Site icon Vistara News

Bomb Threat: ನಗರದಲ್ಲಿ ಮತ್ತೆ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ

Bomb Threat

ಬೆಂಗಳೂರು: ಕೆಲವು ತಿಂಗಳ ಹಿಂದೆ ಬೆಂಗಳೂರು ನಗರದ (bengaluru city) ಕೆಲವು ಖಾಸಗಿ ಶಾಲೆಗಳಿಗೆ (Private schools) ಬಾಂಬ್ ಬೆದರಿಕೆ (Bomb Threat) ಬಂದಿತ್ತು. ಇದೀಗ ಮತ್ತೆ ದುಷ್ಕರ್ಮಿಗಳು ಇಮೇಲ್ ಮೂಲಕ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಹಾಕಿರುವುದಾಗಿ ಗೋವಿಂದಪುರ ಠಾಣೆಯಲ್ಲಿ (govindapura station) ಪ್ರಕರಣ ದಾಖಲಿಸಲಾಗಿದೆ.

ಗೋವಿಂದಪುರ ಠಾಣಾ ವ್ಯಾಪ್ತಿಯ ಇಂಡಿಯನ್ ಪಬ್ಲಿಕ್ ಸ್ಕೂಲ್ ಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ. ಬೆಳಗ್ಗೆ 6.57ರ ಸುಮಾರಿಗೆ ಬಂದಿರುವ ಇಮೇಲ್ ನಲ್ಲಿ ಶಾಲೆ ಆವರಣದಲ್ಲಿ ಐದು ಪೈಪ್ ಲೈನ್ ಬಾಂಬ್ ಗಳನ್ನು ಇಡಲಾಗಿದೆ ಎಂದು ದುಷ್ಕರ್ಮಿಗಳು ಹೇಳಿದ್ದಾರೆ.

Father Kodachi ಹೆಸರಿನ coldghost456@gmail.com askbirnorth@tipsglobal.net ಎಂಬ ಐಡಿಯಿಂದ ಇಮೇಲ್ ಬೆದರಿಕೆ ಬಂದಿದ್ದು, ಮಧ್ಯಾಹ್ನ 1.30ಕ್ಕೆ ಬ್ಲಾಸ್ಟ್ ಆಗ ಆಗಲಿದೆ ಎಂದು ಮೇಲ್ ನಲ್ಲಿ ತಿಳಿಸಲಾಗಿದೆ.

ಮಾಹಿತಿ ಬಂದ ಕೂಡಲೇ ಶಾಲೆಗೆ ಹೋಗಿ ಗೋವಿಂದಪುರ ಪೊಲೀಸರು, ಬಾಂಬ್ ಸ್ಕ್ವಾಡ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಆತಂಕಕಾರಿ ವಿಚಾರ ಪತ್ತೆಯಾಗಿಲ್ಲ.
ಸದ್ಯ ಘಟನೆ ಸಂಬಂಧ ಶಾಲೆಯ ಆಡಳಿತಾಧಿಕಾರಿ ನೀಡಿರುವ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್‌; ನಿರೀಕ್ಷಣಾ ಜಾಮೀನು ಅರ್ಜಿಗಳ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ

Bomb Threat


ವಂಡರ್‌ ಲಾ ಅಮ್ಯುಸ್ಮೆಂಟ್ ಪಾರ್ಕ್‌ಗೆ ಬಾಂಬ್‌ ಬೆದರಿಕೆ

ಇತ್ತೀಚೆಗಷ್ಟೇ ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ವಂಡರ್‌ ಲಾ ಅಮ್ಯುಸ್ಮೆಂಟ್ ಪಾರ್ಕ್‌ಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿತ್ತು. ಇಂಗ್ಲಿಷ್ ಬಳಸಿ‌ ಉರ್ದು ಭಾಷೆಯಲ್ಲಿ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿತ್ತು.

ವಂಡರ್‌ ಲಾ ಅಮ್ಯೂಸ್ಮೆಂಟ್ ಪಾರ್ಕ್ ಆಡಳಿತ ಹಾಗೂ ಸಿಬ್ಬಂದಿಗೆ ಇ-ಮೇಲ್ ಬಂದಿದೆ. ಸಂಡೇ ನಿನ್ನ ಹಾಗೂ ವಂಡರ್‌ ಲಾ ಪಾರ್ಕ್‌ಗೆ ಮೂರು ಬಾಂಬ್ ಸಿಡಿಸುತ್ತೇವೆ ಇನ್ಶಾಅಲ್ಲಾ..! ಕನ್ನಡದ ಕಾಫೀರರು ಮುಸ್ಲಿಂರ ಮೇಲೆ ಮಾಡುತ್ತಿರುವ ದಬ್ಬಾಳಿಕೆಯ ಶಿಕ್ಷೆ ಸಿಗಲಿದೆ ಎಂದು ಸಂದೇಶ ಕಳಿಸಿದ್ದರು.

ಕಳೆದ ಆಗಸ್ಟ್ ‌3ರಂದು ಹುಸಿ ಬಾಂಬ್ ಬೆದರಿಕೆ ಬಂದಿದ್ದು, ‌ತಡವಾಗಿ ಬೆಳಕಿಗೆ ಬಂದಿದೆ. ಮೊಹಮ್ಮದ್ ಇರ್ಫಾನ್ ಜಿಹಾದಿ ಎಂಬ ಹೆಸರಿನ‌ ಇ -ಮೇಲ್‌ನಿಂದ ಬಂದಿದೆ. ಬಿಡದಿ ಪೊಲೀಸರು ಇ ಮೇಲ್ ಮಾಡಿದ ಆರೋಪಿಯನ್ನು ಹುಡುಕುತ್ತಿದ್ದಾರೆ. ಬಾಂಬ್ ಬೆದರಿಕೆ ಬಳಿಕ‌ ಇಡೀ ಪಾರ್ಕ್ ಪರಿಶೀಲನೆ ಮಾಡಲಾಗಿದೆ.

Exit mobile version