‌ ಬಗ್ಗೆ ಹೇಳುವವರಿಲ್ಲ. ಅದಕ್ಕೆ ಹೀಗಾಗಿದೆʼʼಎಂದು ಮಾಧ್ಯಮಗಳಲ್ಲಿ ಹೇಳಿಕೊಂಡಿದ್ದಾರೆ.

ಇಂದಿನವರೆಗೂ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ ನಟ

ಜೂನ್ 11ರ ಮಂಗಳವಾರ ದರ್ಶನ್ ಬಂಧನವಾಗಿದ್ದರು. ಜೂನ್ 11 ರಿಂದ ಇಂದಿನವರೆಗೂ ಪೊಲೀಸ್ ಕಸ್ಟಡಿಯಲ್ಲಿಯೇ ಇದ್ದಾರೆ ನಟ ದರ್ಶನ್. ಸಿನಿಮಾ, ಶೂಟಿಂಗ್ ಎಂದು ಓಡಾಡ್ತಿದ್ದ ನಟನಿಗೆ ಈಗ ಪೊಲೀಸ್ ಠಾಣೆಯಲ್ಲಿ ವಾಸ. ನಾಳೆ ದರ್ಶನ್ ಆಂಡ್ ಗ್ಯಾಂಗ್ ಪೊಲೀಸ್ ಕಸ್ಟಡಿಗೆ ಅಂತ್ಯವಾಗಲಿದೆ. ನಾಳೆ ಕೋರ್ಟ್‌ಗೆ ದರ್ಶನ್‌ ಹಾಗೂ ಗ್ಯಾಂಗ್‌ವನ್ನು ಪೊಲೀಸರು ಹಾಜರು ಪಡಿಸಲಿದ್ದಾರೆ. ಪ್ರಕರಣದ ತನಿಖೆ ಸಂಬಂಧ ಪೇಪರ್ ವರ್ಕ್ ಕೂಡ ಪೊಲೀಸರು ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಮತ್ತೆ ಪುನಃ ಕಸ್ಟಡಿಗೆ ಕೇಳದಿರಲು ಪೊಲೀಸರು ನಿರ್ಧಾರ ಮಾಡಿರುವುದಾಗಿ ವರದಿಯಾಗಿದೆ. ಬಹುತೇಕ ನಾಳೆ ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲರೂ ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ

ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಅಲಿಯಾಸ್‌ ಡಿ ಬಾಸ್ ಸ್ವ- ಇಚ್ಛೆಯ ಹೇಳಿಕೆ ನೀಡಿದ್ದು, ಅದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೊಲೆಯಾದ ವ್ಯಕ್ತಿಯ ಶವವನ್ನು ವಿಲೇವಾರಿ ಮಾಡಿ, ಈ ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬರದಂತೆ ಮಾಡಬೇಕು. ಪೊಲೀಸರು, ಲಾಯರ್ ಮತ್ತು ಶವ ಸಾಗಿಸುವ ವ್ಯಕ್ತಿಗಳಿಗೆ ತಗಲುವ ವೆಚ್ಚವನ್ನು ಬರಿಸಲು ಪ್ರದೂಶ್‌ಗೆ 30 ಲಕ್ಷ ಹಣ ನೀಡಿರುವುದಾಗಿ ದರ್ಶನ್‌ ಸ್ವ ಇಚ್ಛೆ ಹೇಳಿಕೆ ನೀಡಿದ್ದಾರೆ.

Exit mobile version