Site icon Vistara News

ಮೂಸೆವಾಲಾ ಸ್ಥಿತಿ ನಿಮಗೂ ಬರಲಿದೆ: ನಟ ಸಲ್ಮಾನ್‌ ಖಾನ್‌ಗೆ ಜೀವ ಬೆದರಿಕೆ

salman khan

ಮುಂಬೈ: ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರನ್ನು ಕೊಲೆ ಮಾಡುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಸಲ್ಮಾನ್‌ ಖಾನ್‌ ಜತೆಗೆ ಅವರ ತಂದೆ ಸಲೀಂ ಖಾನ್‌ ಅವರನ್ನೂ ಹತ್ಯೆ ಮಾಡುವುದಾಗಿ ಪತ್ರ ರವಾನಿಸಿದ್ದು, ಪಂಜಾಬ್‌ ಗಾಯಕ ಸಿಧು ಮೂಸೆವಾಲಾಗೆ ಬಂದ ಸ್ಥಿತಿ ನಿಮಗೂ ಬರಲಿದೆ ಎಂದು ಎಚ್ಚರಿಸಿದ್ದಾರೆ.

ಜೀವ ಬೆದರಿಕೆ ಪತ್ರದಿಂದ ಆತಂಕಗೊಂಡ ಸಲ್ಮಾನ್‌ ಖಾನ್‌ ಭಾನುವಾರ ಬಾಂದ್ರಾ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪರಿಚಿತ ವ್ಯಕ್ತಿಗಳ ಬಂಧನಕ್ಕೆ ತನಿಖೆ ಆರಂಭಿಸಿದ್ದಾರೆ. ಸಲೀಂ ಖಾನ್‌ ಅವರು ನಿತ್ಯ ವಾಯುವಿಹಾರಕ್ಕೆ ತೆರಳುತ್ತಿದ್ದ ಬಾಂದ್ರಾ ಬ್ಯಾಂಡ್‌ ಸ್ಟ್ಯಾಂಡ್‌ ಬಳಿ ಪತ್ರ ಸಿಕ್ಕಿದೆ. ಅದನ್ನು ಭದ್ರತಾ ಸಿಬ್ಬಂದಿ ನೋಡಿ ಪೊಲೀಸರ ಗಮನಕ್ಕೆ ತಂದಿದ್ದಾರೆ. ಈ ಪತ್ರ ಬರೆದವರು ಯಾರು, ಯಾವ ಉದ್ದೇಶಕ್ಕೆ ಬರೆದರು ಎಂಬುವುದು ತನಿಖೆ ನಂತರ ತಿಳಿದು ಬರಲಿದೆ.

ಈ ಹಿಂದೆಯೂ ನಟ ಸಲ್ಮಾನ್‌ಗೆ ಕೊಲೆ ಬೆದರಿಕೆಗಳು ಬಂದಿದ್ದವು. ಕೃಷ್ಣ ಮೃಗ ಹತ್ಯೆ ಪ್ರಕರಣದ ಬಳಿಕ ಸಲ್ಮಾನ್‌ ಅವರನ್ನು ಕೊಲೆ ಮಾಡುವುದಾಗಿ ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯ್‌‌ ಹೇಳಿದ್ದ. ಈ ನಿಟ್ಟಿನಲ್ಲಿ ಆತನ ತಂಡ ನಡೆಸಿದ ಹತ್ಯಾ ಪ್ರಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದರು. ಸದ್ಯ ತಿಹಾರ್‌ ಜೈಲಿನಲ್ಲಿರುವ‌ ಲಾರೆನ್ಸ್ ಬಿಷ್ಣೋಯ್‌ ಪಂಜಾಬ್‌ ಗಾಯಕ ಮೂಸೆವಾಲಾನ ಹತ್ಯೆ ಮಾಡಿರುವುದಾಗಿ ಘೋಷಿಸಿದ್ದ. ಇದೀಗ ಈ ಬೆದರಿಕೆ ಪತ್ರಕ್ಕೂ ಈತನಿಗೂ ಸಂಬಂಧವಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ | ವಿಕೃತ ಕಾಮಿಯ ದೌರ್ಜನ್ಯಕ್ಕೆ ನರಳಿದ ಹಸು; ಕೂಗು ಕೇಳಿ ಹೋದ ಮಾಲೀಕ ದೃಶ್ಯ ನೋಡಿ ಬೆಚ್ಚಿ ನಿಂತಿದ್ದ !

Exit mobile version