Site icon Vistara News

Ahmedabad Accident: 9 ಜನರ ಮೇಲೆ ಕಾರು ಚಲಾಯಿಸಿದ ವ್ಯಕ್ತಿಗೆ ಧರ್ಮದೇಟು; ಕ್ಷಮೆ ಕೇಳಿದರೂ ಬಿಡದ ಜನ

Ahmedabad Car Accident Accused

Ahmedabad Accident: Father-son duo arrested, taken to crime scene

ಅಹ್ಮದಾಬಾದ್:‌ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ರಸ್ತೆ ಮೇಲೆ ನಿಂತಿದ್ದ ಜನರ ಮೇಲೆ ಕಾರು ಚಲಾಯಿಸಿದ (Ahmedabad Accident) ತಾತ್ಯಾ ಪಟೇಲ್‌ಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದಾರೆ. ವೇಗವಾಗಿ ಕಾರು ಚಲಾಯಿಸುತ್ತಿದ್ದ ತಾತ್ಯಾ ಪಟೇಲ್‌ ಹಾಗೂ ಆತನ ತಂದೆ ಪ್ರಜ್ಞೇಶ್‌ ಪಟೇಲ್‌ ಅವರನ್ನು ಪೊಲೀಸರು ಬಂಧಿಸಿದ್ದು, ಇವರನ್ನು ಅಪಘಾತ ನಡೆದ ಸ್ಥಳಕ್ಕೆ ಕರೆದುಕೊಂಡು ಹೋದಾಗ ಜನ ಅವರನ್ನು ಥಳಿಸಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ತನಿಖೆಯ ಭಾಗವಾಗಿ ಘಟನೆ ನಡೆದ ಸ್ಥಳಕ್ಕೆ ಇಬ್ಬರನ್ನೂ ಕರೆದುಕೊಂಡು ಹೋಗುತ್ತಲೇ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ಪೊಲೀಸರು ಇದ್ದರೂ ತಾತ್ಯಾ ಪಟೇಲ್‌ ಮೇಲೆ ಎರಗಿದ ಜನ ಥಳಿಸಿದ್ದಾರೆ. ಪಶ್ಚಾತ್ತಾಪದಿಂದ ತಾತ್ಯಾ ಪಾಟೀಲ್‌ ಕ್ಷಮೆಯಾಚಿಸಿದರೂ, ಕೈ ಮುಗಿದರೂ ಜನ ಕೇಳದೆ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.‌

ಅಹ್ಮದಾಬಾದ್‌ ನಗರದ ಮೂಲಕ ಹಾದು ಹೋಗಿರುವ ಸರ್ಕೇಜ್-ಗಾಂಧಿನಗರ ಹೆದ್ದಾರಿಯಲ್ಲಿರುವ ಇಸ್ಕಾನ್‌ ಫ್ಲೈಓವರ್‌ ಮೇಲೆ ಬುಧವಾರ ತಡರಾತ್ರಿ ಭಾರಿ ಅಪಘಾತ ಸಂಭವಿಸಿದೆ. ಬೇರೊಂದು ಅಪಘಾತವನ್ನು ನಿಂತು ನೋಡುತ್ತಿದ್ದ ಜನರ ಮೇಲೆ ವೇಗವಾಗಿ ಬಂದ ಜಾಗ್ವಾರ್‌ ಕಾರು ಅವರ ಮೇಲೆ ಹರಿದ ಕಾರಣ 9 ಜನ ಮೃತಪಟ್ಟಿದ್ದಾರೆ. ಹಾಗೆಯೇ, 13 ಜನ ಗಾಯಗೊಂಡಿದ್ದಾರೆ. ಗಂಟೆಗೆ ಸುಮಾರು 160 ಕಿ.ಮೀ ವೇಗದಲ್ಲಿ ಬಂದ ಕಾರು ಜನರ ಮೇಲೆ ಹರಿದಿದೆ.

ಇದನ್ನೂ ಓದಿ: Road Accident : ಕಬ್ಬು ತುಂಬಿದ ಟ್ರ್ಯಾಕ್ಟರ್‌, ಬೈಕ್‌ ಮುಖಾಮುಖಿ ಡಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲೇ ಬಲಿ

“ಕಾರು ಗುದ್ದಿದ ರಭಸಕ್ಕೆ ಜನ 25-30 ಅಡಿ ದೂರದಲ್ಲಿ ಬಿದ್ದಿದ್ದಾರೆ. ಸ್ಥಳದಲ್ಲೇ ಆರು ಮಂದಿ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರು ಕಾರು ಚಾಲಕ ಹಾಗೂ ಆತನ ತಂದೆಯನ್ನು ವಶಪಡಿಸಿಕೊಂಡಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Exit mobile version