Site icon Vistara News

Comedian Chandraprabha : ಅಪಘಾತ ಆದ್ಮೆಲೆ ಭಯಪಟ್ಟು ಹೊರಟು ಹೋಗಿಬಿಟ್ಟೆ ತಪ್ಪಾಯ್ತು; ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ

Comedian Chandraprabha Facing hit and run case

ಚಿಕ್ಕಮಗಳೂರು: ಕಳೆದ ಮೂರು ದಿನದ ಹಿಂದೆ ಅಪಘಾತ (Road Accident) ಮಾಡಿ ಪರಾರಿ ಆಗಿದ್ದ ಹಾಸ್ಯನಟ ಚಂದ್ರಪ್ರಭ (Comedian Chandraprabha) ತಪ್ಪೊಪ್ಪಿಕೊಂಡಿದ್ದಾರೆ. ಚಂದ್ರಪ್ರಭ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದು, ಶುಕ್ರವಾರ ಅವರ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸೆ. 8ರಂದು ಕಾಮಿಡಿ ನಟ ಚಂದ್ರಪ್ರಭಾ ಚಿಕ್ಕಮಗಳೂರು ನಗರ ಸಂಚಾರಿ ಠಾಣೆಗೆ ವಿಚಾರಣೆಗೆ ಹಾಜರಾದರು.

ಒತ್ತಡಕ್ಕೆ ಹೀಗೆ ಮಾಡಿಬಿಟ್ಟೆ ಎಂದು ಕಣ್ಣೀರು

ಠಾಣೆಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ಹಾಸ್ಯನಟ ಚಂದ್ರಪ್ರಭಾ ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. ಆ ದಿನ ಕಾರ್ಯಕ್ರಮದ ನಿಮಿತ್ತ ನಾನು ನನ್ನ ಸ್ನೇಹಿತ ಕಾರಿನಲ್ಲಿ ಹೊರಟಿದ್ದವಿ. ಈ ವೇಳೆ ಬೈಕ್‌ಗೆ ಕಾರು ಡಿಕ್ಕಿಯಾಗಿತ್ತು. ಬಳಿಕ ಭಯಕ್ಕೆ ಆತನನ್ನು ನನ್ನ ಸ್ನೇಹಿತ ಆಟೋದಲ್ಲಿ ಆಸ್ಪತ್ರೆಗೆ ಕರೆದುಹೋದರು. ಆದರೆ ನಾವು ಆಸ್ಪತ್ರೆಗೆ ದಾಖಲು ಮಾಡಲಿಲ್ಲ. ಅಪಘಾತ ಬಳಿಕ ಭಯಕ್ಕೆ, ಕಾರ್ಯಕ್ರಮವೊಂದರ ಒತ್ತಡಕ್ಕೆ ಹೊರಟು ಹೋದೆ. ನಾನು ಮಾಡಿದ್ದು ತಪ್ಪು, ಎಲ್ಲರಿಗೂ ಕ್ಷಮೆ ಕೇಳುತ್ತೇನೆ.

ಠಾಣೆಗೆ ಹಾಜರಾದ ಹಾಸ್ಯ ನಟ ಚಂದ್ರಪ್ರಭ

ಗಾಯಾಳು ಕುಡಿದಿದ್ದ ಎಂದಿದ್ದೆ ಕ್ಷಮಿಸಿ, ಆತ ಕುಡಿದಿರಲಿಲ್ಲ. ಅಪಘಾತವಾದ ಯುವಕನ ಯೋಗಕ್ಷೇಮದ ಬಗ್ಗೆ ವಿಚಾರಿಸಬೇಕಿತ್ತು. ಆಸ್ಪತ್ರೆಗೆ ಹೋಗಿ ಅವರ ಯೋಗ ಕ್ಷೇಮ ವಿಚಾರಿ, ನನ್ನ ಕೈಯಲ್ಲಿ ಆಗುವ ಸಹಾಯ ಮಾಡುತ್ತೇನೆ. ನಾನು ಬಡವ ನನ್ನ ತಂದೆ ಮೃತಪಟ್ಟು 11 ವರ್ಷವಾಗಿದೆ. ನಾವಿಬ್ಬರೂ ದಲಿತರು ಕ್ಷಮಿಸಿಬಿಡಿ ಎಂದು ಚಿಕ್ಕಮಗಳೂರು ಸಂಚಾರಿ ಠಾಣೆ ಮುಂಭಾಗ ಪ್ರತಿಕ್ರಿಯಿಸಿದರು.

ಸಾವು ಬದುಕಿನ ಮಧ್ಯೆ ಗಾಯಾಳು ಹೋರಾಟ

ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳು ಮಾಲ್ತೇಶ್‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತವಾಗಿ ಮೂರು ದಿನವಾದರೂ ತಿರುಗಿ ನೋಡಿಲ್ಲ ಎಂದು ಚಂದ್ರಪ್ರಭಾ ವಿರುದ್ಧ ಮಾಲ್ತೇಶ್ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ನಮ್ಮ ಕುಟುಂಬಕ್ಕೆ ನಮ್ಮ ಮಗನೇ ಆಧಾರವಾಗಿದ್ದ, ಈಗ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ. ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಪೊಲೀಸರು ಸೂಕ್ತ ತನಿಖೆ ನಡೆಸಿ, ನ್ಯಾಯ ಕೊಡಿಸಬೇಕು ಎಂದು ಪೋಷಕರು ಕಣ್ಣೀರಿಟ್ಟು ಮನವಿ ಮಾಡಿದ್ದಾರೆ.

ಗಾಯಾಳು ಮಾಲ್ತೇಶ್ ಅಣ್ಣ ರಘು ಪ್ರತಿಕ್ರಿಯಿಸಿದ್ದು, ನನ್ನ ತಮ್ಮನಿಗೆ ಕುಡಿಯುವ ಅಭ್ಯಾಸವೇ ಇಲ್ಲ. ಆದರೆ ಅವನ್ಯಾರೋ ಚಂದ್ರಪ್ರಭಾ ಕುಡಿದು ಗಾಡಿ ಓಡಿಸಿರಬೇಕು ಎಂದು ಹೇಳಿಕೆ ನೀಡಿದ್ದಾನೆ. ರಸ್ತೆ ಅಪಘಾತ ಮಾಡಿ ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ಸೇರಿಸಿದ್ದರೆ ನಾವು ಬರುವವರೆಗೆ ಇರಬಹುದಿತ್ತು, ಯಾಕೆ ಓಡಿಹೋದರು. ಆಸ್ಪತ್ರೆಗೆ ಸೇರಿಸಿದ್ದು ಅವರಲ್ಲ, ಸ್ಥಳೀಯರು ಸೇರಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version