ಬೆಂಗಳೂರು: ರೇಣುಕಾ ಸ್ವಾಮಿ ಹತ್ಯೆ (Renuka swamy Murder) ಪ್ರಕರಣದಲ್ಲಿ ದರ್ಶನ್ (Actor Darshan: ) ಜೈಲು ಸೇರಿದ್ದಾರೆ. ದರ್ಶನ್ ಅವರು ಜೈಲಿನಲ್ಲಿದ್ದು ಒಂದು ತಿಂಗಳು ಆಗುತ್ತಾ ಬಂದಿದೆ. ಜಿಮ್‌ನಲ್ಲಿ ವರ್ಕೌಟ್ ಮಾಡಿಕೊಂಡು , ಹೊರಗಡೆ ಮೀನು, ಮಟನ್ ತಿಂದು ಕೊಂಡು ಹಾಯಾಗಿದ್ದ ದರ್ಶನ್, ಕೈದಿಗಳಿಗೆ ಯಾವ ರೀತಿಯ ಊಟ ನೀಡುತ್ತಾರೋ ಅದನ್ನೇ ಸೇವಿಸಬೇಕು. ಹೀಗಾಗಿ ದರ್ಶನ್ ಅವರು ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಕಾರಣದಿಂದಲೇ ಅವರು 25 ದಿನಗಳಲ್ಲಿ ಬರೋಬ್ಬರಿ 10 ಕೆಜಿ ತೂಕ ಕಳೆದುಕೊಂಡಿದ್ದಾರೆ ಎಂದು ವರದಿ ಆಗಿದೆ.
ರೇಣುಕಾ ಸ್ವಾಮಿ ಹತ್ಯೆ (Renuka swamy Murder) ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಪೊಲೀಸರು ತೀವ್ರವಾಗಿ ಪ್ರಶ್ನಿಸುತ್ತಿದ್ದು, ಇಂದು ಮತ್ತೆ ಎರಡನೇ ಬಾರಿ ವಿಚಾರಣೆಗಾಗಿ ಕರೆಸಿದ್ದಾರೆ. ಪ್ರಕರಣದಲ್ಲಿ ಇವರಿಬ್ಬರ ಭಾಗೀದಾರಿಕೆ ಗಂಭೀರ ಸ್ವರೂಪದ್ದಾಗಿದ್ದು, ಇಬ್ಬರಿಗೂ ಬಂಧನ ಭೀತಿ ಎದುರಾಗಿದೆ ಎಂದು ಮೂಲಗಳು ತಿಳಿಸಿವೆ. ಇಬ್ಬರಲ್ಲಿ ಒಬ್ಬಾಕೆ ನಟ ದರ್ಶನ್ (Actor Darshan) ಹಾಗೂ ಪವಿತ್ರ ಗೌಡ (Pavithra Gowda) ಅನ್ನು ಭೇಟಿಯಾಗಲು ಜೈಲಿಗೆ ಬಂದಿದ್ದವಳು.
ನಟ ದರ್ಶನ್ ಅವರು ಜೈಲಿನಲ್ಲಿದ್ದು ಒಂದು ತಿಂಗಳು ಆಗುತ್ತಾ ಬಂದಿದೆ. ಹೊರಗಿದ್ದಾಗ ಅವರು ಮಾಂಸದೂಟ ಮಾಡಿಕೊಂಡು ಹಾಯಾಗಿ ಇದ್ದರು. ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಆದರೆ, ಜೈಲಿನಲ್ಲಿ ಆ ರೀತಿ ಇಲ್ಲ. ಜೈಲಿನ ಇತರ ಕೈದಿಗಳಿಗೆ ಯಾವ ರೀತಿಯ ಊಟ ನೀಡುತ್ತಾರೋ ಅದನ್ನೇ ಸೇವಿಸಬೇಕು. ದರ್ಶನ್ ಅವರಿಗೆ ನಿತ್ಯ ಚಿಂತೆ ಕಾಡುತ್ತಿದೆ. ಯಾವಾಗ ಹೊರಗೆ ಬರುತ್ತೇನೋ ಎನ್ನುವ ಆತಂಕ ಮೂಡಿದೆ. ಹೀಗಾಗಿ ಅವರು ಜೈಲಿನಲ್ಲಿ ಸರಿಯಾಗಿ ಊಟ ಮಾಡುತ್ತಿಲ್ಲ. ಈ ಇವರಲ್ಲಿ ಒಬ್ಬಾತ ಕಾರ್ತಿಕ್ ಪುರೋಹಿತ್. ಈತನಿಗೆ ಇಂದು ಇಂದು ವಿಚಾರಣೆಗೆ ಹಾಜರಾಗಲು ನೊಟೀಸ್ ಹೋಗಿದೆ. ಶನಿವಾರ ಸುಮಾರು ನಾಲ್ಕೈದು ಗಂಟೆಗಳ ಕಾಲ ಪೊಲೀಸರು ವಿಚಾರಣೆ ಮಾಡಿದ್ದರು. ಶಾಸಕರೊಬ್ಬರ ಕಾರು ಚಾಲಕನಾಗಿರುವ ಕಾರ್ತಿಕ್ ಪುರೋಹಿತ್, ರೇಣುಕಾ ಸ್ವಾಮಿ ಮೃತದೇಹ ಬಿಸಾಡಿದ ಬಳಿಕ ಆರೋಪಿ ಪ್ರದೋಶ್ ಅನ್ನು ಪಿಕ್‌ಅಪ್ ಮಾಡಿದ್ದ. ತನ್ನದೇ ಕಾರಿನಲ್ಲಿ ಪ್ರದೋಶ್‌ನನ್ನು ಗಿರಿನಗರಕ್ಕೆ ಕರೆದುಕೊಂಡು ಬಂದಿದ್ದ.
