Site icon Vistara News

Actor Darshan: ಆಸ್ಪತ್ರೆಗೆ ಕರೆದೊಯ್ಯುವಾಗ ಫುಲ್‌ ಟೆನ್ಷನ್‌ ಆಗಿದ್ರು ಪವಿತ್ರಾ ಗೌಡ! ಜೈಲು ಸೇರಿದ್ರೆ ಗತಿ ಏನು?

Actor Darshan Pavitra Gowda was in full tension while being taken to the hospital

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ (Renuka Swamy Murder) ಪ್ರಕರಣದಲ್ಲಿ ಇಂದು ಮತ್ತೆ ನ್ಯಾಯಾಲಯದ ಮುಂದೆ ನಟ ದರ್ಶನ್‌ (Actor Darshan) ಸೇರಿ ಎಲ್ಲ ಬಂಧಿತ 17 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ನ್ಯಾಯಾಲಯ (Court) ಆರೋಪಿಯನ್ನು ಮತ್ತೆ ಪೊಲೀಸ್‌ ಕಸ್ಟಡಿಗೆ (Police custody) ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ (Judicial custody) ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂದು ತಿಳಿದುಬರಲಿದೆ. ಹತ್ಯೆ ಕೇಸ್​ನಲ್ಲಿ ಅವರು ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಡಿಎನ್​ಎ ಪರೀಕ್ಷೆ ಸಲುವಾಗಿ ಪವಿತ್ರಾ ಗೌಡ ಸೇರಿ 9 ಆರೋಪಿಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸ್​ ವ್ಯಾನ್​ನಲ್ಲಿ ಕುಳಿತ ಪವಿತ್ರಾ ಗೌಡ ಸಿಕ್ಕಾಪಟ್ಟೆ ಆತಂಕದಲ್ಲಿ ಇದ್ದಂತೆ ಕಾಣಿಸಿತ್ತು.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ಯಾವೆಲ್ಲ ಟೆಸ್ಟ್ ಮಾಡಲಾಯ್ತು?

ದರ್ಶನ್ ವಿಗ್ ಹೇರ್ ಸ್ಯಾಂಪಲ್ ಕೂಡ ಪೊಲೀಸರು ಪಡೆದಿದ್ದಾರೆ. ತಲೆಗೆ ವಿಗ್ ಅಳವಡಿಸಿಕೊಂಡಿದ್ದರು ನಟ ದರ್ಶನ್.

ಯಾವೆಲ್ಲ ಟೆಸ್ಟ್

ಸಂಗ್ರಹಿಸಿರುವ ಎಲ್ಲಾ ಸ್ಯಾಂಪಲ್‌ಗಳನ್ನು ಪೊಲೀಸರು ಎಫ್ಎಸ್ಎಲ್‌ಗೆ ಕಳಿಸಿದ್ದಾರೆ. ಆರೋಪಿಗಳಿಂದ ಪಡೆದಿರುವ ಮತ್ತು ಘಟನಾ ಸ್ಥಳಗಳಲ್ಲಿ ಸಿಕ್ಕಿರುವ ಮಾದರಿಗಳನ್ನು ಸಂಗ್ರಹಿಸಿರುವ ಅಧಿಕಾರಿಗಳು, ಎರಡನ್ನೂ ತಾಳೆ ಹಾಕಿ ಘಟನೆಯ ಸ್ಥಳದಲ್ಲಿ ಆರೋಪಿಯ ಭಾಗವಹಿಸಿರುವಿಕೆಯನ್ನು ದೃಢೀಕರಿಸುತ್ತಾರೆ. ಆ ಮೂಲಕ ಈಗಾಗಲೇ ಸಿಕ್ಕಿರುವ ಸಾಕ್ಷ್ಯಗಳಿಗೆ ಪುಷ್ಟಿ ಸಿಕ್ಕಂತಾಗುತ್ತದೆ.

 ಕಸ್ಟಡಿಗೋ ಜೈಲಿಗೋ ತೀರ್ಮಾನ

ನಟ ದರ್ಶನ್ ಸೇರಿ ಎಲ್ಲ 17 ಮಂದಿ ಆರೋಪಿಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ. ಇಂದು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ದರ್ಶನ್‌ನನ್ನು ಎರಡು ಬಾರಿ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ.

ಪೊಲೀಸ್ ಕಸ್ಟಡಿ ವೇಳೆ ಆರೋಪಿಗಳ ಸ್ವ ಇಚ್ಛಾ ಹೇಳಿಕೆ, ಜೃತ್ಯ ನಡೆಸಿದಾಗ ಧರಿಸಿದ್ದ ಬಟ್ಟೆಗಳು, ಮೊಬೈಲುಗಳು, ಸ್ಥಳ ಮಹಜರು ಸೇರಿ ಹಲವು ಮಹತ್ವದ ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. ಈಗಾಗಲೇ ಪ್ರಕರಣ ಸಂಬಂಧ ಒಂಬತ್ತು ದಿನಗಳ ಕಾಲ ದರ್ಶನ್‌ ಅಲಿಯಾಸ್‌ ಡಿ ಬಾಸ್‌ ಪೊಲೀಸ್ ಕಸ್ಟಡಿಯಲ್ಲಿ ಕಳೆದಿದ್ದಾರೆ.

ಜೂನ್‌ 8ರಂದು ರೇಣುಕಾಸ್ವಾಮಿ ಕೊಲೆ ನಡೆದಿತ್ತು. ಜೂನ್ 11ರಂದು ಹತ್ಯೆ ಸಂಬಂಧ ದರ್ಶನ್‌ನನ್ನು ಮೈಸೂರಿನಲ್ಲಿ ವಶಕ್ಕೆ ಪಡೆದು ಬಂಧಿಸಲಾಗಿತ್ತು. ಇಂದು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರೆ ದರ್ಶನ್‌ ಪರಪ್ಪನ ಅಗ್ರಹಾರ ಜೈಲು ಸೇರಲಿದ್ದಾರೆ. ಜೈಲಿಗೆ ಕಳಿಸಿದರೆ ಎರಡನೇ ಬಾರಿಗೆ ಪರಪ್ಪನ ಅಗ್ರಹಾರ ಜೈಲಿಗೆ ನಟ ದರ್ಶನ್ ಹೋದಂತಾಗುತ್ತದೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ ನಟ ದರ್ಶನ್‌ ಜೈಲು ಸೇರಿದ್ದರು.

Exit mobile version