ಗದಗ: ದಾರಿ ಬಿಡು ಎಂದಿದ್ದಕ್ಕೆ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗೆ ಕಲ್ಲು ಎಸೆದಿದ್ದಾನೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ (assault Case) ಘಟನೆ ನಡೆದಿದೆ.
ಸೂರಣಗಿ ಗ್ರಾಮದ ಪುಟ್ಟಪ್ಪ ಬಸನಗೌಡ ಗೊಲ್ಲರ ಎಂಬಾತ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕ ಹಾಗೂ ನಿರ್ವಾಹಕನ ಜತೆಗೆ ಜಗಳ ಮಾಡಿದ್ದಾನೆ. ಚಾಲಕ ಎಷ್ಟೇ ಹಾರನ್ ಮಾಡಿದರೂ ಬಸ್‌ಗೆ ದಾರಿ ಬಿಡದೇ ಪುಂಡಾಟ ತೋರಿದ್ದಾನೆ. ಚಾಲಕನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು, ಹಲ್ಲೆ ಮಾಡಲು ಮುಂದಾಗಿದ್ದಾನೆ. ಇತ್ತ ಸ್ಥಳೀಯರು ಅದೆಷ್ಟೇ ಬುದ್ಧಿ ಹೇಳಿ ಬಿಡಿಸಲು ಹೋದರೂ ಮಾತು ಕೇಳದೆ ಬಸ್‌ಗೆ ಕಲ್ಲು ತೂರಿದ್ದಾನೆ.
ಗುತ್ತಲ ಪಟ್ಟಣದದಿಂದ ಸೂರಣಗಿ ಮಾರ್ಗವಾಗಿ ಕೆಎಸ್‌ಆರ್‌ಟಿಸಿ ಬಸ್ ಲಕ್ಷ್ಮೇಶ್ವರಕ್ಕೆ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಗ್ರಾಮದ ಮಧ್ಯದಲ್ಲಿ ಕಿರಿದಾದ ರಸ್ತೆಯಲ್ಲೆ ಬಸ್ ಚಲಿಸಬೇಕಾದ ಅನಿವಾರ್ಯತೆ ಇದೆ. ಆದರೆ ಬಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೇ ಕುಡಿದ ಮತ್ತಿನಲ್ಲಿ ಕಲ್ಲು ಎಸೆದಿದ್ದಾನೆ. ಅದೃಷ್ಟವಶಾತ್ ಚಾಲಕನ ಮುಖಕ್ಕೆ ಬೀಳುತ್ತಿದ್ದ ಕಲ್ಲು ಜಸ್ಟ್ ಮಿಸ್ ಗಾಜಿಗೆ ಬಡಿದು ಕೆಳಗೆ ಬಿದ್ದಿದೆ.
ಗಲಾಟೆ ಮಾಡಿ ಪುಟ್ಟಪ್ಪ ಎಸ್ಕೇಪ್ ಆಗಿದ್ದು, ಈತನ ತಪ್ಪಿಗೆ ಪೊಲೀಸರು ಪುಟ್ಟಪ್ಪನ ತಂದೆಯನ್ನು ವಶಕ್ಕೆ ಪಡೆದಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Murder Case: ಹಳೇ ವೈಷಮ್ಯ; ಯುವಕನ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡಿದ ಹಂತಕರು
ಬೆಂಗಳೂರಲ್ಲಿ ಕಾರ್ ಪಾರ್ಕಿಂಗ್ ವಿಚಾರಕ್ಕೆ ಮಾರಾಮಾರಿ
ಕಾರ್ ಪಾರ್ಕಿಂಗ್ ವಿಚಾರಕ್ಕೆ ಎದುರು ಬದುರು ಮನೆಯವರ ನಡುವೆ ನಡೆದ ಗಲಾಟೆಯು ಠಾಣೆ ಮೆಟ್ಟಿಲೇರಿದೆ. ಬೆಂಗಳೂರಿನ ಸಂಜಯನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಯೂರ್ ಮತ್ತು ಸಂತೋಷ್ ಇಬ್ಬರೂ ಸಂಜಯನಗರದ ಗೋವಿಂದಪ್ಪ ಲೇಔಟ್ ನಿವಾಸಿಯಾಗಿದ್ದು ಕಿತ್ತಾಡಿಕೊಂಡಿದ್ದಾರೆ.
ಮಯೂರ್ ಕೆಲ ದಿನಗಳ ಕಾಲ ಸಂತೋಷ್ ಮನೆ ಮುಂದೆ ತನ್ನ ಮಾರುತಿ ಆಲ್ಟೋ ಕಾರ್ ಪಾರ್ಕ್ ಮಾಡುತ್ತಿದ್ದ. ರಸ್ತೆ ಕಿರಿದಾದ ಕಾರಣಕ್ಕೆ ಕಾರು ತೆಗೆಯುವಂತೆ ಸಂತೋಷ್ ಒತ್ತಾಯಿಸಿದ್ದ. ಆದರೆ ಮಯೂರ್ ಕ್ಯಾರೆ ಎಂದಿಲ್ಲ. ಶನಿವಾರ ರಾತ್ರಿಯು ಸಂತೋಷ್ ಹಾಗೂ ಮಯೂರ್ ಕುಟುಂಬಸ್ಥ ನಡುವೆ ಇದೇ ವಿಚಾರಕ್ಕೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಗಲಾಟೆ ವಿಕೋಪಕ್ಕೆ ಹೋಗಿದೆ. ಈ ವೇಳೆ ಸಿಟ್ಟಿನಲ್ಲಿ ಸಂತೋಷ್ ಕೈಯಲ್ಲಿಯೇ ಕಾರು ಗ್ಲಾಸ್ ಪುಡಿ ಪುಡಿ ಮಾಡಿದ್ದಾನೆ. ಜತೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮಾತಿನಲ್ಲಿ ಮುಗಿಯಬಹುದಾದ ವಿಷಯವು ಈಗ ಸಂಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿರಸಿ ಹೋಂ ಸ್ಟೇ ಅವ್ಯವಹಾರ; ಸಾಮಾಜಿಕ ಕಾರ್ಯಕರ್ತೆಗೆ ಹಿಗ್ಗಾ-ಮುಗ್ಗಾ ಥಳಿತ
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಯಲ್ಲಾಪುರ ಪಟ್ಟಣದ ಬಸ್ ಸ್ಟ್ಯಾಂಡ್‌ನಲ್ಲಿ ನಾಲ್ಕೈದು ಮಹಿಳೆಯರು ಸೇರಿ ಮತ್ತೊಬ್ಬ ಮಹಿಳೆಗೆ ಮನಬಂದಂತೆ ಥಳಿಸಿದ್ದಾರೆ. ಇತ್ತೀಚಿಗಷ್ಟೆ ಉದ್ಘಾಟನೆಗೊಂಡಿದ್ದ ಸಿದ್ದಿ ಸಮುದಾಯದ ಮಹಿಳಾ ಸಂಘಟನೆಯ ಹೋಂ ಸ್ಟೇ ಒಂದರಲ್ಲಿ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಇದಕ್ಕೆಲ್ಲ ಕಾರಣ ಯಲ್ಲಾಪುರದ ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಸಿದ್ದಿ ಎಂದು ಆರೋಪಿಸಿ, ಸಾರ್ವಜನಿಕ ಸ್ಥಳದಲ್ಲೇ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ರಾಜೇಶ್ವರಿ ಅವರನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