ಇದನ್ನೂ ಓದಿ: Actor Darshan: ದರ್ಶನ್ ಸುದ್ದಿ ಕೇಳಿ ಆಘಾತವಾಗಿತ್ತು ಎಂದು ಬಿಕ್ಕಿ ಬಿಕ್ಕಿ ಅತ್ತ ನೀನಾಸಂ ರತ್ನಕ್ಕ!
ಇದನ್ನೂ ಓದಿ: Actor Darshan: ಪವಿತ್ರ ಗೌಡ ಆಪ್ತೆ, ಶಾಸಕರ ಕಾರು ಚಾಲಕನಿಗೆ ಸಂಕಷ್ಟ; 2ನೇ ಬಾರಿ ವಿಚಾರಣೆ, ಬಂಧನ?
ಹೀಗಾಗಿ ಆವತ್ತು ಏನೆಲ್ಲಾ ಆಯ್ತು, ಕೊಲೆಯ ಮಾಹಿತಿ ಕಾರ್ತಿಕ್‌ಗೆ ಇತ್ತೇ ಎಂದು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಕೊಲೆ ಮಾಹಿತಿ ಇದ್ದೂ ಪೊಲೀಸರಿಗೆ ತಿಳಿಸಲಿಲ್ಲವಾದರೆ ಸಂಕಷ್ಟ ಗ್ಯಾರಂಟಿ ಆಗಿದೆ. ಜೊತೆಗೆ ಎರಡು ದಿನಗಳ ಕಾಲ ಆರೋಪಿಗೆ ಆಶ್ರಯ ಕೊಟ್ಟಿರುವ ಶಂಕೆ ಇದೆ. ಆಶ್ರಯದ ಜೊತೆಗೆ ಹಣಕಾಸು ಸಹಾಯವೂ ಮಾಡಿರುವ ಅನುಮಾನ ಇದೆ. ಹೀಗಾಗಿ ಇಂದು ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ನೊಟೀಸ್ ನೀಡಲಾಗಿದೆ.
ಜೊತೆಗೆ ಇಂದು ಪವಿತ್ರ ಗೌಡ ಆಪ್ತೆ ಸಮತಾ ವಿಚಾರಣೆ ಕೂಡ ನಡೆಯಲಿದೆ. ಈಗಾಗಲೇ ಸಮತಾ ಒಂದು ಬಾರಿ ವಿಚಾರಣೆಗೆ ಹಾಜರಾದ್ದಾಳೆ. ಈಕೆ ಆರೋಪಿ ಧನರಾಜ್‌ಗೆ 3 ಸಾವಿರ ರೂಪಾಯಿ ಹಣ ಕಳುಹಿಸಿದ್ದಳು. ಇದೇ ಹಣದಲ್ಲಿ ಧನರಾಜ್ ಎಲೆಕ್ಟ್ರಿಕ್ ಶಾಕ್ ಡಿವೈಸ್ ಖರೀದಿ ಮಾಡಿರುವ ಶಂಕೆ ಇದೆ. ಹೀಗಾಗಿ ಸಮತಾಳನ್ನು ಮತ್ತೆ ವಿಚಾರಣೆಗೆ ಪೊಲೀಸರು ಕರೆದಿದ್ದು, ಇಂದು ಹಾಜರಾಗಲು ಸೂಚಿಸಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯ ಎಸಿಪಿ ಕಚೇರಿಯಲ್ಲಿ ತನಿಖಾಧಿಕಾರಿ ಎಸಿಪಿ ಚಂದನ್ ಮುಂದೆ ಸಮತಾ ಹಾಜರಾಗಲಿದ್ದಾಳೆ.
