ಬೆಂಗಳೂರು: ಇಲ್ಲಿನ ಎಲೆಕ್ಟ್ರಾನಿಕ್ ಸಿಟಿ ಟಿ.ಸಿ.ಎಸ್ ಕಂಪನಿಯಲ್ಲಿ ಕೆಲ ಹೊತ್ತು ಆತಂಕದ ವಾತಾವರಣವೇ ಸೃಷ್ಟಿಯಾಗಿತ್ತು. ಕಂಪನಿಯ ಬಿ.ಬ್ಲಾಕ್ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆಯೊಂದು (Bomb threat) ಬಂದಿತ್ತು. ಕರೆ ಬರುತ್ತಿದ್ದಂತೆ ಕಂಪನಿಯೊಳಗೆ ಇದ್ದ ಎಲ್ಲರೂ ಹೊರಗೆ ಓಡಿ ಬಂದಿದ್ದರು.
ಬಾಂಬ್ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು, ಬಾಂಬ್ ನಿಷ್ಕ್ರಿಯದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೀಗ ಬೆಳ್ಳಂ ಬೆಳಗ್ಗೆ ಆತಂಕ ಸೃಷ್ಟಿಸಿದ ಬಾಂಬ್ ಕರೆಯು ಹುಸಿ ಎಂದು ತಿಳಿದು ಬಂದಿದೆ. ಇದಕ್ಕೆಲ್ಲ ಕಾರಣವಾಗಿದ್ದು ಕುಡಿದ ಮತ್ತಿನಲ್ಲಿ ಯುವತಿಯೊಬ್ಬಳು ಮಾಡಿದ ಫೋನ್ ಕಾಲ್ ಎನ್ನಲಾಗಿದೆ.
ಯಾವುದೇ ಕಂಪನಿಯಿಂದ ಏಕಾಏಕಿ ವಜಾಗೊಂಡರೆ, ಆ ಉದ್ಯೋಗಿಗಳು ಏನು ಮಾಡಬಹುದು? ದಿಢೀರನೆ ಉದ್ಯೋಗದಿಂದ ಕಿತ್ತುಹಾಕಿದ್ದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಬಹುದು. ಕಂಪನಿ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬಹುದು. ನಮಗೆ ಇಷ್ಟು ತಿಂಗಳ ಸಂಬಳ ಬೇಕು ಎಂದು ಪಟ್ಟು ಹಿಡಿಯಬಹುದು. ಆದರೆ, ಬೆಂಗಳೂರಿನಲ್ಲಿ (Bengaluru) ಯುವತಿಯೊಬ್ಬಳು ಕೆಲಸದಿಂದ ತೆಗೆದುಹಾಕಿದ್ದಕ್ಕೆ ಕಂಪನಿಗೇ (Company) ಹುಸಿ ಬಾಂಬ್ ಕರೆ ಮಾಡಿ ಆತಂಕವನ್ನೇ ಸೃಷ್ಟಿಸಿದ್ದಳು.
ಬೆಳಗಾವಿ ಮೂಲದ ಯುವತಿಯೊಬ್ಬಳು ಕರೆ ಮಾಡಿ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ಟಿ.ಸಿ.ಎಸ್ ಕಂಪನಿಯ ಚಾಲಕನೊಬ್ಬನಿಗೆ ಬಿ- ಬ್ಲಾಕ್ನಲ್ಲಿ ಬಾಂಬ್ ಇದೆ ಎಂದು ಕುಡಿದ ಮತ್ತಿನಲ್ಲಿ ಕರೆ ಮಾಡಿದ್ದಾಳೆ. ಪೊಲೀಸರ ತಪಾಸಣೆ ವೇಳೆ ಯುವತಿ ಕರೆ ಮಾಡಿರುವುದು ಕನ್ಫರ್ಮ್ ಆಗಿದೆ. ಸದ್ಯ ಯುವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Naxal Activity : ವಯನಾಡಿನಲ್ಲಿ ನಕ್ಸಲ್ ಚಟುವಟಿಕೆ; ಕೇರಳ-ಕರ್ನಾಟಕ ಗಡಿಯಲ್ಲಿ ಕಟ್ಟೆಚ್ಚರ
ಶಕ್ತಿ ಯೋಜನೆ ಎಫೆಕ್ಟ್; ಬಸ್ ಸೀಟ್ಗಾಗಿ ಬಿಗ್ ಕಿತ್ತಾಟ; ಚಪ್ಪಲಿಯಿಂದ ಹೊಡೆದಾಟ
ಶಕ್ತಿ ಯೋಜನೆ (Shakti Scheme) ಯಿಂದ ಮಹಿಳೆಯರ ಓಡಾಟ (Free Bus service), ಆ ಮೂಲಕ ಸಬಲೀಕರಣವಾಗಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆ. ಅದರ ನಡುವೆಯೇ ಬಸ್ನಲ್ಲಿ ಸೀಟ್ಗಾಗಿ ಮಹಿಳೆಯರ (Fight between women in KSRTC Bus) ನಡುವೆ ವಿಪರೀತ ಕಾದಾಟವೂ ಜೋರಾಗಿದೆ. ಬೆಳಗಾವಿಯಲ್ಲಿ ಸರ್ಕಾರಿ ಬಸ್ನಲ್ಲಿ (Government bus) ಸೀಟ್ಗಾಗಿ ಇಬ್ಬರು ಮಹಿಳೆಯರ ನಡುವೆ ಶುರುವಾದ ಜಗಳ ಕೊನೆಗೆ ಒಬ್ಬ ಬಾಲಕಿಯ ಎಂಟ್ರಿ, ಆಕೆಯ ಮೇಲೆ ಚಪ್ಪಲಿ ಏಟಿನ ತಿರುವಿನೊಂದಿಗೆ ಮುನ್ನುಗ್ಗಿತ್ತು.
