Site icon Vistara News

ಪೊಲೀಸ್‌ರಿಂದ ತಪ್ಪಿಸಿಕೊಳ್ಳಲು ಹೋಗಿ ಕೈ-ಕಾಲು ಮುರಿದುಕೊಂಡ ಬಿಜೆಪಿ ಕಾರ್ಯಕರ್ತ!

BJP worker mahantesh

ಕಲಬುರಗಿ‌: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಬಿಜೆಪಿ ಕಾರ್ಯಕರ್ತನೊಬ್ಬ ಕೈ-ಕಾಲು ಮುರಿದುಕೊಂಡಿರುವ ಘಟನೆ ನಡೆದಿದೆ. ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದ ಮಹಾಂತೇಶ್ ಎಸ್ಕೇಪ್ ಆಗಲು ಯತ್ನಿಸಿದ (escape from police) ಬಿಜೆಪಿ ಕಾರ್ಯಕರ್ತನಾಗಿದ್ದಾನೆ.

ಅಂದಹಾಗೇ ಬಿಜೆಪಿ ಕಾರ್ಯಕರ್ತ ಮಹಾಂತೇಶ್ ವಿದ್ಯುತ್ ಬಿಲ್ ವಿಚಾರಕ್ಕೆ ಜೆಸ್ಕಾಂ ಸಿಬ್ಬಂದಿ ಜತೆ ಗಲಾಟೆ ಮಾಡಿಕೊಂಡಿದ್ದ. ಒಂದು ತಿಂಗಳ ವಿದ್ಯುತ್ ಬಿಲ್ 8 ಸಾವಿರ ಬಂದಿರುವುದನ್ನು ಪ್ರಶ್ನಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಈ ವೇಳೆ ಜೆಸ್ಕಾಂ ಎಇಇ ಚಿದಾನಂದ ಹಾಗೂ ಮಹಾಂತೇಶ್‌ ಮಧ್ಯೆ ಗಲಾಟೆ ನಡೆದಿತ್ತು.

ಇದನ್ನೂ ಓದಿ: Ramanagar News : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೂವಿನ ವ್ಯಾಪಾರಿ!

ಈ ಸಂಬಂಧ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತನ ವಿರುದ್ಧ ದೂರು ದಾಖಲಾಗಿತ್ತು. ಅಫಜಲಪುರ ಪೊಲೀಸರು ದೂರು ದಾಖಲಿಸಿಕೊಂಡು ಮಹಾಂತೇಶ್‌ನನ್ನು ಬಂಧಿಸಿ, ಕಲಬುರಗಿಗೆ ಕರೆ ತಂದಿದ್ದರು.

ಮಾರ್ಗ ಮಧ್ಯೆ ಊಟಕ್ಕಾಗಿ ಹೋಟೆಲ್‌ಗೆ ಬಂದಾಗ, ಮಹಾಂತೇಶ್‌ ಎಸ್ಕೇಪ್‌ ಆಗಲು ಪ್ಲ್ಯಾನ್‌ ಮಾಡಿದ್ದಾನೆ. ಹೋಟೆಲ್‌ನ ಅಡುಗೆ ರೂಮಿನಿಂದ ಪರಾರಿ ಆಗಲು ಯತ್ನಿಸಿದ್ದಾನೆ. ಅಡುಗೆ ಮನೆಯಿಂದ ಹಾರಿ ಪರಾರಿ ಆಗುವಾಗ 2ನೇ ಮಹಡಿಯಿಂದ ಬಿದ್ದು ಕೈ- ಕಾಲು ಮುರಿದುಕೊಂಡಿದ್ದಾನೆ.

ಸದ್ಯ ಪೊಲೀಸರು ಗಾಯಾಳು ಮಹಾಂತೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪರಾರಿಯಾಗಲು ಯತ್ನಿಸಿದ ಸಂಬಂಧವು ಪ್ರಕರಣ ದಾಖಲಿಸುವ ಸಾಧ್ಯತೆ ಇದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version