ಪವಿತ್ರ ಮುನಿಸು ತಣಿಸಲು ʼಕಂದಾಯʼ ಕಟ್ಟುತ್ತಿದ್ದ ದರ್ಶನ್
ದರ್ಶನ್ (Actor Darshan) ಹಾಗೂ ಪವಿತ್ರಾ (Pavithra Gowda) ನ್ಯಾಯಾಂಗ ಬಂಧನಲ್ಲಿದ್ದಾರೆ. ಈ ಕೊಲೆ ಪ್ರಕರಣಕ್ಕೂ ಮುಂಚೆ ದರ್ಶನ್‌ಗೆ ಪವಿತ್ರಾ ಗೌಡಳ ಮುನಿಸು ಹಲವು ಬಾರಿ ಆಪತ್ತು ತಂದು ಒಡ್ಡಿದೆ. ಪವಿತ್ರಾಗೌಡ ಮುನಿಸು ಶಮನ ಮಾಡೋದೇ ಒಂದು ಚಾಲೇಂಜ್ ಆಗಿತ್ತು ದರ್ಶನ್‌ಗೆ. ಒಂದೊಂದು ಬಾರಿ ಕೋಪಿಸಿಕೊಂಡಾಗಲೂ ಒಂದೊಂದು ರೀತಿಯ ಪರಿಹಾರ ಕೊಡಬೇಕಿತ್ತು. ಲಕ್ಷ ,ಕೋಟಿ ಬೆಲೆ ಬಾಳುವ ವಸ್ತುಗಳೇ ಪವಿತ್ರಗೌಡ ಕೋಪ ಕಡಿಮೆಯಾಗಲು ಬೇಕಿತ್ತು.
ಕೆಲವೇ ದಿನಗಳ ಹಿಂದೆ ಒಂದು ಕಾರ್ ಕೂಡ ದರ್ಶನ್ ಅವರು ಪವಿತ್ರಾಗೆ ಗಿಫ್ಟ್ ಕೊಟ್ಟಿದ್ದರು ಎನ್ನಲಾಗಿದೆ. ಅನಂತರ ಮತ್ತೊಂದು ಕಾರ್ ಗಿಫ್ಟ್ ಕೂಡ ಪವಿತ್ರಾ ಕೇಳಿದ್ದರಂತೆ. ದರ್ಶನ್ ದುಬೈ ಟ್ರಿಪ್ ಮುಗಿಸಿ ಬರುತ್ತಿದ್ದಂತೆ ಕೋಟಿ ಬೆಲೆಯ ಕಾರಿಗೆ ತೀವ್ರವಾದ ಬೇಡಿಕೆ ಇಟ್ಟಿದ್ದರು. ಕಾರು ಕೊಟ್ಟ ಬಳಿಕ ಇದೀಗ ಒಂದು ಪ್ರಾಣವೇ ಗಿಫ್ಟ್ ಕೊಟ್ಟಂತಾಗಿದೆ.
ದರ್ಶನ್ ಪವಿತ್ರಾ ಮುನಿಸು ಶಮನಕ್ಕೆ ರೇಣುಕಾಸ್ವಾಮಿ ಕಿಡ್ನಾಪ್ ಅಸ್ತ್ರವಾಗಿತ್ತು ಎನ್ನಲಾಗಿದೆ. ಆರಂಭದಲ್ಲಿ ಕಾರು ಕೊಡಿಸೋದಕ್ಕೆ ನಟ ದರ್ಶನ್ ನಿರಾಕರಿಸಿದ್ದರು ಎಂಬ ಮಾಹಿಯೂ ಇದೆ. ಅಷ್ಟು ದೊಡ್ಡ ಮಟ್ಟದ ಹಣ ಸದ್ಯ ಇಲ್ಲವೆಂಬ ಕಾರಣ ನೀಡಿ ಕಾರು ಕೊಡಿಸಲು ಬ್ರೇಕ್ ಕೂಡ ಹಾಕಕಿದ್ದರು. ಇದರಿಂದಾಗಿ ಕೋಪಗೊಂಡ ಪವಿತ್ರಾ ಬಹುತೇಕ ಒಂದು ತಿಂಗಳ ಕಾಲ ದರ್ಶನ್ ಬಳಿ ಮಾತು ಬಿಟ್ಟಿದ್ದಳು.
ಈ ಸಮಯದಲ್ಲಿಯೇ ರೇಣುಕಾಸ್ವಾಮಿ ಮೆಸೇಜ್ ಅತಿರೇಕವಾಗಿತ್ತು. ಮಾತು ಬಿಟ್ಟಿದ್ದ ಕಾರಣ ದರ್ಶನ್‌ಗೆ ವಿಷಯ ತಿಳಿಸದ ಪವಿತ್ರಾ ಗೌಡ, ಈ ವಿಚಾರವನ್ನು ಪವನ್ ಬಳಿ ತಿಳಿಸಿದ್ದಳು. ಆದರೆ ಪವನ್ ಈ ವಿಚಾರವನ್ನು ದರ್ಶನ್ ಬಳಿ ನೇರವಾಗಿ ಹೇಳಿದ್ದ. ಆ ನಂತರ ನಡೆದದ್ದೇ ರೇಣುಕಾಸ್ವಾಮಿ ಕಿಡ್ನಾಪ್ ಮತ್ತು ಕೊಲೆ ಪ್ರಕರಣ.