ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (Social Media) ಸುಳ್ಳು ಸುದ್ದಿಗಳನ್ನು (Fake News) ಹಾಕಿದರೆ ಇನ್ನು ಮುಂದೆ ಸಂಕಷ್ಟ ಎದುರಾಗುವುದು ಗ್ಯಾರಂಟಿ. ಫೇಕ್ ನ್ಯೂಸ್ಗಳಿಗೆ ಕಡಿವಾಣ ಹಾಕಲು ಬೆಂಗಳೂರು ನಗರ (Bengaluru Police) ಪೊಲೀಸರು (Bengaluru City Police) ವಿಶೇಷ ಸ್ಕ್ವಾಡ್ಗಳನ್ನು (special squad) ರಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡುವ ಪೋಸ್ಟ್ಗಳಿಗೆ ಹೆಚ್ಚು ಲೈಕ್ಸ್ ಬೇಕು. ಬಹುಬೇಗ ಫೇಮಸ್ ಆಗಬೇಕು ಎಂಬ ಭ್ರಮೆಯಿಂದ ಕೆಲವರು ಸುಳ್ಳು ಪೋಸ್ಟ್ಗಳನ್ನು ಹಾಕುವುದು, ಇನ್ನೊಬ್ಬರ ಮಾನಹಾನಿ ಮಾಡುವುದು ಹೆಚ್ಚಾಗುತ್ತಿದೆ.
ಈ ಸಂಬಂಧ ಪೊಲೀಸರಿಗೆ ದೂರುಗಳು ಹೆಚ್ಚಾಗಿ ಬರುತ್ತಿವೆ. ಇಂತಹವರಿಗೆ ಬಿಸಿ ಮುಟ್ಟಿಸಲು ನಗರ ಪೊಲೀಸರು ಸಜ್ಜಾಗಿದ್ದಾರೆ. ಪ್ರತಿ ಪೊಲೀಸ್ ಠಾಣೆಯಲ್ಲೂ ಇಬ್ಬರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: Child Death : ಆಟವಾಡುತ್ತಾ ಬಾವಿಯಲ್ಲಿ ಬಿದ್ದು 3 ವರ್ಷದ ಬಾಲಕಿ ದಾರುಣ ಸಾವು
ಫ್ಯಾಕ್ಟ್ ಚೆಕಿಂಗ್
ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡಲೆಂದೇ ಆಯ್ಕೆಯಾದ ಸಿಬ್ಬಂದಿ 24 ಗಂಟೆ ಕೆಲಸ ಮಾಡುತ್ತಾರೆ. ಸುಳ್ಳು ಸುದ್ದಿಯ ಬೆನ್ನತ್ತುವ ಸಿಬ್ಬಂದಿ ಸುಳ್ಳುಕೋರರ ಪತ್ತೆ ಹಚ್ಚುವ ಕೆಲಸ ಮಾಡಲಿದ್ದಾರೆ. ಅದರಲ್ಲಿ ಬಹುಮುಖ್ಯವಾಗಿ ಕಾನೂನು ಸುವ್ಯವಸ್ಥೆ ಹದಗೆಡುವಂತೆ ಮಾಡುವ ಪೋಸ್ಟ್ಗಳು, ಧರ್ಮದ ಹಾಗೂ ಜಾತಿ ಬಗೆಗಿನ ಪೋಸ್ಟ್ಗಳ ಮೇಲೆ ಹದ್ದಿನ ಕಣ್ಣಿಡಲು ಸೂಚನೆ ನೀಡಲಾಗಿದೆ.
ಪೊಲೀಸರ ಹೆಸರಿನಲ್ಲಿ ನಕಲಿ ಖಾತೆ
ಮೊನ್ನೆಯಷ್ಟೆ ಬೆಂಗಳೂರು ನಗರ ಪೊಲೀಸರ ಹೆಸರಿನಲ್ಲಿ ನಕಲಿ ಖಾತೆಯನ್ನು ಸೃಷ್ಟಿಸಿ ಕ್ರಿಕೆಟಿಗರ ಬಗ್ಗೆ ಕೆಟ್ಟದಾಗಿ ಪೋಸ್ಟ್ ಹಾಕಿದ್ದರು. ತನಿಖೆಯನ್ನು ಕೈಕೊಂಡು ಚೆನ್ನೈನಲ್ಲಿ ಆರೋಪಿಯನ್ನು ಬಂಧಿಸಲಾಗಿತ್ತು. ಇಂತಹ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆ ಕ್ರಮಕೈಗೊಂಡಿರುವ ಪೊಲೀಸರು ಪ್ರತಿ ಠಾಣೆಯಲ್ಲಿ ಹ್ಯಾಂಡ್ಲರ್ ಆಗಿ ನೇಮಕ ಮಾಡಿದ್ದಾರೆ.
ಅಷ್ಟೆ ಅಲ್ಲದೆ ಕಮೀಷನರ್ ಕಚೇರಿಯಲ್ಲಿ ತರಬೇತಿ ಹೊಂದಿದ ಒಂದು ದೊಡ್ಡ ತಂಡವೇ ಕೆಲಸ ನಿರ್ವಹಿಸಲಿದೆ. ಆಧುನಿಕ ತಂತ್ರಜ್ಜಾನವನ್ನು ಬಳಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಿದ್ದತೆ ನಡೆಸಿದ್ದಾರೆ. ಇನ್ನು ಫೇಕ್ ನ್ಯೂಸ್ಗಳನ್ನು ಫ್ಯಾಕ್ಟ್ ಚೆಕ್ ಮಾಡುವ ಮೂಲಕ ಸತ್ಯವನ್ನು ಜನರಿಗೆ ಮನವರಿಕೆ ಮಾಡುವ ಬಗ್ಗೆ ಕೂಡ ಈಗಾಗಲೆ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ.
ಫೇಕ್ ನ್ಯೂಸ್ಗಳ ಬಗ್ಗೆ ಅಷ್ಟಾಗಿ ಬಿಗಿ ಕಾನೂನುಗಳಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯಾರೇ ಸುಳ್ಳು ಸುದ್ದಿ ಹರಡಿದರೂ ಅವರನ್ನು ಐಪಿಸಿ ಸೆಕ್ಷನ್ ಅಡಿ ಅವರನ್ನ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