ಕೋಲ್ಕೊತಾ: ಅಮಾಯಕ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗುವ ವಿಕೃತಕಾಮಿಗಳ ಬಗ್ಗೆ ಕೇಳಿದ್ದೇವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ದುರುಳನೊಬ್ಬ ಗರ್ಭ ಧರಿಸಿದ್ದ ಗೋವಿನ ಮೇಲೆ ಅತ್ಯಾಚಾರ (Rape Case) ಎಸಗಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ.
ದಕ್ಷಿಣ ೨೪ ಪರಗಣ ಜಿಲ್ಲೆಯ ಉತ್ತರ ಚಂದನ್‌ಪಿಡಿ ಪ್ರದೇಶದಲ್ಲಿ ಪ್ರದ್ಯುತ್ ಭುಯಿಯಾ ಎಂಬ ೨೯ ವರ್ಷದ ವ್ಯಕ್ತಿಯು ಗೋವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಗೋವು ರಕ್ತಸ್ರಾವದಿಂದ ಮೃತಪಟ್ಟಿದೆ. ಹಸುವಿನ ಮಾಲೀಕರು ನೀಡಿದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೊಟ್ಟಿಗೆಗೆ ನುಗ್ಗಿ, ಗೋವಿನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ ೩೭೭ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾಕ್‌ದ್ವಿಪ್ ಉಪ ವಿಭಾಗೀಯ ಕೋರ್ಟ್‌ಗೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಈತನನ್ನು ೧೪ ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಅಲ್ಲದೆ, ಇವನ ವಿರುದ್ಧ ಮೇಕೆ, ವಾಹನ ಹಾಗೂ ಜಮೀನಿನಲ್ಲಿ ತರಕಾರಿ ಕಳ್ಳತನ ಮಾಡಿದ ಆರೋಪಗಳೂ ಇವೆ.
ಇದನ್ನೂ ಓದಿ | ಮಗಳ ರೇಪ್ ಕೇಸ್ ತನಿಖೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯಿಂದ ಆಕೆಯ ತಾಯಿ ಮೇಲೆ ಅತ್ಯಾಚಾರ