ಅದು ಹಿಡಕಲ್ ಡ್ಯಾಂ – ಬೆಳಗಾವಿ ಮಾರ್ಗದ ಬಸ್ನಲ್ಲಿ ನಡೆದ ಹೊಡೆದಾಟದ ದೃಶ್ಯ ಈಗ ವೈರಲ್ ಆಗಿದೆ. ಇದರಲ್ಲಿ ಸೀಟ್ಗಾಗಿ ಇಬ್ಬರು ಮಹಿಳೆಯರ ನಡುವೆ ದೊಡ್ಡ ಕಿತ್ತಾಟವೇ ನಡೆಯುತ್ತದೆ. ಮಧ್ಯೆ ಒಬ್ಬ ಬಾಲಕಿ ಬರುತ್ತಾಳೆ, ಆಗ ಅವಳಿಗೆ ಚಪ್ಪಲಿ ಏಟು ಬೀಳುತ್ತದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ ಬಳಿ ಈ ಘಟನೆ ನಡೆದಿದೆ. ಅರಂಭದಲ್ಲಿ ಸೀಟಿನ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಮಹಿಳೆಯರ ನಡುವೆ ಮಾತಿಗೆ ಮಾತು ಬೆಳೆಯುತ್ತದೆ. ಕೊನೆಗೆ ಅದು ಜೋರಾಗಿ ಸೀಟಿನಲ್ಲಿ ಕುಳಿತ ಮಹಿಳೆ ನಿಂತಿದ್ದ ಮಹಿಳೆಗೆ ಹಲ್ಲೆ ಮಾಡುತ್ತಾಳೆ. ಆಗ ಆಕೆಯ ಜತೆಗಿದ್ದ ಸುಮಾರು 10 ವರ್ಷದ ಬಾಲಕಿ ಸೀಟಿನಲ್ಲಿ ಕುಳಿತ ಮಹಿಳೆಯನ್ನು ತಡೆಯಲು ಮುಂದಾಗುತ್ತಾಳೆ. ಮತ್ತು ಆಕೆ ಮೊದಲು ಹೊಡೆತ ತಿಂದ ಮಹಿಳೆಗೆ ರಕ್ಷಣೆಯಾಗಿ ನಿಲ್ಲುತ್ತಾಳೆ.
ಈ ನಡುವೆ, ಆ ಹುಡುಗಿ ಮತ್ತು ಸೀಟಿನಲ್ಲಿ ಕುಳಿತ ಮಹಿಳೆಯ ನಡುವೆ ಏನೋ ಮಾತುಕತೆ ನಡೆಯುತ್ತದೆ. ಆಗ ಸೀಟಿನಲ್ಲಿ ಕುಳಿತ ಮಹಿಳೆ ತನ್ನ ಚಪ್ಪಲಿಯನ್ನು ತೆಗೆದು ಬಾಲಕಿಯ ಮೇಲೆ ಹಲ್ಲೆ ಮಾಡುತ್ತಾಳೆ. ಪಕ್ಕದಲ್ಲಿ ಕುಳಿತಾಕೆ ಹಿಡಿದುಕೊಂಡರೂ ಬಿಡಿಸಿಕೊಂಡು ಹಲ್ಲೆ ಮಾಡುತ್ತಾಳೆ. ಬಾಲಕಿ ಜೋರಾಗಿ ಅಳುತ್ತಾ ರಕ್ಷಣೆ ಕೋರುತ್ತಾಳೆ.
ಆಗ ಎದುರಿನಿಂದ ಬರುವ ಒಬ್ಬ ಪುರುಷ ಮಹಿಳೆಯ ಕೈಯಿಂದ ಚಪ್ಪಲಿಯನ್ನು ಕಿತ್ತುಕೊಂಡು ಆಕೆಯ ಬೆನ್ನಿಗೂ ಒಂದು ಬಾರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸಿದರು. ಚಪ್ಪಲಿಯೇಟು ತಿಂದ ಮಹಿಳೆ ಮತ್ತು ಬಾಲಕಿ ಬೊಬ್ಬೆ ಹಾಕಿ ಕಣ್ಣೀರು ಸುರಿಸಿದರು. ಇದು ನಿನ್ನ ಬಸ್ಸಲ್ಲ, ನಿನ್ನ ಬಸ್ಸಲ್ಲ ಎಂಬ ಜಗಳ ಜೋರಾಗಿ ನಡೆಯಿತು.ಅಂತಿಮವಾಗಿ ಈ ಪ್ರಕರಣ ಏನಾಯಿತು ಎನ್ನುವುದು ವಿಡಿಯೊದಲ್ಲಿಲ್ಲ. ಆದರೆ, ಜೋರಾದ ಬೈಗುಳ, ಆಕ್ರೋಶಗಳು ಅಲ್ಲಿ ಕೇಳಿಬಂದವು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ.ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