Site icon Vistara News

Mukhtar Ansari | ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿಗೆ 7 ವರ್ಷ ಜೈಲು, ಏನಿದು ಪ್ರಕರಣ?

Ansari

ಲಖನೌ: ಜೈಲರ್‌ ಒಬ್ಬರಿಗೆ ಪಿಸ್ತೂಲು ತೋರಿಸಿ ಬೆದರಿಕೆ ಹಾಕಿದ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಾಜಿ ಶಾಸಕ ಮುಖ್ತಾರ್‌ ಅನ್ಸಾರಿ (Mukhtar Ansari) ಅವರಿಗೆ ಅಲಹಾಬಾದ್‌ ಹೈಕೋರ್ಟ್‌ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆ ಮೂಲಕ ೧೯ ವರ್ಷದ ಪ್ರಕರಣವೊಂದು ಇತ್ಯರ್ಥವಾದಂತಾಗಿದೆ.

ಐಪಿಸಿ ಸೆಕ್ಷನ್‌ ೩೫೩ (ಸಾರ್ವಜನಿಕ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ), ೫೦೪ (ಉದ್ದೇಶಪೂರ್ವಕವಾಗಿ ಶಾಂತಿಗೆ ಭಂಗ ತರುವುದು ಹಾಗೂ ಅವಮಾನಿಸುವುದು) ಹಾಗೂ ೫೦೬ (ಕ್ರಿಮಿನಲ್‌ ಬೆದರಿಕೆ) ಅಡಿಯಲ್ಲಿ ಏಳು ವರ್ಷ ಶಿಕ್ಷೆ ಹಾಗೂ ೨೫ ಸಾವಿರ ರೂ. ದಂಡ ವಿಧಿಸಿ ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ಆದೇಶ ಹೊರಡಿಸಿದ್ದಾರೆ.

ಮುಖ್ತಾರ್‌ ಅನ್ಸಾರಿ ಮೊದಲು ರೌಡಿಯಾಗಿದ್ದರು. ಇದಾದ ಬಳಿಕ ಅವರು ರಾಜಕೀಯ ಸೇರಿದ್ದರು. ೨೦೦೩ರಲ್ಲಿ ಲಖನೌ ಜಿಲ್ಲಾ ಕಾರಾಗೃಹದ ಜೈಲರ್ ಎಸ್‌.ಕೆ.ಅವಸ್ಥಿ ಅವರಿಗೆ ಅನ್ಸಾರಿ ಬೆದರಿಕೆ ಹಾಕಿದ ಪ್ರಕರಣ ಇದಾಗಿದೆ. ಅನ್ಸಾರಿ ಅವರನ್ನು ಭೇಟಿಯಾಗಲು ಬಂದವರ ತಪಾಸಣೆಗೆ ಆದೇಶಿಸಿದ ಕಾರಣ “ನನಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ” ಎಂದು ಅವಸ್ಥಿ ಎಫ್‌ಐಆರ್‌ ದಾಖಲಿಸಿದ್ದರು.

ಇದನ್ನೂ ಓದಿ | ಪುನರ್ವಸತಿ ನೀಡಲು ಲಂಚ ಪಡೆದ ಆರೋಪ; ನಾಲ್ವರು ಅಧಿಕಾರಿಗಳಿಗೆ 2 ವರ್ಷ ಜೈಲುಶಿಕ್ಷೆ, ₹70 ಸಾವಿರ ದಂಡ

Exit mobile version