ದೆಹಲಿಯಲ್ಲಿ 25ವರ್ಷದ ಯುವತಿಯೊಬ್ಬಳ ಮೃತದೇಹ ಫ್ರಿಜ್ನಲ್ಲಿ ಪತ್ತೆಯಾಗಿದೆ. ಲಿವ್ ಇನ್ ಪಾರ್ಟನರ್ ಅಫ್ತಾಬ್ ನಿಂದ ಹತ್ಯೆಗೀಡಾದ ಶ್ರದ್ಧಾ ವಾಳ್ಕರ್ ಕೊಲೆಯನ್ನು ನೆನಪಿಸುವಂಥ ಕೇಸ್ ಇದು. ದಕ್ಷಿಣ ದೆಹಲಿಯ ನಜಾಫ್ಗಡ್ನಲ್ಲಿರುವ ಮಿತ್ರಾನ್ ಎಂಬ ಹಳ್ಳಿಯ ಹೊರವಲಯದಲ್ಲಿ ಇರುವ ಡಾಬಾದಲ್ಲಿನ ಫ್ರಿಜ್ನಲ್ಲಿ ಮಹಿಳೆಯ ಮೃತದೇಹ ಸಿಕ್ಕಿದ್ದು, ಈಕೆಯ ಉತ್ತಮನಗರದವಳು ಎಂಬುದು ಗೊತ್ತಾಗಿದೆ.ಈ ಪ್ರಕರಣದ ಆರೋಪಿ ಹೆಸರು ಸಾಹಿಲ್ ಗೆಹ್ಲೋಟ್ ಎನ್ನಲಾಗಿದ್ದು, ಈತ ಡಾಬಾದ ಮಾಲೀಕ. ಸದ್ಯ ಈತನನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಸದ್ಯ ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ದ್ವಾರಕಾದ ಹೆಚ್ಚುವರಿ ಡಿಸಿಪಿ ವಿಕ್ರಮ್ ಸಿಂಗ್ ಅವರು ಮಾಹಿತಿ ನೀಡಿದ್ದು, ಸಾಹಿಲ್ ಗೆಹ್ಲೋಟ್ ಮತ್ತು ಈಗ ಮೃತಪಟ್ಟ ಮಹಿಳೆ ನಡುವೆ ಸಂಬಂಧವಿತ್ತು. ಪ್ರೀತಿ-ಪ್ರೇಮ ಎಂದು ಜತೆಗಿದ್ದು ಈಗ ಸಾಹಿಲ್ ಗೆಹ್ಲೋಟ್ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ. ಇದು ಗೊತ್ತಾದ ಯುವತಿ ಗಲಾಟೆ ಮಾಡಿದ್ದಳು. ತನ್ನನ್ನೇ ಮದುವೆಯಾಗುವಂತೆ ಆತನ ಬಳಿ ಜಗಳ ಮಾಡಿದ್ದಳು. ಇದರಿಂದ ಕೋಪಗೊಂಡ ಸಾಹಿಲ್ ಆಕೆಯನ್ನು ಕೊಂದು, ತನ್ನ ಡಾಬಾದ ಫ್ರಿಜ್ನಲ್ಲಿ ಇಟ್ಟಿದ್ದಾನೆ. ಎರಡು-ಮೂರು ದಿನಗಳ ಹಿಂದೆಯೇ ಘಟನೆ ನಡೆದಿದೆ’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Shraddha Murder Case | ಶ್ರದ್ಧಾ ವಾಳ್ಕರ್ ಹತ್ಯೆ ಕೇಸ್ ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್
ಇತ್ತೀಚೆಗೆ ದೆಹಲಿಯಲ್ಲಿ ಶ್ರದ್ಧಾ ವಾಳ್ಕರ್ ತನ್ನ ಪ್ರಿಯತಮ ಅಫ್ತಾಬ್ನಿಂದಲೇ ಹತ್ಯೆಯಾಗಿದ್ದಳು. ಇವಳನ್ನು ಕೊಂದಿದ್ದ ಅಫ್ತಾಬ್ ಮೃತದೇಹವನ್ನು 35 ಪೀಸ್ಗಳಾಗಿ ಮಾಡಿ, ಫ್ರಿಜ್ನಲ್ಲಿ ಬಚ್ಚಿಟ್ಟಿದ್ದ. ಬಳಿಕ ಪ್ರತಿದಿನ ಒಂದೊಂದೇ ಅಂಗವನ್ನು ತೆಗೆದುಕೊಂಡು ಹೋಗಿ, ಎಸೆದಿದ್ದ. ಆ ಪ್ರಕರಣದ ಕೇಸ್ ಇನ್ನೂ ನಡೆಯುತ್ತಿದೆ.